ಜಗತ್ತು ಸಣ್ಣದಾಗುತ್ತಿದೆ ಜೊತೆಗೆ ದೊಡ್ಡವರಲ್ಲಿ ಸಣ್ಣತನ ಹೆಚ್ಚಾಗುತ್ತಿವೆ – ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು.
ಗಜೇಂದ್ರಗಡದಲ್ಲಿ ಬಸವ ಪುರಾಣ ಕಾರ್ಯಕ್ರಮ ಪ್ರಯುಕ್ತ ಪತ್ರಿಕಾಗೋಷ್ಠಿ.
ಜಗತ್ತು ಸಣ್ಣದಾಗುತ್ತಿದೆ ಜೊತೆಗೆ ದೊಡ್ಡವರಲ್ಲಿ ಸಣ್ಣತನ ಹೆಚ್ಚಾಗುತ್ತಿವೆ – ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು.
ಗಜೇಂದ್ರಗಡ : ಸತ್ಯಮಿಥ್ಯ (ನ -04).
ಜಗತ್ತು ಸಣ್ಣದಾಗುತ್ತಿದೆ ಜೊತೆಗೆ ದೊಡ್ಡವರಲ್ಲಿ ಸಣ್ಣತನ ಹೆಚ್ಚಾಗುತ್ತಿವೆ. ದೊಡ್ಡವರ ಸಣ್ಣತನ ವಿಚಿತ್ರವಾಗಿದ್ದು ಅವುಗಳಿಗೆ ಬಸವ ಪುರಾಣವೇ ಪರಿಹಾರವಾಗಲಿದೆ. ಸಮಾಜದ ಓರೆ ಕೋರೆಗಳನ್ನು ತಿದ್ದಿ ಪರಸ್ಪರದಲ್ಲಿ ಪ್ರೀತಿ ವಿಶ್ವಾಸ ಮೂಡಿಸುವ ಸಂಕಲ್ಪದೊಂದಿಗೆ ಬಸವ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಲಕೇರೆ ಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ನುಡಿದರು.
ಅವರು ನವಂಬರ್ 25 ರಿಂದ ಡಿಸೆಂಬರ್ 26 ರವರೆಗೆ ನಡೆಯುವ ಬಸವ ಪುರಾಣ ಕಾರ್ಯಕ್ರಮದ ಪೂರ್ವಭಾವಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಗಜೇಂದ್ರಗಡ ನಗರದ ರೋಣ ರಸ್ತೆಗೆ ಹೊಂದಿಕೊಂಡಿರುವ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ಒಂದು ತಿಂಗಳುಗಳ ಕಾಲ ಬಸವ ಪುರಾಣ ಕಾರ್ಯಕ್ರಮ ಜರುಗಲಿದ್ದು . ಬಸವ ಪುರಾಣಕಾರರಾಗಿ ಅನುಭವಿಗಳಾಗಿರುವ ಇಲಕಲ್ಲಿನ ಅನ್ನದಾನ ಶಾಸ್ತ್ರಿಗಳು ನೆರವೇರಿಸಿಕೊಡಲಿದ್ದಾರೆ. ಕಾರ್ಯಕ್ರಮದ ಉಸ್ತುವಾರಿಯನ್ನು ಗಜೇಂದ್ರಗಡ ನಗರದ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ,ವೀರಶೈವ ಲಿಂಗಾಯತ ಸಮಾಜ ಮತ್ತು ಸರ್ವಧರ್ಮದ ಗುರುಹಿರಿಯರು ತೆಗೆದುಕೊಳ್ಳಲಿದ್ದಾರೆ.
ಧರ್ಮ ಜಾಗೃತಿ ಅಂಗವಾಗಿ ಶಿವಯೋಗ ಮಂದಿರದಿಂದ ಮತ್ತು ಗದಗಿನಿಂದ ಬಸವ ಜ್ಯೋತಿ ಸಂಚಾರಗೊಳ್ಳಲಿದೆ. ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಪಾದಯಾತ್ರೆ ಬಸವ ತತ್ವಗಳ ಪ್ರಚಾರ, ಬಸವಾದಿ ಶರಣರ ಸಮಕಾಲಿನ ಮಹಾತ್ಮ ಚರಿತ್ರೆಯ ಪ್ರಸರಣಗೊಳ್ಳಲಿದೆ. ಕಾಯಕ ನಿರತ ಸೇವಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರಗುವುದು. ಲಿಂಗ ಸಮಾನತೆ ನೈತಿಕ ಮೌಲ್ಯಗಳ ಪ್ರತಿಪಾದನೆ ಕಾರ್ಯಕ್ರಮದ ಉದ್ದೇಶ. ಯುವ ಪೀಳಿಗೆಯಲ್ಲಿ ಗುರುಹಿರಿಯರ ಬಗ್ಗೆ ಗೌರವ ಕಾಳಜಿ ನೈತಿಕತೆಗಳನ್ನು ರೂಢಿಸಿಕೊಳ್ಳುವುದಕ್ಕಾಗಿ ಯುವ ಶಿಬಿರಗಳ ಆಯೋಜನೆ ಮಾಡಲಾಗುತ್ತದೆ. ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಬಸವೇಶ್ವರರ ತತ್ವಾದರ್ಶಗಳನ್ನು ಪ್ರಸ್ತುತಗೊಳ್ಳಲಿವೆ ಎಂದರು.
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗಜೇಂದ್ರಗಡ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ. ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠ ಮಹಿಳೆಯರನ್ನು ಗೌರವಧಾರಗಳಿಂದ ಕಂಡಂತ ಶ್ರೇಷ್ಠ ಮಠ. ವಿಶೇಷವಾಗಿ ಮಠದಲ್ಲಿರುವ ಬೆಳ್ಳಿಯ ರಥೋತ್ಸವವನ್ನು ಮಹಿಳೆಯರಿಂದಲೇ ನೆರವೇರಿಸುವ ಪರಂಪರೆಗೆ ನಾಂದಿ ಹಾಡಿದವರು ಅನ್ನದಾನೇಶ್ವರ ಮಹಾಸ್ವಾಮಿಗಳು. ಬಸವ ಪುರಾಣ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ಕೊಡುವ ಮೂಲಕ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಹಿಳಾ ಸಬಲೀಕರಣ ಮತ್ತು ಗೌರವದಿಂದ ಕಾಣುವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. ಬಸವ ಪ್ರವಚನ ಕಾರ್ಯಕ್ರಮಕ್ಕೆ ಪ್ರತಿನಿತ್ಯ 5,000 ಕ್ಕಿಂತ ಹೆಚ್ಚು ಜನ ಸೇರುವ ಸಂಭವವಿದೆ ಅಲ್ಲದೇ ಪ್ರವಚನಕ್ಕೆ ಸೇರುವ ಎಲ್ಲ ಭಕ್ತಾದಿಗಳಿಗೆ ಪ್ರತಿನಿತ್ಯ ಅನ್ನದಾಸೋಹ ಕಾರ್ಯಕ್ರಮ ಜರುಗಲಿದೆ ಎಂದರು.
ಪ್ರವಚನಕಾರರಾದ ಅನ್ನದಾನ ಶಾಸ್ತ್ರಿಗಳು ಮಾತನಾಡಿ. ಗುರುಪರಂಪರಿಗೆ ಹೆಸರುವಾಸಿಯಾಗಿರುವ ಶ್ರೀ ಅನ್ನದಾನೇಶ್ವರ ಮಠ ಗಜೇಂದ್ರಗಡ ನಗರದಲ್ಲಿ ಬಸವ ಮಹಾಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾವಿರಾರು ರೈತ ಮಹಿಳೆಯರಿಗೆ ಉಡಿ ತುಂಬ ಕಾರ್ಯಕ್ರಮ, ರಕ್ತದಾನ ಶಿಬಿರ ಸೇರಿದಂತೆ ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ ಬಂದಿರುವ ಶ್ರೀ ಮಠ. ಬಸವ ಮಹಾಪುರಾಣ ಕಾರ್ಯಕ್ರಮದ ಮೂಲಕ ಬಸವಣ್ಣನವರು ಲಿಂಗಾಯಿತರಿಗೆ ಮಾತ್ರ ಸೀಮಿತವಲ್ಲ ಅಖಂಡ ಮಾನವ ಕುಲಕೋಟಿಗೆ ಸಲ್ಲತಕ್ಕಂಥವರು ಎಂಬ ಸಂದೇಶ ಸಾರುವ ಉದ್ದೇಶವನ್ನು ಹೊಂದಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಮಠಾಧೀಶರು ಭಾಗವಹಿಸಲಿದ್ದು. 5,000 ಮಹಿಳೆಯರ ಮಸ್ತಕದ ಮೇಲೆ ಅಣ್ಣಬಸವಣ್ಣನವರ ಷಟಸ್ಥಲ ವಚನಧಾರೆಗಳ ಪುಸ್ತಕವನ್ನು ಹೊತ್ತುಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ವಚನೋೋತ್ಸವ ಕಾರ್ಯಕ್ರಮ ಜರುಗಲಿದೆ. ನಗರ ಮತ್ತು ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಒಂದು ತಿಂಗಳು ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಿ ಎಂದರು.
ಈ ಸಂದರ್ಭದಲ್ಲಿ ಶರಣಪ್ಪ ರೇವಡಿ,ಅಮರೇಶ ಗಾಣಗೇರ, ಟಿ.ಎಸ್.ರಾಜೂರ,ಡಾ. ಬಿ. ವಿ. ಕಂಬಳ್ಯಾಳ,ಶಿವಯ್ಯ ಚಕ್ಕಡಿಮಠ, ಅಪ್ಪು ಮತ್ತಿಕಟ್ಟಿ,ಕಲ್ಲಪ್ಪ ಸಜ್ಜನರ,ವಸಂತರಾವ್ ಗಾರಗಿ, ಗೋಪಿನಾಥ ರಾಯಬಾಗಿ,ರವಿ ಹಲಗಿ,ಬಸವರಾಜ ಶೀಲವಂತರ, ಬಸಯ್ಯ ಹಿರೇಮಠ, ಕೆ. ಎಫ್. ತೋಟದ, ಗಂಜೀಗೌಡ್ರ, ಬಿಜಕಲ್, ಸಾಲಿಮಠ ಇತರರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.