ಹಿರಿಯ ಪತ್ರಕರ್ತ ವಸಂತ ನಾಡಿಗೇರ ನಿಧನಕ್ಕೆ ಅಕ್ಷರ ಸಂಗಾತಾ ಪತ್ರಿಕೆ ಸಂಪಾದಕ ಟಿ. ಎಸ್. ಗೊರವರ ಕಂಬನಿ
ಹೆಡ್ಡಿಂಗ್ ಮಾಸ್ಟರ್ ಇನ್ನಿಲ್ಲ
ಹಿರಿಯ ಪತ್ರಕರ್ತ ವಸಂತ ನಾಡಿಗೇರ ನಿಧನಕ್ಕೆ ಅಕ್ಷರ ಸಂಗಾತಾ ಪತ್ರಿಕೆ ಸಂಪಾದಕ ಟಿ. ಎಸ್. ಗೊರವರ ಕಂಬನಿ
ಗಜೇಂದ್ರಗಡ :ಸತ್ಯಮಿಥ್ಯ (ಸೆ -09)
ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ದಿನಪತ್ರಿಕೆ ಸಂಪಾದಕ ವಸಂತ ನಾಡಿಗೇರ ನಿಧನ ಹೊಂದಿದರು. ವಿಜಯ ಕರ್ನಾಟಕ ಸೇರಿದಂತೆ ವಿವಿಧ ಕನ್ನಡ ದಿನ ಪತ್ರಿಕೆಗಳಲ್ಲಿ ಅವರು ಕಾರ್ಯ ನಿರ್ವಹಣೆ ಮಾಡಿದ್ದರು. ವಸಂತ ನಾಡಿಗೇರ ನಿಧನಕ್ಕೆ ಅಕ್ಷರ ಸಂಗಾತಾ ಪತ್ರಿಕೆ ಸಂಪಾದಕ ಟಿ. ಎಸ್. ಗೊರವರ ಕಂಬನಿ ಮಿಡಿದಿದ್ದಾರೆ .
ಪತ್ರಿಕೆಗಳನ್ನು ಸೃಜನಶೀಲವಾಗಿ ರೂಪಿಸುವ, ವರದಿಗಾರರು ಕಳಿಸಿದ್ದ ಸುದ್ದಿಗಳನ್ನು ತಿದ್ದುವ, ಆ ಬರಹಕ್ಕೊಂದು ಉತ್ತಮ ಇಂಟ್ರೊ ಬರೆಯುವ, ಆಕರ್ಷಕ ಶೀರ್ಷಿಕೆ ಕೊಡುವ ಸುದ್ದಿಮನೆಗಳಲ್ಲಿ ಕಾರ್ಯ ನಿರ್ವಹಿಸುವ ಬಹುತೇಕ ಪತ್ರಕರ್ತರು ಎಲೆ ಮರೆಯ ಕಾಯಿಯಂತೆಯೇ ಇದ್ದು ಹೊರ ಜಗತ್ತಿಗೆ ಅಷ್ಟಾಗಿ ಪರಿಚಿತರಾಗಿರೋದಿಲ್ಲ. ಆದರೆ, ಬಹಳಷ್ಟು ಜನ ಉಪಸಂಪಾದಕರ ಶ್ರಮದಿಂದಲೇ ನಾವು ಓದುತ್ತಿರುವ ಪತ್ರಿಕೆಗಳು ಇಂದಿಗೂ ಸೃಜನಶೀಲವಾಗಿ ರೂಪಗೊಳ್ಳುತ್ತಿವೆ.
ನಾನು ವಿಜಯ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವಾಗ ಡೆಸ್ಕ್ ನಲ್ಲಿದ್ದ ವಸಂತ ನಾಡಿಗೇರ್ ಸರ್ ನ್ನು ಬೆರಗುಗಣ್ಣಿಂದ ನೋಡುತ್ತಿದ್ದೆ. ಯಾಕೆಂದರೆ ‘ವಿಕ’ ದಲ್ಲಿ ಆಕರ್ಷಕ ಹೆಡ್ ಲೈನ್ ಗಳನ್ನು ಕೊಟ್ಟು ಏಕಕಾಲದಲ್ಲಿಯೇ ವರದಿಗಾರರನ್ನು, ಓದುಗರನ್ನು ಚಕಿತಗೊಳಿಸುತ್ತಿದ್ದರು.
ನನ್ನ ಹಿರಿಯ ಸಹೋದ್ಯೋಗಿಗಳಾಗಿದ್ದ ಈ ವಸಂತ ಸರ್ ನಮ್ಮನ್ನು ಅಗಲಿದ್ದಾರೆ ಎಂಬ ಸುದ್ದಿ ತಿಳಿದು ಬೇಸರವಾಯಿತು.ಎಂದು ಅಕ್ಷರ ಸಂಗಾತ ಪತ್ರಿಕೆ ಸಂಪಾದಕರಾದ ಟಿ. ಎಸ್. ಗೊರವರ ಕಂಬನಿ ಮಿಡಿದರು.
ವರದಿ : ಸಂ