
ಗೃಹ ಸಚಿವ “ಶಾ”ರಾಜೀನಾಮೆಗೆ ಸಿಪಿಐಎಂ ಪಕ್ಷದ ಕಾರ್ಯದರ್ಶಿ ದಾವಲ್ ತಾಳಿಕೋಟಿ ಆಗ್ರಹ.

ಸಂವಿಧಾನ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ.
ಗಜೇಂದ್ರಗಡ: ಸತ್ಯಮಿಥ್ಯ (ಡಿ -19).
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಗೃಹ ಸಚಿವರು ನೀಡಿರುವ ಅಗೌರವದ ಹೇಳಿಕೆ ಖಂಡನೀಯ ಸಂವಿಧಾನ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಸಿಪಿಐಎಂ ಪಕ್ಷದ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಅಂಬೇಡ್ಕರ್ ಅವರ ಬಗ್ಗೆ ರಾಜ್ಯಸಭೆ ಅಧಿವೇಶನದಲ್ಲಿ ಅಮಿತ ಶಾ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ್ದು ಇದು ಅವರ ಮನುವಾದಿ ದೃಷ್ಟಿಕೋನವನ್ನು ಬಿಂಬಿಸಿದೆ.
ಅಮಿತ್ ಶಾ ರಾಜಕಾರಣಿಯಲ್ಲ ಅವರು ವ್ಯಾಪಾರಿ, ಎಲ್ಲವೂ ಅವರಿಗೆ ಸರಕಿಗೆ ಸಮ ರಾಜಕಾರಣವು ಸಹ ಅವರಿಗೆ ಒಂದು ಉದ್ಯಮವಾಗಿದೆ.ಇಂತಹ ವ್ಯಕ್ತಿಯಿಂದ ದೇಶ, ಸಂವಿಧಾನ ರಕ್ಷಣೆ ಅಸಾಧ್ಯವಾಗಿದೆ.ಅಂಬೇಡ್ಕರ್ ವಿರುದ್ಧ ಗೃಹ ಸಚಿವರು ನೀಡಿರುವ ಅಗೌರವದ ಹೇಳಿಕೆ ಖಂಡನೀಯ ಸಂವಿಧಾನ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ತುರ್ತಾಗಿ ಆಗಬೇಕಿದೆ ಎಂದರು.
ಗೃಹ ಸಚಿವರ ಮುಂದುವರಿಯುವ ಯಾವುದೇ ಹಕ್ಕಿಲ್ಲ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ವರದಿ : ಚನ್ನು. ಎಸ್.