
ಬೊಲೆರೋ – ಬೈಕ್ ನಡುವೆ ಡಿಕ್ಕಿ.
ಗಜೇಂದ್ರಗಡ : ಸತ್ಯಮಿಥ್ಯ (ಮಾ -28).
ಕೆಲವೇ ಕ್ಷಣಗಳ (ರಾತ್ರಿ 10 ಗಂಟೆಗೆ)ಹಿಂದೆ ಗಜೇಂದ್ರಗಡ ಸಮೀಪದ ಉಣಚಗೇರಿ ಬಸ್ಸ್ಟ್ಯಾಂಡ್ ಹತ್ತಿರ ಬೊಲೆರೋ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.
ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದವರು ಹೊಸ ರಾಂಪುರದಿಂದ ಗಜೇಂದ್ರಗಡಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ .
ಬೊಲೆರೋ ವಾಹನದ ಸಂಖ್ಯೆ ಕೆ. ಎ. 29 ಬಿ. 4029 ಇದ್ದು. ಬೈಕ್ ಸವಾರನಿಗೆ ಗಾಯವಾಗಿದ್ದು ಪ್ರಥಮ ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ಕೈಗೊಂಡಿದ್ದಾರೆ.
ವರದಿ : ಸುರೇಶ ಬಂಡಾರಿ.