ಲ್ಯಾಪ್ ಟ್ಯಾಪ್ ವಿತರಣೆಯಲ್ಲಿ ತಾರತಮ್ಯ – ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಪಾಲಕರು.
ಆಯ್ಕೆಯಾದ 10 ವಿದ್ಯಾರ್ಥಿಗಳಲ್ಲಿ. 9 ಜನಕ್ಕೆ ಮಾತ್ರ ಲ್ಯಾಪ್ ಟ್ಯಾಪ್ ವಿತರಣೆ.

ಲ್ಯಾಪ್ ಟ್ಯಾಪ್ ವಿತರಣೆಯಲ್ಲಿ ತಾರತಮ್ಯ – ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಪಾಲಕರು.
ಗದಗ:ಸತ್ಯಮಿಥ್ಯ ( ಜೂಲೈ -11)
ಲ್ಯಾಪ್ ಟ್ಯಾಪ್ ವಿತರಣೆಯಲ್ಲಿ ತಾರತಮ್ಯ ಆರೋಪ ಹಿನ್ನೆಲೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಪಾಲಕರು ತರಾಟೆಗೆ ತೆಗೆದುಕೊಂಡ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆದಿದೆ.
10 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ಟಾಪ್ ವಿತರಣೆ ಮಾಡಲಾಗಿತ್ತು.ಓರ್ವ ವಿದ್ಯಾರ್ಥಿನಿಗೆ ಲ್ಯಾಪ್ಟಾಪ್ ಸಿಗದ ಹಿನ್ನೆಲೆ ಪೋಷಕರು ಕೋಪಗೊಂಡಿದ್ದಾರೆ.
ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಇರುವ ಶೈಕ್ಷಣಿಕ ಸೌಲಭ್ಯದ ಯೋಜನೆ ಇದಾಗಿದ್ದು, ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಒಟ್ಟು 10 ವಿದ್ಯಾರ್ಥಿಗಳ ಫೈಕಿ ವಿದ್ಯಾರ್ಥಿನಿ ಸಿಮ್ರಾನ್ ಹೆಸರು ಕೈಬಿಡಲಾಗಿದೆ. ಹೀಗಾಗಿ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಇದಕ್ಕೆ ಸ್ಪಷ್ಟನೇ ಕೊಡಬೇಕಾದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಕರೆ ಸ್ವೀಕರಿಸುತ್ತಿಲ್ಲ.
ವರದಿ : ಮುತ್ತು.