
ಶೇಂಗಾ ಬೆಳೆಗೆ ಬೆಂಬಲ ಬೆಲೆ ಘೋಷಣೆ ವಿಳಂಬ 24 ಕ್ಕೆ ಎಪಿಎಂಸಿ ಬಂದ್!
ಗಜೇಂದ್ರಗಡ : ಸತ್ಯಮಿಥ್ಯ (ಜ -22).
ಗಜೇಂದ್ರಗಡ ಸುತ್ತಮುತ್ತಲಿನ ರೈತರು ಬೆಳೆದ ಶೇಂಗಾ ಬೆಳೆಯ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ. ಸಾಲ ಶೂಲ ಮಾಡಿ ಬೆಳೆ ಬೆಳೆದ ರೈತನ ಪರಿಸ್ಥಿತಿ ಅದೋಗತಿಗೆ ತಲುಪಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು ಮತ್ತು ಸ್ಥಳೀಯವಾಗಿ ದಲ್ಲಾಳಿಗಳು ಹಾಗೂ ಖರೀದಿ ವ್ಯವಸ್ಥೆ ಸರಿಯಿಲ್ಲದ್ದರಿಂದ ಹೊರಗಿನ ಖರೀದಿದಾರರು ಬರುತ್ತಿಲ್ಲ ಈ ವ್ಯವಸ್ಥೆ ಕೂಡಲೇ ಸರಿಹೊಂದಬೇಕು ಇಲ್ಲದಿದ್ದರೆ ಇದೆ 24 ಶುಕ್ರವಾರ ದಿವಸ ಎಪಿಎಂಸಿ ಮಾರುಕಟ್ಟೆಯನ್ನು ಬೆಳಿಗ್ಗೆ 6 ರಿಂದ ಸಾಯಂಕಾಲ 6 ರ ವರೆಗೆ ಬಂದ್ ಮಾಡಲಾಗುವದು ಎಂದು ಗಜೇಂದ್ರಗಡ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಳಕಪ್ಪ ಹೂಗಾರ, ಮಂಜುನಾಥ ರಾಠೋಡ, ಬಾಳಪ್ಪ ನಿಂಬೋಜಿ, ಪರಶುರಾಮ ರಾಠೋಡ, ಪ್ರಶಾಂತ ಹೂಗಾರ, ಸುರೇಶ ಕಲಾಲ, ಹುಸೇನಸಾಬ ನಿಶಾನದಾರ, ಮುತ್ತು ಹಾದಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಸುರೇಶ ಬಂಡಾರಿ.