ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಕಪ್ಪು ಪಟ್ಟಿ ಧರಿಸುವ ಮೂಲಕ ಸಾಂಕೇತಿಕವಾಗಿ ಬಹಿಷ್ಕಾರ.
ಕೊಪ್ಪಳ : ಸತ್ಯಮಿಥ್ಯ (ಆಗಸ್ಟ್ -02)
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ವತಿಯಿಂದ ವಲಯ ಮಟ್ಟದ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಗಳು ನಡೆಯುವಂತಹ ಸಂದರ್ಭದಲ್ಲಿ ದೈಹಿಕ ಶಿಕ್ಷಕರು ಕಪ್ಪು ಪಟ್ಟಿ ಧರಿಸುವ ಮೂಲಕ ಸಾಂಕೇತಿಕವಾಗಿ ಬಹಿಷ್ಕಾರ ಹಾಕಿದ ಪ್ರಸಂಗ ಇಂದು ಕೊಪ್ಪಳ ಜಿಲ್ಲೆಯ ಕುಕುನೂರು ತಾಲ್ಲೂಕಿನ ಲಕಾಮಾಪುರ ಗ್ರಾಮದಲ್ಲಿ ಜರುಗಿದೆ.
ತಾಲೂಕ ದೈಹಿಕ ಶಿಕ್ಷಣ ಶಿಕ್ಷಕರ ತಾಲೂಕ ಘಟಕದ ಅಧ್ಯಕ್ಷರಾದ ಎಫ್. ಜಿ. ಅಂಗಡಿ ಮಾತನಾಡಿ ಸಹ ಶಿಕ್ಷಕರಿಗೆ ನೀಡುವಂತಹ ಸೌಲಭ್ಯಗಳನ್ನು ಎಲ್ಲರಿಗೂ ನೀಡಬೇಕು ಎಂದು ಮಾತನಾಡಿದರು.
ನಂತರ ಮಾತನಾಡಿದ ದೈಹಿಕ ಶಿಕ್ಷಕರಾದ ಆರ್. ಬೀ. ರಾಠೋಡ ಹಾಗೂ ಚಂದ್ರ ಶೇಖರ ದೊಡ್ಡಮನಿ ಮಾತನಾಡಿ , ಸಹ ಶಿಕ್ಷಕರಿಗೆ ನೀಡುವಂತಹ ಪ್ರತಿವರ್ಷ ನಡೆಯುವಂತಹ ನೇಮಕಾತಿಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಆಗದೇ ಇರುವುದಕ್ಕಾಗಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ ಹಾಗೂ ಸೇವೆಯಲ್ಲಿ ಹಿರಿಯರಾಗಿದ್ದರು ಬಡ್ತಿಹೊಂದನಿ ವೃತ್ತಿಯಾಗುತ್ತಿದ್ದು ದೈಹಿಕ ಶಿಕ್ಷಕರಿಗೆ ಸೂಕ್ತವಾದ ಸ್ಥಾನಮಾನ ನೀಡಿ ಸರ್ಕಾರವನ್ನು ಗಮನ ಸೆಳೆಯುವ ಒಂದು ಸಾಂಕೇತಿಕ ಹೋರಾಟದ ಸಲುವಾಗಿ ಕಳೆದ 25 ವರ್ಷಗಳಿಂದ ದೈಹಿಕ ಶಿಕ್ಷಕರಿಗೆ ಯಾವುದೇ ರೀತಿಯ ಬಡ್ತಿ ನೀಡದಿರುವುದಕ್ಕಾಗಿ ಹೋರಾಟ ಜರುಗುತ್ತಿದೆ . ಇಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದೈಹಿಕ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಕರುಗಳು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.