ರಾಜ್ಯ ಸುದ್ದಿ

ವರ್ಗಾವಣೆಗೆ ಸಂಬಂಧಿಸಿದಂತೆ ಹಣಕ್ಕಾಗಿ ಕಿರುಕುಳ- ಅನುಮಾನಾಸ್ಪದ ಪಿಎಸ್ಐ ಸಾವು : ಹೆಂಡತಿಯಿಂದ ಸ್ಥಳೀಯ ಕಾಂಗ್ರೇಸ್ ಶಾಸಕನ ವಿರುದ್ಧ ಎಫ್ಐಆರ್

Share News

ವರ್ಗಾವಣೆಗೆ ಸಂಬಂಧಿಸಿದಂತೆ ಹಣಕ್ಕಾಗಿ ಕಿರುಕುಳ- ಅನುಮಾನಾಸ್ಪದ ಪಿಎಸ್ಐ ಸಾವು : ಹೆಂಡತಿಯಿಂದ ಸ್ಥಳೀಯ ಕಾಂಗ್ರೇಸ್ ಶಾಸಕನ ವಿರುದ್ಧ ಎಫ್ಐಆರ್.

ಯಾದಗಿರಿ – ಸತ್ಯ ಮಿಥ್ಯ ( ಆಗಸ್ಟ್ -03).

ದಿನಬೆಳಗಾದ್ರೆ ಸಾಕು ಹಗರಣ ಹಗರಣ ಎನ್ನುವ ಹಾಗೆ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಕಾಲ ಕಳೆಯುತ್ತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ “ಮುಡಾ” ಪ್ರಕರಣ ಅಡಿಯಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ. ನಿಯಮ ಬಾಹಿರ ವರ್ಗಾವಣೆ ಹಿನ್ನೆಲೆಯಲ್ಲಿ ಯಾದಗಿರಿಯ ಪಿಎಸ್ಐ ಪರಶುರಾಮ ಎನ್ನುವವರು ಅನುಮಾನಸ್ಪದವಾಗಿ ಸಾವಿಗಿಡಾಗಿರುವದರಿಂದ ಈಗ ಮತ್ತೊಂದು ಸಂಕಷ್ಟಕ್ಕೆ ಕಾಂಗ್ರೇಸ್ ಸರ್ಕಾರ ಸಿಲುಕಿತೆ.

ಯಾದಗಿರಿಯ ಪಿಎಸ್‌ಐ ಪರಶುರಾಮ್ ಎನ್ನುವವರ ಅನುಮಾನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪರಶುರಾಮ್ ಪತ್ನಿ ಶ್ವೇತಾ ಎನ್ನುವವರು ಕಾಂಗ್ರೆಸ್ ಶಾಸಕ ಚೆನ್ನಾ ರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಯಾದಗಿರಿ ಎಸ್ಪಿ ಸಂಗೀತ ಅವರಿಗೆ ದೂರು ಸಲ್ಲಿಸಿದ್ದಾರೆ.

ಪೋಸ್ಟಿಂಗ್ ಗಾಗಿ ಪದೇ ಪದೇ ಹಣಕ್ಕೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದ್ದು, ಇದೀಗ ಯಾದಗಿರಿ ಎಸ್‌ಪಿ ಸಂಗೀತಾಗೆ ಮೃತ ಪಿ ಎಸ ಐ ಪರಶುರಾಮ್ ಪತ್ನಿ ಶ್ವೇತಾ ಕಾಂಗ್ರೆಸ್ ಶಾಸಕ ಚೆನ್ನರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ದ ದೂರು ಸಲ್ಲಿಸಿದ್ದಾರೆ.

ಯಾದಗಿರಿ PSI ಪರಶುರಾಮ್ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ವಿರುದ್ಧ ಕುಟುಂಬಸ್ಥರು ಇದೀಗ ಆರೋಪ ಮಾಡುತ್ತಿದ್ದಾರೆ. ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಕಳೆದ ವರ್ಷವಷ್ಟೇ 30 ಲಕ್ಷ ರೂಪಾಯಿ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡಿದ್ದ ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್ ಹಾಕಿಸಿಕೊಂಡಿದ್ದ.

ಎಂಪಿ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ತಿಂಗಳು ವರ್ಗಾವಣೆಯಾಗಿದ್ದ. ನೀತಿ ಸಂಹಿತೆ ಮುಗಿದ ಕೂಡಲೇ ಮತ್ತೆ ಠಾಣೆಗೆ ವಾಪಸ್ ಆಗಿದ್ದಾನೆ. ಇದರಿಂದ ಸಾಲದ ಸುಳಿಗೆ ಸಿಲುಕಿದ್ದ ಪಿಎಸ್‌ಐ ಪರಶುರಾಮ್. ಮತ್ತೆ ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆಯಾಗಿತ್ತು. ಇದರಿಂದ ಪಿಎಸ್‌ಐ ಪರಶುರಾಮ್ ಒತ್ತಡಕ್ಕೆ ಒಳಗಾಗಿದ್ದ.

ಕಿರುಕುಳದ ಬಗ್ಗೆ ಪತ್ನಿ ಶ್ವೇತಾಗೆ ಪಿಎಸ್‌ಐ ಪರಶುರಾಮ್ ಹೇಳಿದ್ದ. ಯಾದಗಿರಿ ಸೈಬರ್ ಠಾಣೆಯ ಪಿಎಸ್‌ಐ ಪರಶುರಾಮ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಯಾದಗಿರಿ ಶಾಸಕ ಚೆನ್ನರೆಡ್ಡಿ ಪಾಟೀಲ್ ಗೆ ದುಡ್ಡಿನ ಆಸೆ ಹೆಚ್ಚಾಗಿದೆ. ಯಾದಗಿರಿ ಠಾಣೆಯಿಂದ ಅವಧಿಪೂರ್ವ ವರ್ಗಾವಣೆ ಮಾಡಿದ್ದಾರೆ. ಅವಧಿಪೂರ್ವ ವರ್ಗಾವಣೆಯಿಂದ ಪಿಎಸ್‌ಐ ಪರಶುರಾಮ್ ನೊಂದಿದ್ದ.

7 ತಿಂಗಳ ಅವಧಿಯಲ್ಲಿ ಎಂಎಲ್‌ಎ ಬೇರೆಯವರಿಗೆ ಪೋಸ್ಟಿಂಗ್ ನೀಡಿದ್ದಾರೆ. ವರ್ಗಾವಣೆ ಮಾಡುತ್ತಿರುವುದು ಸಿಎಂ ಗೃಹ ಸಚಿವರ ಗಮನಕ್ಕೆ ಬರಲಿಲ್ಲವ? ಎಂದು ಅಮೃತ ಪಿಎಸ್‌ಐ ಪರಶುರಾಮ್ ಪದ್ಮಶ್ವೇತ ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ಯಾದಗಿರಿ ಎಸ್ಪಿ ಸಂಗೀತ ಅವರಿಗೆ ಶ್ವೇತಾ ಅವರು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!