ಟ್ರೆಂಡಿಂಗ್ ಸುದ್ದಿಗಳು

ಹೆಸರು ಬೆಳೆಯಲ್ಲಿ ಕುಡಿ ಸಾಯುವ ನಂಜು ರೋಗ

Share News

ಹೆಸರು ಬೆಳೆಯಲ್ಲಿ ಕುಡಿ ಸಾಯುವ ನಂಜು ರೋಗ

ಕುಕನೂರ : ಸತ್ಯಮಿಥ್ಯ (ಜುಲೈ -21).

ಕೃಷಿ ಇಲಾಖೆ ಕೊಪ್ಪಳ, ಕೃಷಿ ವಿಜ್ಙಾನ ಕೇಂದ್ರ ಗಂಗಾವತಿ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಇವರ ಸಹಯೋಗದೊಂದಿಗೆ ಜುಲೈ 20 ರಂದು ಕುಕನೂರ ತಾಲೂಕಿನ ತಳಕಲ್ಲ,ತಳಬಾಳ,ನಿಂಗಾಪುರ,ಇಟಗಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹೆಸರು ಬೆಳೆಯಲ್ಲಿ ಕುಡಿ ಸಾಯುವ ನಂಜು ರೋಗದ ಪರಿಶೀಲನೆ ಮಾಡಲಾಗಿ ಈ ಕೆಳಕಂಡ ಲಕ್ಷಣಗಳು ಕಂಡು ಬಂದಿರುತ್ತವೆ.

ಲಕ್ಷಣಗಳು :ಗಿಡ ಗಿಡ್ಡವಾಗುವುದು ,ಕುಡಿ ಎಲೆಯಲ್ಲಿ ತಿಳಿಹಳದಿ ಬಣ್ಣದ ವೃತ್ತಾಕಾರದ ಮಚ್ಚೆಗಳು ಕಂಡು ಬರುವವು ,ಗಿಡದಲ್ಲಿ ಹೂ ಇಲ್ಲದಿರುವುದು ,ಕುಡಿ ಸಾಯುವುದು ಹಾಗೂ ಹೊಸ ಚಿಗುರು ಬರುವುದು ಕಂಡು ಬರುತ್ತವೆ ,ಗಿಡದಲ್ಲಿ ಕಾಯಿಗಳು ಕಡಿಮೆ ಅಥವಾ ಇಲ್ಲದೆ ಇರಬಹುದು ,ಬೆಳಯ ಮೊಗ್ಗು ಬಾಡಿ/ಕೊಳೆತು ಸಾಯುವವು

ಪ್ರತಿಕೂಲ ವಾತಾವರಣ :- ರೋಗವು ಥ್ರೀಪ್ಸ್‌ ಕೀಟದಿಂದ ಹರಡುತ್ತದೆ ,ಬಿಸಿಲಿನ ವಾತಾವರಣ (23 ರಿಂದ 30ಡಿಸೆ)ಮತ್ತು ಆರ್ದ್ರತೆ (40 ರಿಂದ 70%) ಇದ್ದಲ್ಲಿ ರೋಗ ಉಲ್ಬಣವಾಗುತ್ತದೆ .

ಹತೋಟಿ ಕ್ರಮಗಳು: 1) ಬೇಸಿಗೆ ಬಿತ್ತನೆಯನ್ನು ಬೇಗನೆ ಮಾಡಬೇಕು

2) ಹೊಲದಲ್ಲಿ ರೋಗಲಕ್ಷಣಗಳು ಕಂಡುಬಂದ ಕೂಡಲೇ ಶೇ.4ರ ಜೋಳದ ಎಲೆಯ ಕಷಾಯವನ್ನು, 15 ದಿನದ ಅವಧಿಯಲ್ಲಿ ಸಿಂಪರಣೆ ಮಾಡಬೇಕು

3) ತೀವ್ರ ಬಾಧೆ ಕಂಡುಬಂದಲ್ಲಿ 0.3 ಮಿ.ಲೀ ಇಮಿಡಾಕ್ಲೋಪ್ರೀಡ್ 17.8 ಎಸ್ . ಎಲ್‌ ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

ಈ ಸಂದರ್ಭದಲ್ಲಿ ತಿಮ್ಮಣ್ಣ ಚೌಡಿ, ಮಾನ್ಯ ಆಡಳಿತ ಮಂಡಳಿಯು ಸದಸ್ಯರು, ಕೃಷಿ ವಿಜ್ಞಾನಗಳ ವಿದ್ಯಾಲಯ, ರಾಯಚೂರು ಹಾಗೂ ಕೃಷಿಕ ಸಮಾಜದ ಅಧ್ಯಕ್ಷರು, ಯಲಬುರ್ಗಾ,ಸಹದೇವ ಯರಗೊಪ್ಪ (ಉಪ ಕೃಷಿ ನಿರ್ದೇಶಕರು-1 ಕೊಪ್ಪಳ)ಪ್ರಾಣೇಶ್‌ ಹಾದಿಮನಿ (ಸಹಾಯಕ ಕೃಷಿ ನಿರ್ದೇಶಕರು ಯಲಬುರ್ಗಾ)ಡಾ. ರಾಘವೇಂದ್ರ ಎಲಿಗಾರ್‌ (ಮುಖ್ಯಸ್ಥರು ಕೃಷಿ ಸಂಶೋಧನಾ ಕೇಂದ್ರ. ಗಂಗಾವತಿ)ಡಾ. ಎಸ್‌.ಬಿ.ಗೌಡರ್‌ (ಸಸ್ಯರೋಗ ಶಾಸ್ತ್ರಜ್ಙರು ಕೆವಿಕೆ ಗಂಗಾವತಿ)ಡಾ. ವಾಮನಮೂರ್ತಿ (ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ. ಕೊಪ್ಪಳ)ಡಾ. ರೇವತಿ. ಆರ್‌. ಎಮ್ ( ಕೃಷಿ ವಿಜ್ಙಾನ ಕೇಂದ್ರ ಗಂಗಾವತಿ)ಬಸವರಾಜ ತೇರಿನ್‌ (ಕೃಷಿ ಅಧಿಕಾರಿಗಳು ಕುಕನೂರ)ಸಿದ್ದರಾಮ ರೆಡ್ಡಿ (ಸಹಾಯಕ ಕೃಷಿ ಅಧಿಕಾರಿಗಳು ಕುಕನೂರ)ಗೂಳಪ್ಪ ಕೊಳಜಿ (ಕೃಷಿ ತಾಂತ್ರಿಕ ವ್ಯವಸ್ಥಾಪಕರು ಕುಕನೂರ)

ಪ್ರಗತಿ ಪರ ರೈತರಾದ ಮಲ್ಲಿಕಾರ್ಜುನ ಗಡಗಿ ,ಶಂಕರ್‌ ಕುಲಕರ್ಣಿ ,ಗಂಗಮ್ಮ ಗಡಗಿ , ಶಿವುಕುಮಾರ ಆದಾಪುರ ಹಾಗೂ ಹಲವಾರು ರೈತರು ಉಪಸ್ಥಿತರಿದ್ದರು.

ವರದಿ:- ಚೆನ್ನಯ್ಯ ಹಿರೇಮಠ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!