ಟ್ರೆಂಡಿಂಗ್ ಸುದ್ದಿಗಳು

ಯಲಬುರ್ಗಾ : ಭ್ರಷ್ಟ ಕಾಂಗ್ರೆಸ್ ಸರ್ಕಾರದ ನೀತಿ- ಜನಸಾಮಾನ್ಯರಿಗೆ ತಿಳಿಸಿ ಪಕ್ಷವನ್ನು ಬಲವರ್ಧನೆ ಗೊಳಿಸಿ: ನವೀನ್ ಕುಮಾರ್ ಗುಳಗಣ್ಣನವರ್

Share News

ಯಲಬುರ್ಗಾ : ಭ್ರಷ್ಟ ಕಾಂಗ್ರೆಸ್ ಸರ್ಕಾರದ ನೀತಿ-  ಜನಸಾಮಾನ್ಯರಿಗೆ ತಿಳಿಸಿ ಪಕ್ಷವನ್ನು ಬಲವರ್ಧನೆ ಗೊಳಿಸಿ: ನವೀನ್ ಕುಮಾರ್ ಗುಳಗಣ್ಣನವರ್

ಯಲಬುರ್ಗಾ : ಸತ್ಯಮಿಥ್ಯ ( ಜುಲೈ -31).

ಬಿಜೆಪಿ  ಪಕ್ಷವನ್ನು ಮುಂಬರುವ ಚುನಾವಣೆಗಳಲ್ಲಿ ಅಧಿಕಾರಕ್ಕೆ ತರಲು ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಸನ್ನದ್ದರಾಗಬೇಕು ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರ್ ಹೇಳಿದರು.

ಪಟ್ಟಣದ ಭಾರತೀಯ ಜನತಾ ಪಕ್ಷದ ಯಲಬುರ್ಗಾ ಮಂಡಲದ ಕಾರ್ಯಾಲಯದಲ್ಲಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯ ಕಾರ್ಯಕ್ರಮದಲ್ಲಿ  ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು

ಪಕ್ಷದ ಸಂಘಟನಾತ್ಮಕ ಕಾರ್ಯಾ ಚಟುವಟಿಕೆಗಳು ಮತ್ತಷ್ಟು ಬಲವರ್ಧನೆಗೊಳ್ಳಬೇಕಿದೆ.ಹಾಗೂ ಮುಂದಿನ ದಿನಗಳಲ್ಲಿ ತಾಲೂಕ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಗಳು ನಡೆಯಲಿದ್ದು ಈ ಕ್ಷಣದಿಂದಲೇ ಪಕ್ಷವನ್ನು ಸಂಘಟಿಸಿ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಬಿಜೆಪಿ ಸರ್ಕಾರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ಜನಸಾಮಾನ್ಯರಿಗೆ ತಿಳಿಸಿ ಪಕ್ಷವನ್ನು ಬಲವರ್ಧನೆ ಗೊಳಿಸಬೇಕಿದೆ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿಯ ಶಕ್ತಿಯಾಗಿದ್ದು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಹಾಗೂ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ “”ಗ್ರಾಮ ಚಲೋ ಅಭಿಯಾನ,ಏಕ್ ಪೇಡ್ ಮಾ ಕೆ ನಾಮ್”” ಕಾರ್ಯಕ್ರಮ ಯಸ್ವಿಗೊಳಿಸಬೇಕೆಂದು ಹಾಗೂ ರಾಜ್ಯ ಸರ್ಕಾರದ ಭ್ರಷ್ಟಚಾರದ ವಿರುದ್ಧ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡ್ಡಿಯೂರಪ್ಪನವರ ನೇತೃತ್ವದಲ್ಲಿ ಮೈಸೂರು ಚಲೋ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಪಾದಯಾತ್ರ ಕಾರ್ಯಕ್ರಮವನ್ನು ಯಸ್ವಿಗೊಳಿಸಬೇಕು ಎಂದು ಹೇಳಿದರು.

ಮಾಜಿ ಸಚಿವರಾದ ಹಾಲಪ್ಪ ಆಚಾರ್ ಮಾತನಾಡಿ ಪಕ್ಷ ಸಂಘಟನೆಯಲ್ಲಿ ಯಲಬುರ್ಗಾ ಮಂಡಲವು ಯಾವತ್ತು ಬಲಶಾಲಿಯಾಗಿದ್ದು ಪಕ್ಷ ಹೇಳಿದ ಎಲ್ಲಾ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ . ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಗರಣಗಳ ಮೂಲಕ ಹಗಲು ದರೋಡೆಗೆ ಇಳಿದಿದ್ದು, ರಾಜ್ಯದ ಜನರಿಗೆ ಅನ್ಯಾಯವನ್ನು ಮಾಡುತ್ತದೆ. ಅಧಿಕಾರಕ್ಕೆ ಬರಲು ಕಾಂಗ್ರೆಸ್ಸಿಗರು ಘೋಷಣೆ ಮಾಡಿದ ಗ್ಯಾರಂಟಿಗಳು ಒಂದೊಂದಾಗಿ ನೈಪತ್ಯಕ್ಕೆ ಸರಿಯುತ್ತಿದ್ದು ಗೃಹ ಲಕ್ಷ್ಮಿ ಯೋಜನೆಯ ಎರಡು ತಿಂಗಳ ಕಂತಿನ ಹಣ ಬಾಕಿ ಉಳಿಸಿಕೊಂಡಿದೆ. ವಿದ್ಯುತ್ ಯೋಜನೆಯು ಕಣ್ಣ ಮುಚ್ಚಾಲೆ ಆಡುತ್ತಿದ್ದು ಬೆಳಗ್ಗೆ ಹೋದರೆ ಯಾವಾಗ ಕರೆಂಟು ಬರುತ್ತದೆ ಎಂದು ಯಾರಿಗೂ ಹೇಳಲು ಆಗುತ್ತಿಲ್ಲ. ಕೆ ಆರ್ ಡಿ ಬಿ ಐ ಎಲ್, ವಾಲ್ಮೀಕಿ ನಿಗಮ, ಮೈಸೂರಿನ ಮುಡಾ ಹಗರಣ ಹಾಗೂ ವರ್ಗಾವಣೆ ದಂದೆ ಮೂಲಕ ರಾಜ್ಯದ ಹಣವನ್ನು ಕೊಳ್ಳೆಹೊಡೆಯುತ್ತಿದ್ದು ಇದನ್ನು ಜನರ ಗಮನಕ್ಕೆ ತಂದು ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮಣೆ ಹಾಕುವಂತೆ ಮತದಾರರಿಗೆ ತಿಳಿಯಬೇಕಿದೆ. ಮುಡಾ ಹಗರಣದ ವಿರುದ್ಧ ಮೈಸೂರು ಚಲೋ ಅಭಿಯಾನವನ್ನು ಏರ್ಪಡಿಸಿದ್ದು ಹೆಚ್ಚಿನ ಕಾರ್ಯಕರ್ತರು ಭಾಗವಹಿಸಿ ಎಂದು ಕರೆ ನೀಡಿದರು

ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಮಾರುತಿ ಗಾವರಳ ,ಜಿಲ್ಲಾ ಕಾರ್ಯದರ್ಶಿಗಳಾದ ಶಿವಶಂಕರರಾವ್ ದೇಸಾಹಿ, ಶ್ರೀಮತಿ ವಿಜಯಲಕ್ಷ್ಮಿ ,ಮಂಡಲ ಪ್ರದಾನ ಕಾರ್ಯದರ್ಶಿಗಳಾದ ಅಯ್ಯನಗೌಡ್ರು ಕೆಂಚ್ಚಮನವರು, ಅಮರೇಶ್ ಹುಬ್ಬಳ್ಳಿ, ಬಸವಲಿಂಗಪ್ಪ ಬೂತೆ, ವೀರಣ್ಣ ಹುಬ್ಬಳ್ಳಿ, ಮುಖಂಡರಾದ ಬಸವರಾಜ ರಾಜೂರ, ವಿಶ್ವನಾಥ್ ಮರಿಬಸಪ್ಪನವರ, ಶರಣಪ್ಪ ಬಣ್ಣದಬಾವಿ, ರತನ್ ದೇಸಾಹಿ, ಶಿವಕುಮಾರ ನಾಗಲಾಪುರಮಠ ಸಿದ್ದರಾಮೇಶ್ವರ, ಅಯ್ಯಪ್ಪ ಗುಳೇದ್ದ, ಸುರಪುರ ವಕೀಲರು , ಶರಣಪ್ಪ ಈಳಗೇರ, ಸಿದ್ದು ಉಳ್ಳಾಗಡ್ಡಿ , ಹಾಗೂ ತಾಲೂಕ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ :ಚನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!