
ಯತ್ನಾಳ್ ಉಚ್ಛಾಟನೆ: ಸಾವಳಗಿಯಲ್ಲಿ ಪ್ರತಿಭಟನೆ
ಸಾವಳಗಿ:ಸತ್ಯಮಿಥ್ಯ (ಏ-06)
ಯತ್ನಾಳ್ ಅವರನ್ನು ರಾಜಕೀಯದಲ್ಲಿ ಹತ್ತಿಕ್ಕಲು ಯಡಿಯೂರಪ್ಪ ಅವರು ಕುತಂತ್ರದಿಂದ ಉಚ್ಚಾಟನೆ ಆದೇಶ ಹೊರಡಿಸಿದ್ದಾರೆ. ಕೂಡಲೇ ಅದನ್ನು ಹಿಂಪಡೆಯದೇ ಹೋದರೆ ತೀವ್ರವಾದ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಉಮೇಶ್ ಜಾಧವ್ ಹೇಳಿದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ರವಿವಾರ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಂದಿಗೂ ಬಿಜೆಪಿ ವಿರುದ್ಧವಾಗಿ ನಡೆದುಕೊಂಡಿಲ್ಲ. ಅವರು ಎಂದಿಗೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ, ಬದಲಿಗೆ ಅವರು ಉತ್ತರ ಕರ್ನಾಟಕದ ಏಳ್ಗೆಗಾಗಿ ಶ್ರಮಿಸಿದ್ದಾರೆ ಎಂದರು.
ನಂತರ ಮಾತನಾಡಿದ ಪಾರ್ಶ್ವನಾಥ ಉಪಾಧ್ಯೆ ಅವರು ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆಯನ್ನು ಮಾಡಿದ್ದು ಬಿಜೆಪಿ ಯಡವಟ್ಟು ಮಾಡಿದ್ದೆ, ಅವರ ಹಿಂದೆ ಹಿಂದೂ ಸಂಘಟನೆಗಳು ಬೆಂಬಲ ಇದೆ ಮುಂದಿನ ದಿನಗಳಲ್ಲಿ ಯತ್ನಾಳ್ ಮುಖ್ಯಮಂತ್ರಿ ಆಗುತ್ತಾರೆ, ಏ 11 ತಾರೀಖು ರಂದು ಮುರುಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಯತ್ನಾಳ ಅವರ ಮುಂದಿನ ನಿರ್ಧಾರಕ್ಕೆ ನಾವು ಬದ್ದ ಆಗಿದ್ದೇವೆ ಎಂದು ಹೇಳಿದರು.
ನಂತರ ರಾಯಬಾ ಜಾಧವ, ಅಪ್ಪುಗೌಡ ಪಾಟೀಲ ಸೇರಿದಂತೆ ಅನೇಕರು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಹಿಂದೂ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ :ಸಚಿನ್ ಜಾದವ್