ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಾಜು ಖಾನಪುರ ಆಯ್ಕೆ.
ನಿರಂತರ ಹಿಂದೂ ಧರ್ಮಕ್ಕೆ ಜೀವ ಮುಡಿಪಿಟ್ಟ ಖಾನಾಪುರ.
ಗದಗ : ಸತ್ಯಮಿಥ್ಯ ( ಜು -01)
ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ರಾಜು ಖಾನಪುರಗೆ ಆಲ್ಇಂಡಿಯಾ ಬಂಜಾರ್ ಸೇವಾ ಸಂಘದ ತಾಲೂಕ ಪ್ರಧಾನಕಾರ್ಯದರ್ಶಿ ಶಿವಾಜಿ ಚವ್ಹಾಣರವರು ಸನ್ಮಾನಿಸಿದರು.
ನಂತರ ಮಾತನಾಡಿದ ಅವರು ರಾಜು ಖಾನಾಪುರ ತಮ್ಮ ಜೀವನವನ್ನೇ ಹಿಂದೂ ಧರ್ಮ ಉದ್ದಾರಕ್ಕಾಗಿ ಮೂಡಿಪಾಗಿಟ್ಟಿದ್ದಾರೆ. ನಿರಂತರವಾಗಿ ಹಿಂದೂ ಧರ್ಮದ ಮೇಲಾಗುವೆ ಆಕ್ರಮಣವನ್ನು ತಮ್ಮ ಜೀವ ಒತ್ತೆಯಿಟ್ಟು ಕಾಪಾಡುವ ಪಣ ತೊಟ್ಟವರಲ್ಲಿ ಇವರು ಒಬ್ಬರು.ನಿಮ್ಮ ಕಾರ್ಯವನ್ನು ಗುರುತಿಸಿ ರಾಜ್ಯದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದಕ್ಕಾಗಿ ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು .
ನೀವು ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಇನ್ನೂ ಸಂಘಟನೆಯ ಚಾಕಚಾಕ್ಯತೆಯಿಂದ ಬೆಳೆಸಿ ನಿಮ್ಮಿಂದ ಜನಸಾಮಾನ್ಯರಿಗೆ ನ್ಯಾಯ ಸಿಗುವಂತಾಗಲಿ ನಿಮ್ಮ ಹೋರಾಟದ ಹಾದಿಯಲ್ಲಿ ಸಂಘಟನೆ ಇನ್ನೂ ಹೆಚ್ಚು ಮುಂಚೂಣಿಯಲ್ಲಿ ಬರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಬಿಜೆಪಿ ಹಿರಿಯ ಮುಖಂಡರಾದ ಮುರಿಗೆಪ್ಪ ಶೆಟ್ಟರ್, ಗಿರೀಶ ಹೊಸಕೋಟಿ, ಸೇರಿದಂತೆ ಬಂಜಾರ್ಸೇವಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಸುನೀಲ್.