
ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ: ₹1.14 ಕೋಟಿ ಸಂಗ್ರಹ

ಸತ್ಯಮಿಥ್ಯ ಸುದ್ದಿಮೂಲ : ಅಫಜಲಪುರ
ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು. ಈ ವೇಳೆ ಹುಂಡಿಯಲ್ಲಿ ರೂ 1,14,38,440 ನಗದು ಸಂಗ್ರಹವಾಗಿರುವುದು ತಿಳಿದುಬಂದಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು, ಈ ಬಾರಿ ಕೆಲವು ಕಾರಣಗಳಿಂದ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಿನ ದಿನಗಳು ತೆಗೆದುಕೊಂಡಿತ್ತು. ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ಆರಂಭವಾಯಿತು. ಬೆಳಿಗ್ಗೆಯಿಂದ ಆರಂಭವಾದ ಎಣಿಕೆ ಕಾರ್ಯ ರಾತ್ರಿ 10 ಗಂಟೆಗೆ ಮುಕ್ತಾಯಗೊಂಡಿತು.
ಹುಂಡಿ ಎಣಿಕೆ ಕಾರ್ಯದಲ್ಲಿ ಗುಲ್ಬರ್ಗ ತಹಶೀಲ್ದಾರ್ ಗಂಗಾಧರ ಪಾಟೀಲ್ ಶಿರಸ್ತೇದಾರ್ ಶೀಲಾ , ಎಸ್ಡಿಎ ಶ್ರೀಧರ್ , ಶಾಖೆ ಎಸ್ಡಿಎ ಮಹೇಶ ಸೇರಿದಂತೆ ಜಿಲ್ಲಾ ಕಚೇರಿ ಸಿಬ್ಬಂದಿ, ಅಫಜಲಪುರ ತಾಲೂಕು ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಅವರ ನೇತೃತ್ವದಲ್ಲಿ ದೇವಸ್ಥಾನದ ವ್ಯವಸ್ಥಾಪಕರಾದ *ದತ್ತು ನಿಂಬರ್ಗಾ ಹಾಗೂ ರಮೇಶ್ ಪಟೇದ, ದೇವಸ್ಥಾನದ ಸಿಬ್ಬಂದಿಗಳಾದ ಕಮಲೇಶ ಮುದಕಣ ಹಾಗೂ ಧನರಾಜ್ ಸೇರಿದಂತೆ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಸಹಕರಿಸಿದರು.
ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಭಕ್ತರು ಹುಂಡಿಗೆ ಸಲ್ಲಿಸಿದ ಕಾಣಿಕೆ ಮೊತ್ತವನ್ನು ನಿಯಮಾನುಸಾರ ಎಣಿಕೆ ಮಾಡಿ ಲೆಕ್ಕಪತ್ರದಲ್ಲಿ ದಾಖಲಿಸಲಾಯಿತು.




