
ಸೆ-28 : ಕೋಟೆನಾಡಿಗೆ ಬಸನಗೌಡ ಪಾಟೀಲ್ ಯತ್ನಾಳ್ ಆಗಮನ!
‘ಕೋಟೆನಾಡು’ ಗಜೇಂದ್ರಗಡದಲ್ಲಿ ಹಿಂದೂ ಮಹಾಗಣಪತಿ ಬಹಿರಂಗ ಸಭೆ: ‘ಹಿಂದೂ ಹುಲಿ’ ಬಸನಗೌಡ ಪಾಟೀಲ್ ಯತ್ನಾಳ್ ಆಗಮನ!
ಸತ್ಯಮಿಥ್ಯ ಸುದ್ದಿಮೂಲ ಗಜೇಂದ್ರಗಡ:
ಇಲ್ಲಿನ ‘ವಂದೇ ಮಾತರಂ ವೇದಿಕೆ’ ಹಾಗೂ ‘ಶ್ರೀ ಗಜೇಂದ್ರ ಯುವಕ ಮಂಡಳ’ದ ಸಂಯುಕ್ತಾಶ್ರಯದಲ್ಲಿ ಹಿಂದೂ ಗಣೇಶೋತ್ಸವದ ನಿಮಿತ್ತ ಬೃಹತ್ “ಹಿಂದೂ ಮಹಾಗಣಪತಿ ಬಹಿರಂಗ ಸಭೆ”ಯನ್ನು ಆಯೋಜಿಸಲಾಗಿದೆ.
ಈ ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ಪ್ರಖರ ಹಿಂದುತ್ವವಾದಿ ಹಾಗೂ ‘ಹಿಂದೂ ಹುಲಿ’ ಎಂದೇ ಖ್ಯಾತರಾದ ಬಸನಗೌಡ ಪಾಟೀಲ ಯತ್ನಾಳ್ ಅವರು ಆಗಮಿಸುತ್ತಿದ್ದು, ಕಾರ್ಯಕ್ರಮದ ಕಳೆ ಹೆಚ್ಚಿಸಲಿದ್ದಾರೆ.
ಕಾರ್ಯಕ್ರಮದ ವಿವರ:
ದಿನಾಂಕ ಹಾಗೂ ಸಮಯ: ಸೆಪ್ಟೆಂಬರ್ 28, ಸೋಮವಾರ – ಸಾಯಂಕಾಲ 5:00 ಗಂಟೆಗೆ ಭಜರಂಗದಳ ಸರ್ಕಲ್, ಗಜೇಂದ್ರಗಡ
ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಯತ್ನಾಳ್ ಅವರ ಅಭಿಮಾನಿಗಳು, ಹಿಂದೂ ಬಂಧುಗಳು ಹಾಗೂ ಕಾರ್ಯಕರ್ತರು ಈ ಬಹಿರಂಗ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಕೋಟೆನಾಡು ಗಜೇಂದ್ರಗಡದ ಭಜರಂಗದಳ ಸರ್ಕಲ್ನಲ್ಲಿ ನಡೆಯುವ ಈ ಬೃಹತ್ ಸಮಾವೇಶಕ್ಕೆ ಸಾರ್ವಜನಿಕರು ಹಾಗೂ ಸರ್ವ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಭಾಷಣವನ್ನು ಆಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಕೋರಿದ್ದಾರೆ.




