
ಎಸ್ಎಫ್ಐ:16ನೇ ರಾಜ್ಯ ಸಮ್ಮೇಳನ-ಪೋಸ್ಟರ್ ಬಿಡುಗಡೆ.
ಸಾರ್ವತ್ರಿಕ ಶಿಕ್ಷಣ, ಸಮಾನತೆ, ಸೌಹಾರ್ದತೆಗಾಗಿ ಎಸ್ ಎಫ್ ಐ ನ 16ನೇ ರಾಜ್ಯ ಸಮ್ಮೇಳನ, ಪೋಸ್ಟರ್ ಬಿಡುಗಡೆ.
ಗಜೇಂದ್ರಗಡ:ಸತ್ಯಮಿಥ್ಯ (ಸೆ-20)
ಇಂದು ಗಜೇಂದ್ರಗಡ ನಗರದ ಕೆಎಸ್ಎಸ್ ಕಾಲೇಜಿನಲ್ಲಿ ಎಸ್ಎಫ್ಐ ನ ರಾಜ್ಯ ಸಮ್ಮೇಳನದ ಪೋಸ್ಟರ್ ನ್ನು ಸಿಐಟಿಯು ಕಾರ್ಮಿಕ ಸಂಘಟನೆ ಮುಖಂಡರಾದ ಮೈಬು ಹವಾಲ್ದಾರ್ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ರಾಜ್ಯ ಪದಾಧಿಕಾರಿಗಳಾದ ಗಣೇಶ ರಾಠೋಡ ಮಾತನಾಡಿ ಸಾರ್ವತ್ರಿಕ ಶಿಕ್ಷಣ, ಸಮಾನತೆ, ಸೌಹಾರ್ದತೆಗಾಗಿ ಎಂಬ ಆಶಯದೊಂದಿಗೆ ಶಿಕ್ಷಣದ ಪ್ರಜಾಪ್ರಭುತ್ವೀಕರಣ, ಶಿಕ್ಷಣದ ವಿಕೇಂದ್ರೀಕರಣ, ಶಿಕ್ಷಣದ ಧರ್ಮನಿರಪೇಕ್ಷಕ್ಕಾಗಿ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಒತ್ತಾಯಿಸಿ ಎಸ್ಎಫ್ಐ 16 ನೇ ರಾಜ್ಯ ಸಮ್ಮೇಳನ ಇದೇ ತಿಂಗಳು 26-28 ರ ವರೆಗೆ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ. ಅದರ ಜೊತೆಗೆ ಸಂಘಟನೆ ಕಳೆದ ಸಮ್ಮೇಳನದಿಂದ ಈ ಸಮ್ಮೇಳನದ ತನಕ ಏನಿಲ್ಲಾ ಗುರಿಗಳನ್ನು ತಲುಪಿದೆವು ಇನ್ನೂ ತಲುಪಬೇಕಾದ ಗುರಿಗಳೇನು ಎಂಬ ಬಗ್ಗೆ ಸಾರ್ವತ್ರಿಕ ಸಮಾನತೆ ಶಿಕ್ಷಣಕ್ಕಾಗಿ ನಡೆಯುವ ಹೋರಾಟ ಮತ್ತಷ್ಟು ಬಲಿಷ್ಠಗೊಳಿಸಲು ಏನು ಮಾಡಬೇಕೆಂದು ಚರ್ಚಿಸಿ, ವಿಮರ್ಶೆ ಮಾಡಿಕೊಂಡು ಹೊಸ ನಾಯಕತ್ವವನ್ನು ಆಯ್ಕೆ ಮಾಡಿಕೊಂಡು ಮುನ್ನಡೆಯಲು ಇರುವ ಉನ್ನತ ವೇದಿಕೆ ಈ ನಮ್ಮ ಸಮ್ಮೇಳನ ಹಾಗಾಗಿ ಇದರಲ್ಲಿ ರಾಷ್ಟ್ರದ- ರಾಜ್ಯದ ಶೈಕ್ಷಣಿಕ ಪರಿಸ್ಥಿತಿ ಬಗ್ಗೆ ಬರುವ ಜಿಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳು ಚರ್ಚಿಸಿ ನಿರ್ಣಯ ತೆಗೆದುಕೊಂಡು ಜಾರಿ ಮಾಡಲು ಗುರಿ ಇಟ್ಟುಕೊಂಡು ಹೋಗುತ್ತಾರೆ ಹಾಗಾಗಿ ಇದು ಒಂದು ಉನ್ನತ ವೇದಿಕೆ ಆಗಿದೆ ಎಂದರು.
ನಂತರ ಕಾಲೇಜಿನ ಪ್ರಾಂಶುಪಾಲರಾದ ಬಿ ಎನ್ ಗೌಡ್ರ ಅವರು ಮಾತನಾಡಿ ಸಾರ್ವತ್ರಿಕ ಶಿಕ್ಷಣ, ಸಮಾನತೆ, ಸೌಹಾರ್ದತೆಗಾಗಿ ನಡೆಯುತ್ತಿರುವ ಎಸ್ ಎಫ್ ಐ ನ ರಾಜ್ಯ 16ನೇ ರಾಜ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ಹಾರೈಸಿ ಮಾತನಾಡಿದರು.
ಎಸ್ ಎಫ್ ಐ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರು ರಾಠೋಡ ಮಾತನಾಡಿ ರಾಜ್ಯ ಸಮ್ಮೇಳನಕ್ಕೂ ಮುನ್ನ ತಾಲ್ಲೂಕು ಜಿಲ್ಲಾ ಸಮ್ಮೇಳನಗಳು ನಡೆದು ಅಲ್ಲಿ ಆಯ್ಕೆ ಆದ ವಿದ್ಯಾರ್ಥಿ ಪ್ರತಿನಿಧಿಗಳು ರಾಜ್ಯ ಸಮ್ಮೇಳನಕ್ಕೆ ತೆರಳುತ್ತಾರೆ ನಮ್ಮ ಗದಗ ಜಿಲ್ಲೆಯಿಂದಲೂ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ತಾಲ್ಲೂಕು ಅಧ್ಯಕ್ಷರಾದ ಅನಿಲ್ ರಾಠೋಡ, ಪದಾಧಿಕಾರಿಗಳಾದ ಶರಣು ಎಂ, ಬಸವರಾಜ, ಸದೀಪ್ ಹುಬ್ಬಳ್ಳಿ, ಪ್ರದೀಪ್ ಎಂ, ಸನೀಲ್, ಮಾಂತೇಶ, ಮುಪ್ಪಯ್ಯ ಬೆಳವನಕಿ, ಬಸು, ಅಂದಪ್ಪ ಹಡಪದ, ಪ್ರದೀಪ್ ಮೇಟಿ, ಪ್ರವೀಣ, ಯಲ್ಲಪ್ಪ ಡಂಬಳೇ, ಯವನೂರು ಚೂರಿ, ಶ್ರೀಧರ್ ಕುರಿ, ರಕ್ಷಿತಾ, ಶಂಕ್ರಮ್ಮ, ಕಾಲೇಜಿನ ವಿದ್ಯಾರ್ಥಿಗಳ ಹಾಜರಿದ್ದರು.
ವರದಿ:ಸುರೇಶ ಬಂಡಾರಿ.