ಜಿಲ್ಲಾ ಸುದ್ದಿ

ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರ – ಈರಣ್ಣ ಕಡಾಡಿ.

Share News

ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರ – ಈರಣ್ಣ ಕಡಾಡಿ.

ಮೂಡಲಗಿ:ಸತ್ಯಮಿಥ್ಯ ( ಜೂ-28).

ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರಗತಿಯ ಬೆಳವಣಿಗೆಗಳು ನಡೆಯುತ್ತಿದ್ದು ಅಕ್ಟೋಂಬರ್-ನವ್ಹೆಂಬರ ತಿಂಗಳಿನಲ್ಲಿ ಬಾರಿ ಬದಲಾವಣೆ ಆಗಲಿದೆ ಎಂದು ರಾಜ್ಯ ಸರ್ಕಾರದ ಸಹಕಾರ ಸಚಿವ ಕೆ. ಎನ್. ರಾಜಣ್ಣ ಹೇಳಿಕೆ ಗಮನಿಸಿದರೆ ಮತ್ತು ಕಾಂಗ್ರೇಸ್‌ನಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿದರೇ ಮುಂದಿನ ದಿನಗಳಲ್ಲಿ ಡಬಲ್ ಇಂಜಿನ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.

ಶನಿವಾರ ಜೂ-28 ರಂದು ಹಳ್ಳೂರ ಗ್ರಾಮದ ಹಳ್ಳದರಂಗ ದೇವಸ್ಥಾನ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 50 ಲಕ್ಷ ರೂ,ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮುಂದುವರೆದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೇಸ್ ದಿನನಿತ್ಯ ಹಗರಣಗಳು, ಮಂತ್ರಿಗಳ ಕಚ್ಚಾಟ, ರಾಜ್ಯದಲ್ಲಿ ಅರಾಜಕತೆ, ಆರ್ಥಿಕ ಸಂಕಷ್ಟಗಳು ಈ ರೀತಿ ಸಮಸ್ಯೆಗಳ ಸರಮಾಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ರಾಜ್ಯದ ಜನರಿಗೆ ಅಭಿವೃದ್ದಿ ಎಂಬುವುದು ಮರಿಚಿಕೆಯಾಗಿದೆ. ಕಾಂಗ್ರೇಸ್ ಶಾಸಕರೆ ಸರ್ಕಾರದ ಕಾರ್ಯ ವೈಖರಿಗಳ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಿರುವುದು ಎದ್ದು ಕಾಣುತ್ತಿದೆ. ರಾಜ್ಯದ ಜನ ಅಭಿವೃದ್ದಿ ಪರವಾದ ಸರ್ಕಾರವನ್ನು ಬಯಸುತ್ತಿದ್ದಾರೆ ಎಂದರು.

ಈಗಾಗಲೇ ಹಳ್ಳೂರ ಗ್ರಾಮಕ್ಕೆ ರಾಜ್ಯಸಭಾ ಸಂಸದರ ನಿಧಿಯಿಂದ ಹಳ್ಳದರಂಗ ಸಮುದಾಯ ಭವನಕ್ಕೆ 50 ಲಕ್ಷ ರೂ.ಗಳು, ಚಂದ್ರವ್ವದೇವಿ ಸಮುದಾಯ ಭವನಕ್ಕೆ 5 ಲಕ್ಷ ರೂ.ಗಳು, ಮಲ್ಲಿಕಾರ್ಜುನ ಸಮುದಾಯ ಭವನಕ್ಕೆ 5 ಲಕ್ಷ ರೂ.ಗಳು, ಗಾಂಧಿ ನಗರದ ಬಸವೇಶ್ವರ ಸಮುದಾಯ ಭವನಕ್ಕೆ 5 ಲಕ್ಷ ರೂ.ಗಳು, ಆಧಿನಾಥ ಸಮುದಾಯ ಭವನಕ್ಕೆ 5 ಲಕ್ಷ ರೂ.ಗಳು, ಬಸ್ ಪ್ರಯಾಣಿಕರ ತಂಗುದಾನಕ್ಕೆ 5 ಲಕ್ಷ ರೂ.ಗಳು ಹೀಗೆ ಎಲ್ಲ ಸಮುದಾಯದವರಿಗೂ ಕೂಡಾ ದೊಡ್ಡ ಪ್ರಮಾಣದಲ್ಲಿ ಅನುದಾನವನ್ನು ವಿತರಿಸುವ ಮೂಲಕ ಹಳ್ಳೂರ ಗ್ರಾಮದ ಅಭಿವೃದ್ದಿಯಲ್ಲಿ ನಾನು ಕೂಡಾ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಅದೇ ರೀತಿ ಬರುವಂತಹ ದಿನಗಳಲ್ಲಿ ಯುವಕರ ಅನುಕೂಲಕ್ಕಾಗಿ ಗ್ರಾಮದಲ್ಲಿ ಒಂದು ಓಪ್ ಜಿಮ್ ಸೌಲಭ್ಯ ಒದಗಿಸಿ ಕೊಡಲು ನಾನು ಪ್ರಯತ್ನಿಸುತ್ತಿದ್ದೇನೆ, ಇನ್ನೂ ಹೆಚ್ಚು ಸೇವೆಯನ್ನು ಮಾಡಲು ನಾನು ಸಿದ್ದನಿದ್ದೇನೆ, ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಚನ್ನಮ್ಮ ವೃತ್ತದ ಹತ್ತಿರ ಬಸ್ ಪ್ರಯಾಣಿಕರ ತಂಗುದಾನಕ್ಕೆ ಪೂಜೆ ನೇರವೇರಿಸಿದರು. ತದನಂತರ ಚಂದ್ರವ್ವದೇವಿ ದೇವಸ್ಥಾನದ ಹತ್ತಿರ ನಿರ್ಮಾಣಗೊಂಡ ಸಮುದಾಯ ಭವನ ಕಟ್ಟಡವನ್ನು ಉದ್ಘಾಟಿಸಿದರು,

ಈ ಸಂದರ್ಭದಲ್ಲಿ, ಗ್ರಾ.ಪಂ ಅಧ್ಯಕ್ಷೆ ನೀಲವ್ವ ಹೊಸಟ್ಟಿ, ಸದಸ್ಯರಾದ ಸದಾಶಿವ ಮಾವರಕರ, ಪ್ರಮುಖರಾದ ಬಸವಣೆಪ್ಪ ಡಬ್ಬನ್ನವರ, ಶಂಕರ ಲೋಕನ್ನವರ, ಕುಮಾರ ಲೋಕನ್ನವರ, ಶಿವಪ್ಪ ಕೌಜಲಗಿ, ಶ್ರೀಕಾಂತ ಕೌಜಲಗಿ, ಸುರೇಶ ಮಗದುಮ್ಮ, ತುಕಾರಾಮ ಸನದಿ, ಮುತ್ತೆಪ್ಪ ಬೋಳನ್ನವರ, ಬಾಳಗೌಡ ಪಾಟೀಲ, ಗೂಳಪ್ಪ ನೇಸೂರ, ಯಲ್ಲಪ್ಪ ಕುಲಗೋಡ, ಆನಂದ ಸಂತಿ ಗಿರಿಮಲ್ಲಪ್ಪ ಕಲ್ಲೋಳಿ, ಗಿರಮಲ್ಲಪ್ಪ ಸಂತಿ, ಲಕ್ಷ್ಮಣ ಹೊಸಟ್ಟಿ, ಈರಪ್ಪ ಢವಳೇಶ್ವರ, ಶ್ರೀಶೈಲ ಪೂಜೇರಿ, ಬಸವರಾಜ ಗಾಡವಿ, ಚಂದ್ರಶೇಖರ ಸಪ್ತಸಾಗರ, ಪ್ರವೀಣ ಮಾವರಕರ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಶಿವಾನಂದ ಮುಧೋಳ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!