ಬಾಕಿ ತೆರಿಗೆ ಪಾವತಿಸದಿದ್ರೆ ಕಾನೂನು ಕ್ರಮ: ತಾಪಂ ಇಓ ಸೂಚನೆ
ಕುಕನೂರ:ಸತ್ಯಮಿಥ್ಯ (ಸ-20)
ತಾಲೂಕಿನ 15 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಣ್ಣ ಮತ್ತು ದೊಡ್ಡ ಕೈಗಾರಿಕಾ ವಲಯಗಳು ಕಳೆದ ಮೂರು ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತ್ವರಿತವಾಗಿ ತೆರಿಗೆ ಪಾವತಿಸಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಪಾಟೀಲ್ ಬಿರಾದಾರ್ ಅವರು ಸೂಚಿಸಿದ್ದಾರೆ.
ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಂಪನಿಯ ಮೊಬೈಲ್ ಟವರ್ ಗಳು ಹಾಗೂ ಸಾರ್ವಜನಿಕ ಮಳಿಗೆಗಳು, ಪೆಟ್ರೋಲ್ ಬಂಕ್ ಗಳು, ಕ್ರಷರ್ ಗಳು, ಖಾಸಗಿ ಶಾಲೆ-ಕಾಲೇಜುಗಳು, ವಾಣಿಜ್ಯ ಆಸ್ತಿಗಳು ಸೇರಿದಂತೆ ಇತರೆ ಎಲ್ಲಾ ಸಣ್ಣ/ದೊಡ್ಡ ವ್ಯಾಪಾರಿಗಳು ಗ್ರಾ.ಪಂ ಗಳಿಗೆ ಪ್ರತಿವರ್ಷ ತೆರಿಗೆ ಪಾವತಿ ಮಾಡುವುದು ಕಡ್ಡಾಯವಾಗಿರುತ್ತದೆ. ಸತತವಾಗಿ ಮೂರು ವರ್ಷಗಳಿಂದ ತೆರಿಗೆ ಪಾವತಿಸದೇ ಇರುವ ಕೈಗಾರಿಕಾ, ವಾಣಿಜ್ಯ ಮಳೆಗೆಗಳಿಗೆ, ಇನ್ನಿತರ ವಸತಿ-ನಿವೇಶನ ಕಟ್ಟಡಗಳಿಗೆ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 200 (4) ರ ಅಡಿಯಲಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಪಾಟೀಲ್ ಬಿರಾದಾರ್ ಅವರು ಎಚ್ಚರಿಸಿದ್ದಾರೆ.
ವರದಿ : ಚೆನ್ನಯ್ಯ ಹಿರೇಮಠ.