
ದೇವಲ ಗಾಣಗಾಪುರದಲ್ಲಿ ಪಿಎಸ್ಐ ಸಂಗೀತಾ ಶಿಂಧೆ ನೇತೃತ್ವದಲ್ಲಿ ಶಾಂತಿ ಸಭೆ

ಸತ್ಯಮಿಥ್ಯ ಸುದ್ದಿಮೂಲ ದೇವಲ ಗಾಣಗಾಪುರ:
ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದೇವಲ ಗಾಣಗಾಪುರದಲ್ಲಿ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ ನಡೆಯಿತು.
ಪಿಎಸ್ಐ ಸಂಗೀತಾ ಶಿಂಧೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸುವಂತೆ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಗೂ ಯುವಕರಿಗೆ ಸೂಚಿಸಲಾಯಿತು.

ಹಬ್ಬದ ಸಂದರ್ಭದಲ್ಲಿ ಮೆರವಣಿಗೆ, ಧ್ವನಿವರ್ಧಕ ಬಳಕೆ, ಸಂಚಾರ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಸೇರಿದಂತೆ ಕಾನೂನು ನಿಯಮಗಳನ್ನು ಪಾಲಿಸುವ ಕುರಿತು ಸಭೆಯಲ್ಲಿ ತಿಳಿವಳಿಕೆ ನೀಡಲಾಯಿತು.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಎಲ್ಲರೂ ಪರಸ್ಪರ ಸಹಕಾರದೊಂದಿಗೆ ಹಬ್ಬ ಆಚರಿಸಬೇಕು. ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು ಎಂದು ಪಿಎಸ್ಐ ಸಂಗೀತಾ ಶಿಂಧೆ ಮನವಿ ಮಾಡಿದರು.
ಸಭೆಯಲ್ಲಿ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಯುವಕರು, ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಹಬ್ಬ ಆಚರಣೆ ಸಂಭ್ರಮದಿಂದ ಇರಲಿ, ಆದರೆ ಕಾನೂನು-ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗಬಾರದು” ಎಂಬ ಸಂದೇಶವನ್ನು ಪೊಲೀಸ್ ಇಲಾಖೆ ನೀಡಿತು.
ಈ ಸಂಧರ್ಭದಲ್ಲಿ ಎಸ್ ಆಯ ಬಸವರಾಜ ವರಮಾ,ಉಧಯಭಟ ಪೂಜಾರಿ,ಫಿರೋಜ್ ಮನಿಯಾರ,ಗುಂಡಪ್ಪ ಹೂಸಮನಿ,ಮೃಹಿಬೂಬ ತಾಂಬೋಳಿ, ರಾಕೇಶ್ ವಡಗೇರಿ,ಪಿಂಟು ಘತ್ತರಗಿ, ಶ್ರೀಪಾದ್ ಬಳಗುಂಪಿ,ಒಂಕಾರ ಹೇರೂರ, ಕಾಶೀನಾಥ್ ಬಟ್ಟರಕಿ,ನಜೀರ ಜವಳಿ ಸೇರಿದಂತೆ ಅನೇಕರು ಇದ್ದರು.




