ಟ್ರೆಂಡಿಂಗ್ ಸುದ್ದಿಗಳು

ವಿ.ಟಿ.ಆರ್  ಆಂಗ್ಲ ಮಾಧ್ಯಮ ಶಾಲೆಯಲ್ಲಿಂದು ಅಕ್ಷರ ಅಭ್ಯಾಸ ಕಾರ್ಯಕ್ರಮ.

Share News

ವಿ.ಟಿ.ಆರ್  ಆಂಗ್ಲ ಮಾಧ್ಯಮ ಶಾಲೆಯಲ್ಲಿಂದು ಅಕ್ಷರ ಅಭ್ಯಾಸ ಕಾರ್ಯಕ್ರಮ.

Oplus_131072

ಗಜೇಂದ್ರಗಡ : ಸತ್ಯಮಿಥ್ಯ (ಜೂ -23).

ನಗರದ ವಿ. ಟಿ. ರಾಯಬಾಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಬೆಳಿಗ್ಗೆ  ಶಾರದಾ ಪೂಜೆ ಹಾಗೂ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಶಾಲೆಯಲ್ಲಿ ಆಚರಿಸಲಾಯಿತು.

ಪುರೋಹಿತರಾದ ಶ್ರೀ ಪ್ರೇಮ ಮಿಶ್ರಾ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಪಾಲಕರಿಗೆ ಅಕ್ಷರ ಅಭ್ಯಾಸದ ಮಹತ್ವವನ್ನು ತಿಳಿಸಿ. ಅಕ್ಷರ ಅಭ್ಯಾಸವು ಪ್ರತಿ ಮಗುವಿನ ಶೈಕ್ಷಣಿಕ ಹಾದಿಯ ಮೈಲುಗಲ್ಲಾಗಿದೆ ಎಂದರು . ಈ ಕಾರ್ಯಕ್ರಮದ ಮೂಲಕ ಶಾಲೆಯ ನರ್ಸರಿ ಮತ್ತು ಎಲ್ ಕೆ ಜಿ ವಿದ್ಯಾರ್ಥಿಗಳಿಗೆ ಅಕ್ಷರದ ಜೊತೆಗೆ ದೈವಿಕತೆಯ ಸಾರವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪಾಲಕರು ತಮ್ಮ ಮಕ್ಕಳೊಂದಿಗೆ ಅತ್ಯಂತ ಸಂತಸದಿಂದ ಪಾಲ್ಗೊಂಡು, ಮಕ್ಕಳ ಅಕ್ಷರದ ಹಾದಿಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಪಾಲಕರು ಪ್ರತಿಯೊಬ್ಬ ಮಗುವಿನ ಭವಿಷ್ಯ ಕಟ್ಟುವಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಕರೊಂದಿಗೆ ನಾವೆಲ್ಲರೂ ಕೈ ಜೋಡಿಸುತ್ತೇವೆಂದು ಸಂತಸದ ನುಡಿಗಳನ್ನು ವ್ಯಕ್ತಪಡಿಸಿದರು.

ಅಧ್ಯಕ್ಷರಾದ  ಗಣಪತಸಾ ಎಚ್. ರಂಗ್ರೇಜಿ,ಶಾಲೆಯ ಕಾರ್ಯದರ್ಶಿಗಳಾದ ಗುರುನಾಥಾಸಾ. ರಾಯಬಾಗಿ,ಸಹ ಕಾರ್ಯದರ್ಶಿಗಳಾದ ಭಾಸ್ಕರಸಾ ರಾಯಬಾಗಿ,ಸದಸ್ಯರಾದ ಸುರೇಂದ್ರಸಾ ರಾಯಬಾಗಿ, ರಾಘವೇಂದ್ರ ರಾಯಬಾಗಿ, ಶಂಕರಸಾ ರಾಯಬಾಗಿ, ನಾಗರಾಜ್ ಪವಾರ್, ಸಿದ್ರಾಮಸಾ ರಾಯಬಾಗಿ, ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕಿಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ : ಪವನ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!