
ಮಾಲತಿ ಶಂಕರ ಪಟಗಾರ ಅವರಿಗೆ ಪಿಎಚ್ ಡಿ ಪದವಿ ಪ್ರದಾನ.
ಗದಗ: ಸತ್ಯಮಿಥ್ಯ (ಎ-11)
ಧಾರವಾಡದ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಕರ್ನಾಟಕ ವಿಶ್ವವಿದ್ಯಾಲಯವು ಡಾ. ಮಾಲತಿ ಶಂಕರ ಪಟಗಾರ ಅವರಿಗೆ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪ್ರದಾನ ಮಾಡಿದೆ. ಡಾ. ಮಾಲತಿ ಶಂಕರ ಪಟಗಾರ ಅವರು “*ಟ್ರೆಂಡ್ಸ್ ಇನ್ ಡೆಮೊಗ್ರಾಫಿಕ್ ಸ್ಟ್ರಕ್ಚರ್ ಇನ್ ಕರ್ನಾಟಕ*”ಎಂಬ ವಿಷಯದ ಕುರಿತಾಗಿ ಸಂಶೋಧನೆ ನಡೆಸಿದ್ದಾರೆ.
ಈ ಸಂಶೋಧನೆಗೆ ಕರ್ನಾಟಕ ಕಲಾ ಮಹಾವಿದ್ಯಾಲಯದ, ಅರ್ಥಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ ವಿ. ಶಾರದ ಅವರು ಮಾರ್ಗದರ್ಶನ ಮಾಡಿದ್ದಾರೆ. ಸಂಶೋಧನಾ ಮಹಾಪ್ರಬಂಧವು ಕರ್ನಾಟಕದಲ್ಲಿನ ಜನಸಂಖ್ಯಾ ರಚನೆಯ ಪ್ರವೃತ್ತಿಗಳ ಕುರಿತು ಬೆಳಕನ್ನು ಹರಿಸುತ್ತದೆ. ಗದಗ ನಗರದ ರಾಧಾಕೃಷ್ಣ ಕಾಲೋನಿ ನಿವಾಸಿಯಾದ ಇವರು, ಪ್ರಸ್ತುತ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ, ನರಸಾಪುರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.