ನಗರದ ಟರ್ನಲ್ ಪೇಟೆ ಹುಲಿಗೆಮ್ಮ ದೇವಿ ದೇವಸ್ಥಾನದ 22ನೇ ವರ್ಷದ ದಸರಾ ಮಹೋತ್ಸವ ಕಾರ್ಯಕ್ರಮಗಳು.
ಬೆಟಗೇರಿ:ಸತ್ಯಮಿಥ್ಯ (ಅ -04).
ನಗರದ ಬೆಟಗೇರಿಯ ಟರ್ನಲ್ ಪೇಟೆಯ ಶ್ರೀ ಹುಲಿಗೆಮ್ಮ ದೇವಿಯ 22ನೇ ವರ್ಷದ ದಸರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು ದೇವಸ್ಥಾನದ ಕಮಿಟಿಯಿಂದ ದಸರಾ ಮಹೋತ್ಸವದ ಹಬ್ಬವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ದೇವಸ್ಥಾನ ಕಮಿಟಿಯಿಂದ ನಿನ್ನೆ ದೇವಸ್ಥಾನ ದಲ್ಲಿ ಘಟ್ಟಸ್ಥಾಪನೆಯನ್ನು ಓಣಿಯ ಮಹಿಳೆಯರು ಹಿರಿಯರು ಮಕ್ಕಳು ಸೇರಿದಂತೆ ಶ್ರದ್ಧಾ ಭಕ್ತಿಯಿಂದ ನೆರವೇರಿಸುವುದರ ಮೂಲಕ ನವರಾತ್ರಿ ಹಬ್ಬಕ್ಕೆ ಚಾಲನೆಯನ್ನು ಮಾಡಲಾಯಿತು.
ದಿನಾಂಕ 3ರಿಂದ ದಿನಾಂಕ 11ನೇ ತಾರೀಖಿನವರೆಗೂ ದೇವಸ್ಥಾನದಲ್ಲಿ ಪ್ರತಿನಿತ್ಯವು ಸಾಯಂಕಾಲ 7ಗಂಟೆಗೆ ಶ್ರೀದೇವಿ ಪುರಾಣ ಪ್ರವಚನವನ್ನು ಗೋಪಾಲ್ ಮಾಂತ ಅವರಿಂದ ಜರಗುವುದು. ದಿನಾಂಕ 11ನೇ ತಾರೀಕಿನಂದು ಪುರಾಣ ಪ್ರಮಾಚನ ಮುಕ್ತಾಯ ಕಾರ್ಯಕ್ರಮ ನಂತರ ಮುತ್ತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮ ಜರಗುವುದು.
ದಿ. 12ನೇಯ ತಾರೀಖಿನಂದು ಶ್ರೀ ಹುಲಿಗೆಮ್ಮ ದೇವಿ ಮೂರ್ತಿಗೆ ಮಹಾ ಅಭಿಷೇಕ ವಿಶೇಷ ರೀತಿಯ ಅಲಂಕಾರದೊಂದಿಗೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗುವುದು ಅದೇ ದಿನ ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ ಜರಗುವುದು ಸಾಯಂಕಾಲ 6:00ಗಂಟೆಗೆ ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ.
ದಸರಾ ಮಹೋತ್ಸವಕ್ಕೆ ಎಲ್ಲಾ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಜರುವಂತೆ ಮಾಡಬೇಕೆಂದು ಹಾಗೂ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಈ ವರ್ಷದ ಉತ್ಸವ ಕಮಿಟಿಯ ಅಧ್ಯಕ್ಷರಾದ ಬಸವರಾಜ ಕರಿ ಈ ವರ್ಷದ ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮವನ್ನು ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.
ವರದಿ : ಮುತ್ತು ಗೋಸಲ್.