ಜಿಲ್ಲಾ ಸುದ್ದಿ

ಮನುಕುಲಕ್ಕೆ ವಾಲ್ಮೀಕಿ ಮಹರ್ಷಿಗಳ ಕೊಡುಗೆ ಅಪಾರ:ಡಾ.ಜೀವನ್ ಸಾಬ್ ಬಿನ್ನಾಳ.

Share News

ಮನುಕುಲಕ್ಕೆ ವಾಲ್ಮೀಕಿ ಮಹರ್ಷಿಗಳ ಕೊಡುಗೆ ಅಪಾರ:ಡಾ.ಜೀವನ್ ಸಾಬ್ ಬಿನ್ನಾಳ.

ಕುಕನೂರ :ಸತ್ಯಮಿಥ್ಯ (ಅ -17).

ದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ ಎಂದು ಡಾ. ಜೀವನ್ ಸಾಬ ವಾಲಿಕಾರ ಬಿನ್ನಾಳ ಜಾನಪದ ಕಲಾವಿದರು ತಿಳಿಸಿದರು.

ಕೊಪ್ಪಳ ಜಿಲ್ಲೆಯ ಕುಕುನೂರು ಪಟ್ಟಣದಲ್ಲಿ ತಾಲೂಕು ಆಡಳಿತ/ತಾಲೂಕು ಪಂಚಾಯತ್/ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಕುಕನೂರು ಮತ್ತು ಸಮಾಜವಾದ್ದವರಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭದ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಮೂಲಕ ಅವರನ್ನು ಸಾಮಾಜಿಕ, ಶೈಕ್ಷ ಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ ದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ ಎಂದು ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾದ ಜೀವನ್ ಸಾಬ ವಾಲಿಕಾರ್ ಬಿನ್ನಾಳ ಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೆಚ್. ಪ್ರಾಣೇಶ ತಹಶೀಲ್ದಾರರು ಮಾತನಾಡಿ.ವಾಲ್ಮೀಕಿ ಮಹರ್ಷಿ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿದವರು. ರಾಮಾಯಣ ಬರೆದದ್ದು ಕೂಡ ಮಹರ್ಷಿ ವಾಲ್ಮೀಕಿ. ಆದುದರಿಂದ ಇದನ್ನು ವಾಲ್ಮೀಕಿ ರಾಮಾಯಣ ಎಂದು ಕರೆಯಲಾಗುತ್ತದೆ ಆದ್ದರಿಂದ ಇಂಥವರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ನಡೆಯಬೇಕಾಗಿದೆ ಎಂದು ಹೇಳಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಮೆರವಣಿಗೆ ಹಾಗೂ ಕುಂಭ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಜ್ಯೋತಿ ಉದ್ಘಾಟನೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷೆ ಲಲಿತಮ್ಮ ಯಡೆಯಾಪುರ ನೆರವೇರಿಸಿದರು.

ಪ್ರಾಸ್ತಾವಿಕ ನುಡಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶಶಿಧರ ಸಕ್ರಿ ನೆರವೇರಿಸಿದರು.

ಕಾರ್ಯಕ್ರಮದ ನಿರೂಪಣೆ ಪೀರಸಾಬ ದಪೇದಾರ ಸಿ.ಆರ್‌.ಪಿ, ಎಸ್. ಎಂ. ಹಿರೇಮಠ ದೈಹಿಕ ಶಿಕ್ಷಕರು ನೆರವೇರಿಸಿದರು.ಮಹಾಋಷಿ ಅವರ ಭಾವಚಿತ್ರಕ್ಕೆ ಮುಖಂಡರಾದ ಕಳಕಪ್ಪ ಕಂಬಳಿ ಮಾಲಾರ್ಪಣೆ ನೆರವೇರಿಸಿದರು.

ನಂತರ ಪ್ರಸಾದ ಸೇವೆಯ ಕಾರ್ಯಕ್ರಮ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗ್ರೇಡ್ ಟು ತಹಸಿಲ್ದಾರ್ ಮುರಳಿಧರ ರಾವ್ ಕುಲಕರ್ಣಿ, ಬರಮಪ್ಪ ತಳವಾರ, ಬಸವನ ಗೌಡ ಪೊಲೀಸ್ ಪಾಟೀಲ್, ಟಿ. ಹಂಚಾಳಪ್ಪ ತಳವಾರ ಸಮಾಜದ ಮುಖಂಡರು, ರಾಮಣ್ಣ ಭಜಂತ್ರಿ, ಸಂಜೀವ ಇಟಗಿ, ಮಹಾಂತೇಶ ಹೂಗಾರ, ಈಶಪ್ಪ ಆರರೇ, ವಿಶ್ವನಾಥ ತಳವಾರ, ಹೇಮಣ್ಣ ಅಂಗಡಿ, ಶರಣಪ್ಪ ಚಂಡೂರ, ರಾಮಣ್ಣ ಮುಂದಲಮನಿ, ಶೇಖಪ್ಪ ಕಂಬಳಿ, ಸಿದ್ದಪ್ಪ ಬನ್ನಿಕೊಪ್ಪ, ಗಂಗಾಧರ ನಿರಾಣಿ, ಕನಕಪ್ಪ ಬ್ಯಾಡರ, ಮುತ್ತು ವಾಲ್ಮೀಕಿ, ರಾಮಚಂದ್ರಪ್ಪ, ಸಂತೋಷ ಅಡವಿಹಳ್ಳಿ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಯವರು, ಹಾಗೂ ತಹಸಿಲ್ದಾರ್ ಕಾರ್ಯಾಲಯದ ಸಿಬ್ಬಂದಿ ವರ್ಗದವರು, ಹಾಗೂ ಸಮಾಜದ ಗುರುಹಿರಿಯರು ಇತರರು ಇದ್ದರು.

ವರದಿ : ಚನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!