ಜಿಲ್ಲಾ ಜೇಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಭಾರಿ ಏರಿಕೆ ಜಿಮ್ಸ್ ನಿರ್ದೇಶಕರ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ.
ಜಿಲ್ಲಾ ಜೇಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಭಾರಿ ಏರಿಕೆ ಜಿಮ್ಸ್ ನಿರ್ದೇಶಕರ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ.
ಗದಗ:ಸತ್ಯಮಿಥ್ಯ (ಸೆ-20).
ಸರ್ಕಾರ ಬಿಪಿಎಲ್, ಕಡುಬಡವರಿಗೆ ಎಲ್ಲ ರೀತಿಯ ಚಿಕಿತ್ಸೆಗಳುಉಚಿತ ಎಂದು ಹೇಳಿದೆ. ಆದರೆ ಗದಗ ಜಿಮ್ಸ್ ಆಸ್ಪತ್ರೆ ಯಲ್ಲಿ ಎಲ್ಲ ರೀತಿಯ ರಕ್ತ ತಪಾಸಣೆ, ಎಂಡೋಸ್ಕೋಪಿ, ಅಲ್ಟ್ರಾಸೌಂಡ್, ಸೋನೋಗ್ರಾಫಿ, ಎಕ್ಸರೇ, ದಂತ ಚಿಕಿತ್ಸೆ ಸೇರಿದಂತೆ ಎಲ್ಲ ದರಗಳಲ್ಲಿ ಎರಡು, ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಇದು ಬಡ ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಸರ್ಕಾರ ಬಡವರಿಗಾಗಿ ಗ್ಯಾರಂಟಿ ಯೋಜನೆ ಮಾಡಿದೆ. ಮತ್ತೊಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಂದ ಹಣ ವಸೂಲಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಜಿಮ್ಸ್ ನಿರ್ದೇಶಕರ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ:ಇನ್ನು ಹಿರಿಯ ವೈದ್ಯರು, ಅಧಿಕಾರಿಗಳ ಗಣನೆಗೆ ತೆಗೆದುಕೊಳ್ಳದೇ ತಪಾಸಣಾ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಇದು ಜಿಮ್ಸ್ ಆಸ್ಪತ್ರೆಯ ಬಹುತೇಕ ವೈದ್ಯರು, ಸಿಬ್ಬಂದಿಗಳಿಗೂ ಇಷ್ಟವಿಲ್ಲ. ನಿತ್ಯ ರೋಗಿಗಳು ವೈದ್ಯರ ಜೊತೆ ಜಗಳ ಮಾಡುತ್ತಿದ್ದಾರಂತೆ. ಇದರಿಂದ ಓಪಿಡಿಗಳಲ್ಲಿ ವೈದ್ಯರು ಸೇವೆ ಮಾಡೋದು ಕಷ್ಟವಾಗಿದ್ದು, ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಸರ್ವಾಧಿಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಇತ್ತ ತಿರುಗಿ ನೋಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ವರದಿ:ಮುತ್ತು ಗೋಸಲ