ಗದಗ – ಜಿಲ್ಲಾವಲಯ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳಿಗೆ ಉಚಿತ ಸಾಮಗ್ರಿ ಪೂರೈಕೆ.
ಗದಗ – ಸತ್ಯಮಿಥ್ಯ (ಅಗಸ್ಟ -10).
2024-25 ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಕುಶಲಕರ್ಮಿಗಳಿಗೆ ಉಚಿತವಾಗಿ ಹೊಲಿಗೆಯಂತ್ರ (ಮಹಿಳೆಯರಿಗೆ ಮಾತ್ರ ) , ಬಡಿಗತನ, ಧೋಬಿ ಹಾಗೂ ಕ್ಷೌರಿಕ ಸುಧಾರಿತ ಉಪಕರಣಗಳಿಗಾಗಿ ಕಾರ್ಯಕ್ರಮದಡಿ ಪೂರೈಸಲು www.Gadag.nic.in ವೆಬ್ ಸೈಟ್ ನಲ್ಲಿ ಸೆಪ್ಟೆಂಬರ್ 8 ರವರೆಗೆ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ 18 ರಿಂದ 45 ವರ್ಷದೊಳಗಿನ ಕುಶಲ ಕರ್ಮಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08372-220506 ಇಮೇಲ್ ಐಡಿ ddkvigadag@gmail.com ಸಂಪರ್ಕಿಸಬಹುದಾಗಿದೆ.