
ಮೋದಿಜಿ ಆಡಳಿತವನ್ನು ವಿಶ್ವವೇ ಮೆಚ್ಚಿದೆ – ಕಳಕಪ್ಪ ಬಂಡಿ.
ಗಜೇಂದ್ರಗಡ:ಸತ್ಯಮಿಥ್ಯ (ಜು-03)
ಸೇವೆ ಸುಶಾಸನ ಬಡವರ ಕಲ್ಯಾಣ ಎಂಬ ಧೇಯದೊಂದಿಗೆ 11 ವರ್ಷಗಳ ಆಡಳಿತ ಪೂರೈಸಿದ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಜಿ ಅವರ ಜನಪರ ಕಾರ್ಯಗಳನ್ನು ವಿಶ್ವವೇ ಮೆಚ್ಚಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಭಾರತೀಯ ಜನತಾ ಪಾರ್ಟಿ ರೋಣ ಮಂಡಲದ ವತಿಯಿಂದ ಗಜೇಂದ್ರಗಡದ ಮಾಜಿ ಸಚಿವ ಕಳಕಪ್ಪ ಬಂಡಿ ಅವರಗೃಹ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಕಶಿತ ಭಾರತ ಸಂಕಲ್ಪಸಭೆ ಉದ್ದೇಶಿಸಿ ಮಾತನಾಡಿದರು.
ಮೋದಿಜಿ ಅವರ 11 ವರ್ಷದ ಆಡಳಿತವು ಬಡವರು ಹಿಂದುಳಿದ ವರ್ಗದವರು ಪರಿಶಿಷ್ಟ ಜಾತಿಯವರು ಹಾಗೂ ಮಹಿಳೆಯರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. 2047ರ ವೇಳೆಗೆ ಭಾರತವು ಸ್ವಾವಲಂಬಿ ಹಾಗೂ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮುವಂತ ಪೂರಕ ಕಾರ್ಯಕ್ರಮಗಳನ್ನು ಮೋದಿಜಿ ಅವರು ಹಾಕಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ವಕ್ತಾರರಾಗಿ ಆಗಮಿಸಿದ್ದ ನಾಗರಾಜ್ ಕುಲಕರ್ಣಿ ಅವರು 11 ವರ್ಷದ ಆಡಳಿತದ ವಿವರವನ್ನು ನೀಡಿದರು ಭಾಜಪ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿದರು ಮಂಡಲ ಅಧ್ಯಕ್ಷರಾದ ಶ್ರೀ ಉಮೇಶ್ ಮಲ್ಲಾಪುರ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಕೆ ಚೌಹಾನ್ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬಾಳು ಬೋಸ್ಲೆ ರಮೇಶ ವಕ್ಕರ್ . ಶಿವಾನಂದ ಮಠದ ನಗರ ಘಟಕದ ಅಧ್ಯಕ್ಷರಾದ ರಾಜೇಂದ್ರ ಘೋರ್ಪಡೆ, ಭಾಸ್ಕರ್ ರಾಯಬಾಗಿ ಮುತ್ತಣ್ಣ ಕಡಗದ, ಶ್ರೀ ಅಶೋಕ್ ನವಲಗುಂದ್ ಹನುಮಂತಪ್ಪ ಹಟ್ಟಿಮನಿ, ಶರಣಪ್ಪ ಕಂಬಳಿ, ಮಹಾಂತೇಶ ಸೋಮನ ಕಟ್ಟಿ, ಅನಿಲ್ ಪಲ್ಲೇದ ಇಂದಿರಾ ತೇಲಿ ರೋಣ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.