
ರೋಣ – ಗಜೇಂದ್ರಗಡ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿ ಸಿದ್ದಣ್ಣ ಬಂಡಿ ಆಯ್ಕೆ.
ಪಂಚಮಸಾಲಿ ಪದಾಧಿಕಾರಗಳ ಆಯ್ಕೆ.
ರೋಣ: ಸತ್ಯಮಿಥ್ಯ ( ಜುಲೈ -25).
ನಗರದ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ರೋಣ ಮತ್ತು ಗಜೇಂದ್ರಗಡ ತಾಲ್ಲೂಕ ಪಂಚಮಸಾಲಿ ಸಮಾಜದ ನಿರ್ಧೇಶಕರ ಆಯ್ಕೆ ಪ್ರಕ್ರಿಯೆ ಜರುಗಿತು.
ಅಖಂಡ ರೋಣ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಸಿದ್ದಣ್ಣ ಬಂಡಿ, ಮತ್ತು ಉಪಾಧ್ಯಕ್ಷರಾಗಿ ವಿಶ್ವನಾಥ ಜಿಡ್ಡಿಬಾಗಿಲ ಅವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೋಣ, ಗಜೇಂದ್ರಗಡ, ಬೆಳವಣಕಿ, ಹಾಗೂ ನರೇಗಲ್ ವಲಯದ ವಿವಿಧ ಹಳ್ಳಿಗಳ ಪಂಚಮಸಾಲಿ ಸಮಾಜದ ಹಿರಿಯರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದ ನೂತನ ಅಧ್ಯಕ್ಷರಾದ ಸಿದ್ದಣ್ಣ ಬಂಡಿ. ಸಮಾಜ ಹಿರಿಯರು ಮತ್ತು ಬಾಂದವರು ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಯನ್ನು ನೀಡಿದ್ದೀರಿ. ನನ್ನ ಶಕ್ತಿಮೀರಿ ಸಮಾಜದ ಏಳಿಗೆಗೆ ಶ್ರಮಿಸುತ್ತೇನೆ ಎಂದರು.
ವರದಿ : ಸುರೇಶ ಬಂಡಾರಿ.