ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ : ಪ್ರಕಾಶ ಬಾಕಳೆ
ಗಜೇಂದ್ರಗಡ:ಸತ್ಯಮಿಥ್ಯ (ಜೂ-21).
ಪತಂಜಲಿ ಯೋಗ ಸಮಿತಿ ಮತ್ತು ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಹಾಗೂ ಪಿ.ಯು ಕಾಲೇಜು ಗಜೇಂದ್ರಗಡ ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ 21-06-2025 ಶನಿವಾರ ಬೆಳಿಗ್ಗೆ ಮಹಾವಿದ್ಯಾಲಯದ ಪ್ರಾಂಗಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಯೋಗಾಸನದ ಅಭ್ಯಾಸದ ಮೂಲಕ ನಾವು ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಪಡೆಯಬಹುದು, ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ಮಾಡುವ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಬೆಳಿಸಿಕೊಳ್ಳಿ ಎಂದು ಸಂಚಾಲಕ ಪ್ರಕಾಶ ಬಾಕಳೆ ವಿವಿಧ ಯೋಗದ ಭಂಗಿಗಳ ಬಗ್ಗೆ ವಿವರಣೆ ನೀಡಿದರು.
ಪಿ.ಯು ಕಾಲೇಜಿನ ಪ್ರಾಚಾರ್ಯ ಸಂಗಮೇಶ ಬಾಗೂರ ಮಾತನಾಡಿ, ಯೋಗವು 6000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ ಪ್ರತಿವರ್ಷ ಯೊಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಇಂದು ಆಚರಿಸಲಾಗುತ್ತದೆ ಎಂದರು.

ಸಿಬಿಎಸ್ಇ ಮುಖ್ಯೋಪಾಧ್ಯಾಯರಾದ ಲಕ್ಷ್ಮಿ ಓದಸುಮಠ ಯೋಗವು ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ವಿಶ್ರಾಂತಿ ಮಾಡಲು ಹಾಗೂ ಅನಗತ್ಯ ಉದ್ವೇಗಗಳ ಮೇಲಿನ ನಿಯಂತ್ರಣಕ್ಕೆ ಸಹಾಯಕ, ಭಾರತ ದೇಶವು ಇಡೀ ಪ್ರಪಂಚಕ್ಕೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಪರಿಚಯಿಸಿದೆ ಎಂದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯೋಗ ಭಂಗಿಗಳನ್ನು ಪ್ರದರ್ಶಿಸಿ ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು, ಈ ಸಂದರ್ಭದಲ್ಲಿ ಉಪನ್ಯಾಸಕರಾದ ಹುತ್ತಪ್ಪ ಮಾರನಬಸರಿ, ಶರಣು ಅಂಗಡಿ, ಶಾರಧ ಅಂಬೊರೆ, ವಿರೇಶ, ಅಶೋಕ ಅಂಗಡಿ, ಆನಂದ ಜೂಚನಿ, ಮಲ್ಲನಗೌಡ ಗೌಡರ, ಶಿವಕುಮಾರ, ಸಿದ್ರಾಮೇಶ, ಮಹಾಂತೇಶ ಬಿಜಕಲ್, ಈರಣ್ಣ, ಹನುಮಂತ, ದೊಡ್ಡೇಶ, ಶೃತಿ ನಡಕಟ್ಟಿನ, ಫಾತಿಮಾ, ರೇಣುಕಾ ಮಡಿವಾಳರ, ಮಾಧುರಿ ನಾಡಗೇರ, ದೈಹಿಕ ಶಿಕ್ಷಕರಾದ ಗುರುರಾಜ, ಪ್ರಶಾಂತ ಹಾರೊಗೇರಿ, ಭಾರತಿ ಹೂಗಾರ, ಆಶಾದೀಪ, ಸಂಗೀತಾ ಕಡಿವಾಳ ಮುಂತಾದವರು ಹಾಜರಿದ್ದರು.
ವರದಿ : ಚನ್ನು. ಎಸ್.