
ಕಲಿಯುವ ವ್ಯಕ್ತಿಗೆ ವಿಶ್ವವೇ ಗುರುವಾಗುತ್ತದೆ-ಗವಿಸಿದ್ದೇಶ್ವರ ಶ್ರೀ.
ನರೇಗಲ್:ಸತ್ಯಮಿಥ್ಯ (ಜೂ-12)
ಯಾವ ವ್ಯಕ್ತಿಗೆ ಕಲಿಯುವ ಮನಸ್ಸಿರುತ್ತದೆಯೋ ಅವನಿಗೆ ವಿಶ್ವವೇ ಗುರುವಾಗುತ್ತದೆ ಹಾಗೂ ಜೀವನ ಶುಲ್ಕ ಭರಿಸದೆ ಕಲಿಯುವ ಶಾಲೆಯಾಗುತ್ತದೆ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನರೇಗಲ್ ಪಟ್ಟಣದಲ್ಲಿ ಬುಧವಾರ ನಡೆದ ಸೈಬರ್ ಟೆಕ್ ಕಂಪ್ಯೂಟರ್ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು
ನರೇಗಲ್ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಆವರಣದಲ್ಲಿ ಬುಧವಾರ ನಡೆದ ಸೈಬರ್ ಟೆಕ್ ಕಂಪ್ಯೂಟರ್ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀವನದ ಪ್ರತಿ ಕ್ಷಣವು ನಿಸರ್ಗ ದೇವತೆ ಬದುಕಿನ ಪಾಠವನ್ನು ಪುಕ್ಕಟೆಯಾಗಿ ಕಲಿಸಿಕೊಡುತ್ತಾಳೆ. ಅನಕ್ಷರಸ್ಥ ಅಪ್ಪ ಖಾಲಿ ತಿರುಗಬೇಡವೆಂದು ಮಗನಿಗೆ ಹೇಳುವ ಮಾತಿನ ಅರ್ಥ ಮಂದಿಗೆ ನಂಬಿ ಕೆಟ್ಟವರು ಇದ್ದಾರೆ. ಆದರೆ ಮಣ್ಣು ನಂಬಿ ಕೆಟ್ಟವರಿಲ್ಲ ಅದಕ್ಕೆ ದುಡಿಯೋದನ್ನು ಕಲಿಯಬೇಕೆನ್ನುವುದಾಗಿದೆ. ವಿದ್ಯೆವೆಂದರೆ ನಾಲ್ಕು ಗೋಡೆಗಳ ಹೊರಗೆ ಕಾಯಕದ ಜೊತೆಗೆ ಕಟ್ಟಿಕೊಳ್ಳುವ ಗೌರಯುತ ಬದುಕಾಗಿದೆ ಎಂದರು.
ನರೇಗಲ್ ಪಟ್ಟಣದಲ್ಲಿ ಬುಧವಾರ ನಡೆದ ಸೈಬರ್ ಟೆಕ್ ಕಂಪ್ಯೂಟರ್ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಹಾಲಕೆರೆ ಮಠದ ಲಿಂಗಕ್ಯ ಅಭಿನವ ಅನ್ನದಾನ ಸ್ವಾಮೀಜಿಯವರ ಪುತ್ಥಳಿ ತುಲಾಭಾರ ನಡೆಯಿತು.
ಸಂತೋಷವಾಗಿದ್ದರೆ, ಮನುಷ್ಯನ 10 ಬೆರಳು ಚಪ್ಪಾಳೆ ತಟ್ಟುತ್ತವೆ. ದುಃಖದಲ್ಲಿದ್ದರೆ ಕೇವಲ 2 ಬೆರಳು ಮಾತ್ರ ಕಣ್ಣೀರು ಒರೆಸುತ್ತವೆ ಆದ್ದರಿಂದ ನಾವು ದುಃಖದಲ್ಲಿದ್ದಾಗ ಯಾರು ಬರಲಿಲ್ಲವೆಂದು ಬಯಸುವುದು ನಮ್ಮದೆ ತಪ್ಪಾಗುತ್ತದೆ. ಆದ್ದರಿಂದ ಒಳ್ಳೆಯದನ್ನು ಕಲಿಯುವುದು, ಕಲಿಸುವುದನ್ನು ರೂಢಿಯಲ್ಲಿಟ್ಟುಕೊಂಡರೆ ಯಾವಾಗಲೂ ಸಂತೋಷವಾಗಿ ಇರಬಹುದು ಎಂದರು. ಅನ್ನದಾನೇಶ್ವರ ಮಠದ ಎಲ್ಲಾ ಶ್ರೀಗಳು ಈ ಭಾಗದ ಮಕ್ಕಳ ಎದೆಯೊಳೆಗೆ ಅಕ್ಷರ ದೀಪ ಹಚ್ಚಿದ್ದಾರೆ ಅದು ಅಕ್ಷರ ಕ್ರಾಂತಿಯ ರೂಪದಲ್ಲಿ ಪ್ರಜ್ವಲಿಸುತ್ತಿದೆ ಎಂದರು.
ನರೇಗಲ್ ಪಟ್ಟಣದಲ್ಲಿ ಬುಧವಾರ ನಡೆದ ಸೈಬರ್ ಟೆಕ್ ಕಂಪ್ಯೂಟರ್ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಳೇ ವಿದ್ಯಾರ್ಥಿಗಳಿಂದ ಅನ್ನದಾನೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ವೈ. ಸಿ. ಪಾಟೀಲರ ಗುರುವಂದನ ಕಾರ್ಯಕ್ರಮ ನಡೆಯಿತು
ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮನುಷ್ಯನೆ ನೀನು ನೂರು ವರ್ಷ ಬದುಕು, ಆದರೆ ಕೆಲಸ ಬಿಟ್ಟು ಬದುಕಬೇಡವೆಂದು ಈಶಾವಾಸ್ಯ ಉಪನಿಷತ್ನ ಎರಡನೇ ಶ್ಲೋಕ ಹೇಳುತ್ತದೆ ಅದರ ಅರ್ಥವೂ ಸಹ ಕಾಯಕವೇ ಕೈಲಾಸವಾಗಿದೆ. ಆದ್ದರಿಂದ ನಾವು ಮಾಡುವ ಕೆಲಸನ್ನು ನಿಷ್ಠೆಯಿಂದ ಮಾಡಿದರೆ ಯಶಸ್ಸು ಸಿಗುತ್ತದೆ ಎಂದರು. ತಂತ್ರಜ್ಞಾನದ ಯುಗದಲ್ಲಿ ಬರುವ ವರ್ತಮಾನದ ಸವಾಲುಗಳನ್ನು ಅರ್ಥಮಾಡಿಕೊಂಡು ಸೇವೆ ಮಾಡಬೇಕು ಎನ್ನುವ ಉದ್ದೇಶದೊಂದಿಗೆ ಬಂದವರು ದೊಡ್ಡವರಾಗಿದ್ದಾರೆ ಅವರ ಪ್ರಮಾಣಿಕತೆಗೆ ಪ್ರೋತ್ಸಾಹ ಸಿಕ್ಕೆಸಿಗುತ್ತದೆ ಅದನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವನಲ್ಲಿ ಎಷ್ಟೊಂದು ಅದ್ಭುತ್ ಶಕ್ತಿಯಿದೆ ಎನ್ನುವುದಕ್ಕೆ ಕಂಪ್ಯೂಟರ್ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದಲ್ಲಿ 25 ವರ್ಷದ ನಿರಂತರ ತರಬೇತಿ ಒಳ್ಳೆಯ ಪರಿಣಾಮ ಬೀರಿದೆ ಎಂದರು.
ಈ ಸಂದರ್ಭದಲ್ಲಿ ಹಾಲಕೆರೆ ಮಠದ ಲಿಂಗಕ್ಯ ಅಭಿನವ ಅನ್ನದಾನ ಸ್ವಾಮೀಜಿಯವರ ಪುತ್ಥಳಿ ತುಲಾಭಾರ ಕಾರ್ಯಕ್ರಮ ಹಾಗೂ ಸೈಬರ್ ಟೆಕ್ ಸಂಸ್ಥೆಯ ಹಳೇ ವಿದ್ಯಾರ್ಥಿಗಳಿಂದ ಅನ್ನದಾನೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ವೈ. ಸಿ. ಪಾಟೀಲರ ಗುರುವಂದನ ಕಾರ್ಯಕ್ರಮ ನಡೆದವು. ನಂತರ ಜನಪದ ಕಲಾ ಸಂಭ್ರಮ ಕಾರ್ಯಕ್ರಮ ನಡೆಯಿತು.
ಈ ವೇಳೆ ನರೇಗಲ್ನ ಹಜರತ್ ರಹಿಮಾನ ಶ್ಯಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ ಶ್ಯಾವಲಿ ಶರಣರು, ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಹಿರಿಯ ವೈದ್ಯರಾದ ಡಾ. ಜಿ. ಕೆ. ಕಾಳೆ, ಡಾ. ಕೆ. ಬಿ. ಧನ್ನೂರ, ಪಟ್ಟಣ ಪಂಚಾಯತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಪ್ರಾಚಾರ್ಯರಾದ ಎಸ್. ಎಲ್. ಗುಳೇದಗುಡ್ಡ, ವೈ. ಸಿ. ಪಾಟೀಲ, ಮುಖಂಡರಾದ ಮುತ್ತಣ್ಣ ತೋಟಪ್ಪ ಕಡಗದ, ಸಿದ್ದಣ್ಣ ಬಂಡಿ, ವಿರೂಪಾಕ್ಷ ಸಂಗನಾಳ, ನಂದೀಶ ಅಚ್ಚಿ, ಬಸವರಾಜ ಮಡಿವಾಳರ ಇದ್ದರು.
ವರದಿ : ಚನ್ನು. ಎಸ್.