ಮೂಡಲಗಿ:ಸತ್ಯಮಿಥ್ಯ (ಡಿ -02).
ಪಟ್ಟಣದ ರೂರಲ್ ಡವಲ್ಪಮೆಂಟ್ ಸೊಸೈಟಿಯ ಆವರಣದಲ್ಲಿ ನಾಳೆಯಿಂದ ಮಂಗಳವಾರ ದಿ. 3 ರಿಂದ 9 ರವರಿಗೆ, ಸಂಜೆ 6 ಗಂಟೆಯಿಂದ 15ನೇ ಸತ್ಸಂಗ ಸಮ್ಮೇಳನ ಜರುಗಲಿದೆ ಎಂದು ವೇದಮೂರ್ತಿ ಶಂಕರಯ್ಯಾ ಹಿರೇಮಠ ತಿಳಿಸಿದರು.
ಪಟ್ಟಣದ ಗಾಂಧಿ ಚೌಕ ಹತ್ತಿರದ ಇರುವ ಗುರು ಮಠದಲ್ಲಿ ಶನಿವಾರ 15ನೇ ಸತ್ಸಂಗ ಸಮ್ಮೇಳನದ ಪ್ರಚಾರ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು, ಪರಮಪೂಜ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರು ಸತ್ಸಂಗದ ಅಧ್ಯಕ್ಷತೆ ವಹಿಸಿ, ಪ್ರವಚನ ಕಾರ್ಯಕ್ರಮ ನಡೆಸಿಕೊಡುವರು. ಇಂಚಲ ಸಾಧು ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಭಾರತಿ ಸ್ವಾಮೀಜಿಗಳು ಉದ್ಘಾಟಿಸುವರು. ಮಹಾಲಿಂಗಪೂರ ಸಿದ್ದಾರೂಢ ಮಠ ಶ್ರೀ ಸಹಜಾನಂದ ಸ್ವಾಮಿಗಳು, ಕಲಬುರ್ಗಿಯ ಎಂ.ಎ.ಪೂರ್ಣಪ್ರಜ್ಞಾ ಯೋಗಾಶ್ರಮದ ಮಾತೊಶ್ರೀ ಲಕ್ಷ್ಮೀ ತಾಯಿ, ಜೋಡಕುರಳಿ ಸಿದ್ದಾರೂಢ ಮಠ ಶ್ರೀ ಚಿದ್ಚನಾನಂದ ಭಾರತಿ ಸ್ವಾಮೀಜಿ, ಶಿವಾಪೂರ(ಹ) ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ದರಾಮ ಸ್ವಾಮೀಜಿ, ಇಟನಾಳ ಮೈಲಾರಲಿಂಗೇಶ್ವರ ದೇವಸ್ಥಾನ ಮತ್ತು ಸಿದ್ದೇಶ್ವರ ಆಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಜೀಯವರು ಭಾಗವಹಿಸುವರು. ಒಂದು ವಾರದ ವರೆಗೆ ಜರುಗಲಿರುವ ಈ ಪ್ರವಚನ ಕಾರ್ಯಕ್ರಮದ ನಂತರ ಪ್ರತಿದಿನ ಬಂದ ಭಕ್ತಾದಿಗಳಿಗೆಲ್ಲ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು.
ಈ ಸಮಯದಲ್ಲಿ ನೇಮಿನಾಥ ಬೇವಿನಕಟ್ಟಿ,ತಮ್ಮಣ್ಣ ಗಡಾದ,ಹಣಮಂತ ತುಬಚಿ,ವಿಲಾಸ ನಾಶಿ ಇದ್ದರು.
ವರದಿ : ಶಿವಾನಂದ ಮುಧೋಳ್.