ಐತಿಹಾಸಿಕ ಪರಂಪರೆಯನ್ನು ತಿಳಿಯಬೇಕು: ಮಾದವಿ ವೈದ್ಯ.
ಕುಕನೂರ:ಸತ್ಯಮಿಥ್ಯ (ಅಗಸ್ಟ್ -26)
ನಮ್ಮ ದೇಶಕ್ಕೆ ತನ್ನದೆ ಆದಂತಹ ಐತಿಹಾಸಿಕ ಪರಂಪರೆ ಇದೆ ಅದರಲ್ಲೂ ಇಂದಿನ ಯುವ ಪೀಳಿಗೆಗೆ ಅದನ್ನು ಪರಿಚಯಿಸುವ ಅಗತ್ಯತೆ ಇದೆ ಇದರಿಂದ ನಮ್ಮ ಕಲೆ ಸಂಸ್ಕೃತಿ ಪಾರಂಪರಿಕ ಜ್ಮಾನ ಮಕ್ಕಳಲ್ಲಿ ಮೂಡುತ್ತದೆ ಎಂದು ಅಂಗನವಾಡಿ ಮೇಲ್ವೀಚಾರಕಿ ಮಾದವಿ ವೈದ್ಯ ಹೇಳಿದರು.
ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ಸಿದ್ನೇಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ನಡೆದ ಕೃಷ್ಣ ರಾಧೆಯರ ವೇಷಭೂಷಣ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳ ಶಿಕ್ಷಣಕ್ಕೆ ಅಂಗನವಾಡಿಗಳು ಭದ್ರ ಬುನಾದಿಗಳಾಗಿವೆ ಅದರಂತೆ ನಮ್ಮಲ್ಲಿ ಅತ್ತುತ್ತಮ ಶಿಕ್ಷಣವು ದೊರೆಯುತ್ತಿದೆ ಇದರಿಂದ ಅಂಗನವಾಡಿಗಳಿಗೆ ಸೇರ್ಪಡೆಯಾಗುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಹಾಗೂ ಯಾವ ಒಂದು ಮಗುವು ಅಂಗನವಾಡಿಯಿಂದ ಹಾಗೂ ಅದರ ಸೌಲಭ್ಯಗಳಿಂದ ವಂಚಿತವಾಗದಂತೆ ನೋಡಿಕೊಳ್ಳಲಾಗುತ್ತಿದೆ ಅದರಂತೆ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ತಪ್ಪದೆ ಅಂಗನವಾಡಿಗಳಿಗೆ ಕಳಿಸಿ ಹಾಗೂ ಇಲ್ಲಿ ಯಾವ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಶಿಕ್ಷಣ ಒದಗಿಸಲಾಗುತ್ತಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆ ರತ್ನಾ ಮಾಲಗಿತ್ತಿಮಠ ಮಾತನಾಡಿ ನಾವು ಎಲ್ಲಾ ಪಾಲಕರ ಹಾಗೂ ತಾಯಂದಿಯರ ಸಹಕಾರದಿಂದ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮಾಡಿಸುತ್ತಿದ್ದೇವೆ ಅದರಂತೆ ಎಲ್ಲರೂ ನಮ್ಮ ಇಲಾಖೆ ಹಾಗೂ ನಮ್ಮ ಕರ್ತವ್ಯಕ್ಕೆ ಸಹಕಾರ ನೀಡಿದಲ್ಲಿ ಇನ್ನೂ ಹೆಚ್ಚಿನ ಕಾರ್ಯ ನಿರ್ವಹಿಸಲು ಸಾದ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೃಷ್ಣ ಹಾಗೂ ರಾಧೆ ವೇಷದಾರಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕುಡಿಕೆ ಒಡೆಯುವ ಸ್ಪರ್ದೆ ಏರ್ಪಡಿಸಿದ್ದು ಮಕ್ಕಳಿಗೆ ಅತಿವ ಸಂತಸವನ್ನುಂಟು ಮಾಡಿತು.
ಅಂಗನವಾಡಿ ಕಾರ್ಯಕರ್ತೆಯರಾದ ಶೃತಿ ಪರಶುರಾಮ್ ಕೊಪ್ಪಳ. ಶಿಲ್ಪಾ ವಿರೇಶ್ವರಯ್ಯ ಲಕ್ಕಲಕಟ್ಟಿ. ಸಹಾಯಕಿ ಶಾರದಾ ಸೋಮಶೇಖರ್ ಮನಗೂಳಿ ಸೇರಿದಂತೆ ಮಕ್ಕಳ ತಾಯಂದಿರು ಪಾಲಕರು ಹಾಜರಿದ್ದರು.
ವರದಿ :ಚೆನ್ನಯ್ಯ ಹಿರೇಮಠ ಕುಕನೂರ