ಹಾವೇರಿಯಲ್ಲಿ ‘ಸಾಹಿತ್ಯ’ಗೆ ಪ್ರತಿಭಾ ಪುರಸ್ಕಾರ ಪ್ರದಾನ
ಕೊಪ್ಪಳ ಜಿಲ್ಲೆಯಿಂದ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಮಗಳು ಸಾಹಿತ್ಯ ಎಂ. ಗೊಂಡಬಾಳ.
ಕೊಪ್ಪಳ :ಸತ್ಯಮಿಥ್ಯ ( ಜು -01)
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಮತ್ತು ಜಿಲ್ಲಾ ಘಟಕ, ಹಾವೇರಿ ವತಿಯಿಂದ ೨೦೨೪ನೇ ಸಾಲಿನ ರಾಜ್ಯಮಟ್ಟದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೊಪ್ಪಳ ನಗರದ ಸಾಹಿತ್ಯ ಎಂ. ಗೊಂಡಬಾಳ ಅವರನ್ನು ಸನ್ಮಾನಿಸಲಾಯಿತು.
ಅದ್ಧೂರಿ ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ. ೯೦ಕ್ಕಿಂತ ಅಧಿಕ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಕ್ರಮವಾಗಿ ೨೫೦೦ ಮತ್ತು ೩೦೦೦ ನಗದು ಪುರಸ್ಕಾರ ನೀಡಲಾಯಿತು.
ಕೊಪ್ಪಳ ಜಿಲ್ಲೆಯಿಂದ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಮಗಳು ಸಾಹಿತ್ಯ ಎಂ. ಗೊಂಡಬಾಳ (ಶೇ. ೯೩.೯೨ ಎಸ್.ಎಸ್.ಎಲ್.ಸಿ), ಮುನಿರಾಬಾದಿನ ಪತ್ರಕರ್ತ ನಾರಾಯಣ್ ರಾವ್ ಅವರ ಮಗಳು ಬೃಂಧ ಎಸ್.ಎನ್. (ಶೇ. ೯೦.೭೨ ಎಸ್.ಎಸ್.ಎಲ್.ಸಿ), ಪತ್ರಕರ್ತ ವೀರಣ್ಣ ಕಳ್ಳಿಮನಿ ಅವರ ಮಗ ಸಾಹಿಲ್ ಕುಮಾರ (ಪಿಯುಸಿ ಶೇ. ೯೫) ಹಾಗೂ ಕುಕನೂರಿನ ಪತ್ರಕರ್ತ ಬಸವರಾಜ ಕೊಡ್ಲಿರವರ ಮಗಳು ಕಾವ್ಯ (ಪಿಯುಸಿ ಶೇ. ೯೫) ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾನಿಪ ರಾಜ್ಯ ಕಾರ್ಯಕಾರಣಿ ವಿಶೇಷ ಆಹ್ವಾನಿತ ಸದಸ್ಯರಾದ ಎಚ್.ಎಸ್ ಹರೀಶ್ ಹಾಗೂ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರ, ಮಂಜುನಾಥ ಗೊಂಡಬಾಳ, ಈರಣ್ಣ ಕಳ್ಳಿಮನಿ, ಬಸವರಾಜ ಕೊಡ್ಲಿ ಭಾಗವಹಿಸಿದ್ದರು.
ವರದಿ : ಮಲ್ಲಿಕಾರ್ಜುನ ಹಿರೇಮಠ್