
ಒಂದೇ ಒಂದು ಹಗರಣ ಇಲ್ಲದೆ ಇವತ್ತಿನಿ ರಾಜಕಾರಣಿಗಳಿಗೆ ಮಾದರಿ ಆಗಿದ್ದಾರೆ. ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರ ನಿಲುವುಗಳನ್ನು ಹೊಂದಿರುವ ಸಿದ್ದರಾಮಯ್ಯನವರು:-ಮಹೇಶ್ ಗಾವರಾಳ.

ಕುಕನೂರ: ಸತ್ಯಮಿಥ್ಯ (ಆಗಸ್ಟ್ -17).
ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ, ಅಹಿಂದ ವರ್ಗದ ನಾಯಕರು ಮತ್ತು ಭಾಗ್ಯಗಳ ಸರದಾರ ಸನ್ಮಾನ್ಯ ಸಿದ್ದರಾಮಯ್ಯನವರು ರಾಜಕೀಯ ಜೀವನದಲ್ಲಿ ಒಂದೇ ಒಂದು ಹಗರಣ ಇಲ್ಲದೆ ಇವತ್ತಿನಿ ರಾಜಕಾರಣಿಗಳಿಗೆ ಮಾದರಿ ಆಗಿದ್ದಾರೆ.
ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರ ನಿಲುವುಗಳನ್ನು ಹೊಂದಿರುವ, ಅವರ ಆಶಯದಂತೆ ನಡೆದುಕೊಳ್ಳುತ್ತಿರುವುದು ಕೆಲವು ಪಟ್ಟ ಬದ್ದ ವೈರಿಗಳಿಗೆ ಸಹಿಸಿಕೊಳ್ಳದೆ, ಈವತ್ತು ರಾಜಭವನವನ್ನು ದುರುಪಯೋಗ ಪಡಿಸಿಕೊಂಡು ವಾಮ ಮಾರ್ಗದಲ್ಲಿ ಸಿದ್ದರಾಮಯ್ಯನವರಿಗೆ ಚುತೆ ಬರುವಂತೆ ನಡೆದುಕೊಳ್ಳುತ್ತಿರುವುದನ್ನು ಈ ರಾಜ್ಯದ ಜನ ಗಮನಿಸುತ್ತಿದೆ.
ರಾಜ್ಯಪಾಲರು ತಮ್ಮ ನಿಲುವನ್ನು ಬದಲಾಯಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ . ಭಾರತೀಯ ಜನತಾ ಪಕ್ಷ ಕೇಂದ್ರ ಸರ್ಕಾರದ ಮೂಲಕ ರಾಜ್ಯಪಾಲರಿಗೆ ಒತ್ತಡ ತರುವ ಮೂಲಕ ಈ ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಮಹೇಶ್ ಗಾವರಾಳ ಅಧ್ಯಕ್ಷರು ಕುಕನೂರು ತಾಲೂಕ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕ ಮಾಧ್ಯಮದ ಮುಂದೆ ತಿಳಿಸಿದರು.
ವರದಿ :ಚೆನ್ನಯ್ಯ ಹಿರೇಮಠ್.