ದೇಶದಲ್ಲಿ ಯುವ ಸಮೂಹದ ಚಿತ್ತ ಬಿಜೆಪಿಯತ್ತ – ಮುತ್ತಣ್ಣ ಕಡಗದ.
ರಾಜ್ಯದಲ್ಲಿ ಅತ್ಯಂತ ಕಡು ಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ- ಉಮೇಶ ಚನ್ನು ಪಾಟೀಲ್.

ದೇಶದಲ್ಲಿ ಯುವ ಸಮೂಹದ ಚಿತ್ತ ಬಿಜೆಪಿಯತ್ತ – ಮುತ್ತಣ್ಣ ಕಡಗದ.
ಗಜೇಂದ್ರಗಡ:ಸತ್ಯಮಿಥ್ಯ (ಸ-14).
ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಸತತ ಮೂರನೇ ಭಾರಿ ದೇಶದ ಚುಕ್ಕಾಣಿ ಹಿಡಿದಿದೆ. ಇಂದು ಯುವ ಸಮೂಹ ಬಿಜೆಪಿಯನ್ನು ಸೇರಲು ಇಷ್ಟಪಡುತ್ತಿದ್ದಾರೆ.ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನು ಗರಿಷ್ಠ ಸಂಖ್ಯೆಯ ಸದಸ್ಯತ್ವ ಮಾಡುವ ಗುರಿಯೊಂದಿಗೆ ಭೂತ್ ಮಟ್ಟದಲ್ಲಿ ಶ್ರಮವಹಿಸಬೇಕು ಎಂದು ರೋಣ ಮಂಡಲ ಅಧ್ಯಕ್ಷರಾದ ಮುತ್ತಣ್ಣ ಕಡಗದ ನುಡಿದರು.
ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಇಂದು ಯುವ ಮೋರ್ಚಾ ರೋಣ ಮಂಡಲ ವತಿಯಿಂದ ಸದಸ್ಯತ ಅಭಿಯಾನದ ಅಂಗವಾಗಿ ನಡೆದ ಯುವ ಮೋರ್ಚಾ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಭೆಯನ್ನು ಉದ್ದೇಶಿಸಿ ರೋಣ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಉಮೇಶ್ ಚನ್ನು ಪಾಟೀಲ ಮಾತನಾಡಿ. ರಾಜ್ಯದಲ್ಲಿ ಸ್ವತಃ ಮುಖ್ಯಮಂತ್ರಿ ಮುಡಾ ಹಗರಣದಲ್ಲಿ ಸಿಕ್ಕಾಕೊಂಡಿದ್ದಾರೆ ಹಾಗೂ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ದುರುಪಯೋಗ ಹಗರಣದಲ್ಲಿ ಒಬ್ಬ ಸಚಿವ ರಾಜೀನಾಮೆ ನೀಡಿ ಜೈಲು ಪಾಲಾಗಿದ್ದಾರೆ.ಇಂದು ರಾಜ್ಯದಲ್ಲಿ ಕಡುಭ್ರಷ್ಟ ಸರ್ಕಾರ ಆಡಳಿತದಲ್ಲಿದೆ. ರೋಣ ಮತಕ್ಷೇತ್ರ 206 ಭೂತ್ ಗಳನ್ನು ಹೊಂದಿದ್ದು ಪ್ರತಿ ಭೂತ್ ಗಳಲ್ಲಿ 300 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದುವ ಗುರಿಯೊಂದಿಗೆ ಒಟ್ಟಾರೆ 60 ಸಾವಿರ ಬಿಜೆಪಿ ಸದಸ್ಯತ್ವ ಗುರಿಯೊಂದಿಗೆ ನಮ್ಮ ಯುವ ಕಾರ್ಯಕರ್ತರು ಕಾರ್ಯ ಪ್ರಾರಂಭಿಸಿದ್ದಾರೆ ಎಂದರು.
ರೋಣ ಮಂಡಲ ಬಿಜೆಪಿ ಪ್ರಧಾನಕಾರ್ಯದರ್ಶಿ ಉಮೇಶ ಮಲ್ಲಾಪುರ ಮಾತನಾಡಿ.ಚುನಾವಣೆಗೂ ಮುನ್ನ ಅಹಿಂದ ಜಪ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಂದತಕ್ಷಣ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿಕೊಳ್ಳುತ್ತಾರೆ.
ಈ ಸಭೆಯಲ್ಲಿ ಚಂದ್ರು ಕುರಿ, ಸುರೇಶ ಚೌಹಾಣ್, ಬಾಲಾಜಿ ರಾವ್ ಭೋಸಲೆ, ಶಿವಕುಮಾರ ದಡ್ಡೂರ್, ಸಂಗಮೇಶ ಸೊಬಗಿನ, ಕಿರಣ್ ಕಟ್ಟಿ, ವೀರೇಶ ಬಿಲ್ದಂಡಗಿ ಮಠ ಹಾಗೂ ಅನೇಕ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.