ತೇರಿನ ಮನೆಯಿಂದ ಶ್ರೀ ಮಹಾಮಾಯ ತೇರನ್ನು ಜಾತ್ರಾ ಪ್ರಯುಕ್ತ ಹೊರಹಾಕಲಾಯಿತು.
ಕೊಪ್ಪಳ:ಸತ್ಯಮಿಥ್ಯ (ಸ-14).
ಜಿಲ್ಲೆಯ ಕುಕನೂರು ಪಟ್ಟಣದ ಶ್ರೀ ಮಹಾಮಾಯಿ ರಥೋತ್ಸವ ನಿಮಿತ್ಯ ಬುಧವಾರದಂದು ಪ್ರತಿ ವರ್ಷ ಪದ್ಧತಿಯಂತೆ ಈ ವರ್ಷವೂ ಕೂಡ ಮಹಾಮಾಯ ದೇವಿಯ ಜಾತ್ರೋತ್ಸವ ನಿಮಿತ್ಯ ರಥವನ್ನು ರಥದ ಮನೆಯಿಂದ ಹೊರಹಾಕಲಾಯಿತು.
ಈ ಕುರಿತು ಮಾತನಾಡಿದ ಉಭಯಧರ್ಮಾಧಿಕಾರಿಗಳ ಪರವಾಗಿ ಅವರ ಸುಪುತ್ರರಾದ ನಾಗರಾಜ ದೇಸಾಯಿ ಯವರು ಮಾಧ್ಯಮದ ಜೊತೆ ಮಾತನಾಡಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡ ರಥದ ಮನೆಯಿಂದ ರಥವನ್ನು ಹೊರಗಡೆ ಹಾಕಿ ಜಾತ್ರಾ ಮಹೋತ್ಸವದ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು. ಜಾತ್ರೆಯು ಅಕ್ಟೋಬರ್ 11 ರಂದು ಶ್ರೀ ಮಹಾಮಾಯ ರಥೋತ್ಸವ ನೆರವೇರುತ್ತಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಜಾತ್ರಾ ಕಾರ್ಯಕ್ರಮದಲ್ಲಿ ಸ್ವಚ್ಛತೆ ನೀರಿನ ವ್ಯವಸ್ಥೆ ಗಳಿಗಾಗಿ ಪಟ್ಟಣ ಪಂಚಾಯತ್ ಸಿಬ್ಬಂದಿ ವರ್ಗದವರಿಗೆ ಈಗಾಗಲೇ ತಿಳಿಸಿದ್ದು. ಜಾತ್ರಾ ಮಹೋತ್ಸವಕ್ಕೆ ಅತ್ಯಧಿಕವಾಗಿ ಭಕ್ತಾದಿಗಳು ಬರುತ್ತಿರುವ ನಿರೀಕ್ಷೆಯಿದೆ ಆದ್ದರಿಂದ ಬಂದೋಬಸ್ತ್ ಗಾಗಿ ಆರಕ್ಷಕ ಠಾಣೆ ಸಿಬ್ಬಂದಿ ವರ್ಗದವರು ಸಹಕಾರಿಸಲಿದ್ದಾರೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಮಾಯ ದೇವಸ್ಥಾನ ಉಭಯ ಧರ್ಮಧಿಕಾರಿಗಳು, ದೇವಸ್ಥಾನದ ಪುರೋಹಿತರು, ಶ್ರೀ ಮಹಾಮಾಯ ದೇವಸ್ಥಾನದ ಸಕಲ ಸದ್ಭಕ್ತಾದಿಗಳು ಇತರರು ಇದ್ದರು.
ವರದಿ:ಚೆನ್ನಯ್ಯ ಹಿರೇಮಠ.