ತಾಲೂಕು

ಪೌರ ಕಾರ್ಮಿಕರ ಸೇವೆ ಅನನ್ಯ – ಸಾರ್ವಜನಿಕರು ಅವರನ್ನು ಗೌರವದಿಂದ ಕಾಣಬೇಕು : ಶಾಸಕ‌ ಜಿ.ಎಸ್.ಪಾಟೀಲ

Share News

ಪೌರ ಕಾರ್ಮಿಕರ ಸೇವೆ ಅನನ್ಯ – ಸಾರ್ವಜನಿಕರು ಅವರನ್ನು ಗೌರವದಿಂದ ಕಾಣಬೇಕು : ಶಾಸಕ‌ ಜಿ.ಎಸ್.ಪಾಟೀಲ.

ಗಜೇಂದ್ರಗಡ:ಸತ್ಯಮಿಥ್ಯ (ಸೆ -23)

ನಗರವು ಸುಂದರವಾಗಿ ಕಾಣಲು ಪೌರ ಕಾರ್ಮಿಕರ ಸೇವೆ ಅನನ್ಯ, ಅದನ್ನು ನಾವೂ ಮರೆಯಲು ಸಾಧ್ಯವಿಲ್ಲ.ಸಾರ್ವಜನಿಕರು ಅವರನ್ನು ಗೌರವದಿಂದ ಕಾಣಬೇಕು.ಈ ಹಿನ್ನಲೆಯಲ್ಲಿ ಪೌರ ಕಾರ್ಮಿಕರು ಕೂಡಾ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ನೀಡಬೇಕಿದೆ. ಪೌರ ಕಾರ್ಮಿಕರ ಸಮಸ್ಯೆ ಬಂದಾಗ ರಾಜ್ಯ ಮಟ್ಟದಲ್ಲಿ ಧ್ವನಿ ಎತ್ತಿದ್ದೇವೆ. ಈಗಾಗಲೇ ನಗರದಲ್ಲಿನ ಕೆಲ ನೌಕರರನ್ನು ಖಾಯಂ ಮಾಡಲಾಗಿದೆ. ಪೌರ ಕಾರ್ಮಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಜನಪ್ರತಿನಿಧಿಗಳು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಸ್ಥಳೀಯ ಶಾಸಕ ಜಿ. ಎಸ್ ಪಾಟೀಲ್ ನುಡಿದರು .

ಅವರು ಇಂದು  ಗಜೇಂದ್ರಗಡ ನಗರದ ಟಿ.ಟಿ.ಡಿ.ಕಲ್ಯಾಣ ಮಂಟಪದಲ್ಲಿ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಬಳಿಕ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಮಾತನಾಡಿ ಪುರಸಭೆಯಲ್ಲಿ ಕೆಲಸಮಾಡುವ ಅನೇಕ ಪೌರಕಾರ್ಮಿಕರಿಗೆ ಸ್ವಂತ ಸೂರಿಲ್ಲ ಆದ್ದರಿಂದ ಸ್ಥಳೀಯವಾಗಿ ಜಮೀನು ಲಭಿಸಿದರೆ ನಿವೇಶನ ಕೊಡುವ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದೇವೆ ಎಂದರು.

ರಾಜೂ ಸಾಂಗ್ಲೀಕರ, ಪುರಸಭೆ ಮುಖ್ಯಧಿಕಾರಿ ಬಸವರಾಜ ಬಳಗಾನೂರ ಮಾತನಾಡಿದರು.

ಇದಕ್ಕೂ ಮುಂಚೆ ನಗರದ ಪ್ರಮುಖ ಬೀದಿಗಳಲ್ಲಿ ಪೌರಕಾರ್ಮಿಕರು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಶ್ರೀಧರ ಬಿದರಳ್ಳಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಮುರ್ತುಜಾ ಡಾಲಾಯತ, ವಿಜಯಾ ಮಳಗಿ, ದ್ರಾಕ್ಷಾಯಣಿ ಚೋಳಿನ,ಮಂಜುಳಾ ರೇವಡಿ, ಶರಣಪ್ಪ ಉಪ್ಪಿನಬೆಟಗೇರಿ, ವೆಂಕಟೇಶ ಮುದಗಲ್ , ಮುದಿಯಪ್ಪ ಮುಧೋಳ, ಪ್ರಶಾಂತ ರಾಠೋಡ, ದುರಗಪ್ಪ ಮುಧೋಳ, ಸಿದ್ದಪ್ಪ ಬಂಡಿ, ರಫೀಕ ತೋರಗಲ್, ಮುತ್ತಣ್ಣ ಮ್ಯಾಗೇರಿ, ಆರ್.ಎಮ್.ರಾಯಬಾಗಿ, ಬಸವರಾಜ ಹೂಗಾರ, ಉಮೇಶ ರಾಠೋಡ , ಯಲ್ಲಪ್ಪ ಬಂಕದ, ಅಶೋಕ ಬಾಗಮಾರ, ತಾರಾಸಿಂಗ್ ರಾಠೋಡ, ಕನಕಪ್ಪ ಕಲ್ಲವಡ್ಡರ, ಅಂದಪ್ಪ ರಾಠೋಡ, ದಾದೂ ತಾಳಿಕೋಟಿ, ಶರಣಪ್ಪ ಚಳಗೇರಿ, ವಿರೇಶ ಸಂಗಮದ, ಸಿದ್ದು ಗೊಂಗಡಶೆಟ್ಟಿಮಠ ಸೇರಿದಂತೆ ಅನೇಕರು ಇದ್ದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!