ಯಾದಗಿರಿ : ಶ್ರೀ ಗುಡ್ಡಾಪುರ ದಾನಮ್ಮದೇವಿ ಪುರಾಣ ಕಾರ್ಯಕ್ರಮ.
ಯಾದಗಿರಿ:ಸತ್ಯಮಿಥ್ಯ ( ಸ -03)
ಜಿಲ್ಲೆಯ ಹುಣಸಗಿ ತಾಲ್ಲೂಕಿನ ಸುಕ್ಷೇತ್ರ ಬಲಶೆಟ್ಟಿಹಾಳ ಗ್ರಾಮದ ಶ್ರೀ ಗುರು ಬಸವಲಿಂಗ ಶಿವಯೋಗಿಗಳ ವೀರಕ್ತ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಮ. ನಿ. ಪ್ರ. ಪ್ರಭುಲಿಂಗ ಮಾಹಾಸ್ವಾಮಿಗಳು ನಿಷ್ಟಿ ಕಡ್ಲೆಪ್ಪನವರ ವೀರಕ್ತ ಮಠ ಸುರಪುರ ಮತ್ತು ಬಸವಲಿಂಗ ಶಿವಯೋಗಿ ಮಠದ ಧರ್ಮದರ್ಶಿಗಳಾದ ವಿದ್ವನ ಶ್ರೀ ಸಿದ್ದಲಿಂಗ ಶಾಸ್ತ್ರಿಗಳ ಸಾನಿಧ್ಯದಲ್ಲಿ ಶ್ರೀ ಗುಡ್ಡಾಪೂರ ದಾನಮ್ಮ ದೇವಿ ಪುರಾಣ ಕಾರ್ಯಕ್ರಮವನ್ನೂ ಆಯೋಜಿಸಲಾಯಿತು.
ಶ್ರಾವಣ ಮಾಸದ ಕೊನೆಯ ದಿನವಾದ ಮಂಗಳವಾರದಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ದಾನಮ್ಮದೇವಿ ಮತ್ತು ಬಸವೇಶ್ವರ ಭಾವಚಿತ್ರವನ್ನೂ ಮೆರವಣಿಗೆ ಮಾಡಲಾಯಿತು.
ನೂರಾರು ಮಹಿಳೆಯರು ಕಳಸ ಕುಂಬ ಮೇಳ ಹೊತ್ತು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರೂ.ಗ್ರಾಮೀಣ ಕಲೆಯಾದ ಡೊಳ್ಳಿನ ಕುಣಿತ ನೋಡುಗರ ಕಣ್ಮನ ಸೆಳೆಯಿತು.
ಸತತವಾಗಿ 15 ದಿನಗಳ ಕಾಲ ಪುರಾಣಿಕರಾದ ಶ್ರೀ ಸಂಗಯ್ಯ ಶಾಸ್ತ್ರಿ ಭಂಡಾರಿಮಠ ಗದಗ ಅವರೂ ದಾನಮ್ಮ ದೇವಿಯ ಜೀವನ ಆಧಾರಿತ ಚರಿತ್ರೆಯ ಪ್ರವಚನ ಹೇಳಿದರೂ. 15 ದಿನಗಳ ಕಾಲ ಭಕ್ತರಿಂದ ನಿತ್ಯ ಅನ್ನ ದಾಸೋಹ ವ್ಯವಸ್ಥೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಗ್ರಾಮದ ಪ್ರಮುಖರಾದ ತಿಪ್ಪಣ್ಣಗೌಡ ಬಿರಾದಾರ್,ರಾಯಪ್ಪ ಜೋಗಿನ್,ತಿಪ್ಪಣ್ಣ ಸಾರಾಯಿಗಾರ, ಸಾಬಣ್ಣ ಕ್ಯಾತನಾಳ,ಬಸವರಾಜ್ ಕುಂಬಾರ,ರಾಚಯ್ಯ ಹಿರೇಮಠ,ನಂದಪ್ಪ ಮಾಳಿ,ವೆಂಕೋಬ ಕಂಪ್ಲೀ,ಅಮರೇಶಗೌಡ ಕುಪ್ಪಿ,ಸಂಗಯ್ಯ ಹೂಗಾರ, ಬಸವರಾಜ ಅಂಗಡಿ, ಬಸವರಾಜ ಬಿಜ್ಜುರ,ಸೇರಿದಂತೆ ಸಮಸ್ತ ಗ್ರಾಮಸ್ಥರು ಶ್ರೀ ದಾನಮ್ಮ ದೇವಿ ಪುರಾಣ ಮೆರವಣಿಗೆ ಕಾರ್ಯಕ್ರಮದಲ್ಲಿ ಬಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ವರದಿ : ಶಿವು ರಾಠೋಡ್.