ಸಾವಯವ ಕೃಷಿಯಲ್ಲಿ ಬದುಕು ಸಾರ್ಥಕ – ರೈತ ಪರಮೇಶ್ವರಪ್ಪ ಜಂತ್ಲಿ.
ರೈತ ಪರಮೇಶ್ವರಪ್ಪ ಜಂತ್ಲಿ ಸಾಧನೆ :20 ಎಕರೆ ಜಮೀನಿನಲ್ಲಿ ವಿವಿಧ ಬೆಳೆ
ಗದಗ:ಸತ್ಯಮಿಥ್ಯ (ಆಗಸ್ಟ್ -14)
ಸಾಧಕರು ಸಮಸ್ಯೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಾಧನೆಯ ಶಿಖರವನ್ನು ಏರುತ್ತಾರೆ ಎನ್ನುವುದಕ್ಕೆ ನಗರದ ಪ್ರಗತಿಪರ ರೈತ ಪರಮೇಶ್ವರಪ್ಪ ಜಂತ್ಲಿ ಉದಾಹರಣೆಯಾಗಿದ್ದಾರೆ.
ತಾನು ಆರೋಗ್ಯವಾಗಿರಬೇಕು ತನ್ನ ಸುತ್ತಮುತ್ತಲಿನ ಜನರಿಗೆ ಉತ್ತಮ ಆರೋಗ್ಯ ನೀಡಬೇಕು ಎಂಬ ಮಹಾದಾಸೆಯಿಂದ ತಮ್ಮ ಜಮೀನಿನಲ್ಲಿ ವಿವಿಧ ಸಸಿಗಳನ್ನು ನೆಟ್ಟು ಸಾವಯವ ಕೃಷಿ ಅಳವಡಿಸಿಕೊಂಡು ಉತ್ತಮ ಇಳುವರಿ ಕಾಣುತ್ತಿದ್ದಾರೆ.
ಪ್ರಗತಿಪರ ರೈತರಾದ ಪರಮೇಶ್ವರಪ್ಪ ಜಂತ್ಲಿ ಅವರು ತಮ್ಮ ಒಟ್ಟು 20 ಎಕರೆ ಜಮೀನಿನಲ್ಲಿ 2 ಎಕರೆ ಜಮೀನಿನ್ನು ತೋಟವಾಗಿ ನಿರ್ಮಿಸಿ ಅದರಲ್ಲಿ ಕರಿಬೇವು ಗಾಳಿ ಮರ ಬಿದಿರು ತೆಂಗು ಶ್ರೀಗಂಧ ಸಾಗವಾನಿ ಗುಲಾಬಿ ಮಲ್ಲಿಗೆ ಹುಣಸೆ ನಿಂಬೆ ನುಗ್ಗೆಕಾಯಿ ದಾಳಿಂಬೆ ಪಪ್ಪಾಯಿ ಬೆಟ್ಟದ ನೆಲ್ಲಿಕಾಯಿ ಸೇಬು ವೀಳ್ಯದೆಲೆ ಉತ್ತತ್ತಿ ಬಾರಿ ಹಣ್ಣು ಹೀಗೆ ವಿವಿಧ ಬಗೆಯ ತಳಿಗಳ ಬೆಳೆಗಳನ್ನು ಬೆಳೆದಿದ್ದು ಪರಿಸರವನ್ನಷ್ಟೇ ಅಲ್ಲದೆ ಆರೋಗ್ಯದ ಬಾಗಿಲನ್ನು ತೆರೆದಿದ್ದಾರೆ.
ಕಳೆದ ವರ್ಷ ವಿವಿಧ ತೋಟಗಾರಿಕೆ ಬೆಳೆಯಿಂದಾಗಿ ಲಕ್ಷಾಂತರ ರೂಪಾಯಿ ಆದಾಯವನ್ನು ಕಂಡಿದ್ದಾರೆ ಈ ಬಾರಿಯೂ ತೋಟಗಾರಿಕೆಯ ವಿವಿಧ ಬೆಳೆಗಳಿಂದ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ತೋಟದಲ್ಲಿ ಎರಡು ಸ್ವದೇಶಿಯ ಹಸುಗಳನ್ನು ಸಾಕಿ ಅವುಗಳ ಗೋಮೂತ್ರವನ್ನು ಜೀವಾಮೃತ ಸಿದ್ಧಪಡಿಸಿ ಬೃಹತ್ ಟ್ಯಾಂಕಿನಲ್ಲಿ ತುಂಬಿ ಡ್ರಾಪ್ ಮೂಲಕ ಗಿಡಗಳಿಗೆ ಜೀವಾಮೃತ ನೀಡುವುದರಿಂದಾಗಿ ಉತ್ತಮ ಬೆಳೆ ಪಡೆಯುವಂತಾಗುತ್ತದೆ.
ಅಲ್ಲದೆ ತಮ್ಮ ತೋಟಕ್ಕೆ ಸಾಧು ಸಂತರು ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳನ್ನು ಕರೆತಂದು ರೈತರಿಗೆ ಮಾರ್ಗದರ್ಶನವನ್ನು ನೀಡುತ್ತಾ ಬಂದಿದ್ದಾರೆ ಇವರ ತೋಟಕ್ಕೆ ಹಿಂದಿನ ಜಿಲ್ಲಾಧಿಕಾರಿಗಳಾದ ವೈಶಾಲಿ ಎಂ, ಎಲ,ಆಗಮಿಸಿ ಪ್ರಶಂಸಿಸಿದರು.
ಬೆಂಗಳೂರು,ಧಾರವಾಡ,ರಾಯಚೂರು,ಬಾಗಲಕೋಟ,ಬನ್ನರುಗಟ್ಟಿ ಸೇರಿದಂತೆ ನಾಡಿನಲ್ಲಿ ಎಲ್ಲಿಯಾದರು ಕೃಷಿ ಮೇಳ ಅಲ್ಲಿ ಪಾಲ್ಗೊಳ್ಳುವುದು ಇವರ ಹವ್ಯಾಸವಾಗಿದೆ ಸಾಕಷ್ಟು ಅನುಭವವನ್ನು ಹೊಂದಿರುವ ಪರಮೇಶ್ವರಪ್ಪ ಜಂತ್ಲಿ ಅವರಿಗೆ ಪ್ರಕೃತಿಯೊಂದಿಗೆ ಬೆರೆತು ಬಾಳಿದರೆ ಸ್ವರ್ಗ ಸುಖವಿದೆ ಎನ್ನುವುದನ್ನು ಕಂಡುಕೊಂಡಿದ್ದಾರೆ
ಸಾವಯವ ಕೃಷಿ ಲಾಭದಾಯಕವಾಗಿದೆ ಶ್ರಮವಿಲ್ಲದೆ ಏನು ಸಾಧನೆ ಮಾಡಲು ಆಗುವುದಿಲ್ಲ ಪ್ರಕೃತಿಯಲ್ಲಿ ಬೆರೆತಾಗ ಅದರ ಅನುಭವವೇ ಬೇರೆಯಾಗಿರುತ್ತದೆ ಸಾವಯುವ ಕೃಷಿಯಿಂದ ಸಾಕಷ್ಟು ಲಾಭವನ್ನು ಗಳಿಸಿದ್ದೇನೆ ಈಗ ಎರಡು ಎಕರೆಯಲ್ಲಿ ಕೊರ್ಲ ನವಣಿ ಮತ್ತು ಬೆರಗು ಬೆಳೆದಿದ್ದು ಉತ್ತಮ ಫಲ ನೀಡುವ ನಿರೀಕ್ಷೆಯಲ್ಲಿದ್ದೇನೆ
– ಪರಮೇಶ್ವರಪ್ಪ ಜಂತ್ಲಿ ಪ್ರಗತಿಪರ ರೈತರು
ವರದಿ:ಮುತ್ತು ಗೋಸಲ