ಟ್ರೆಂಡಿಂಗ್ ಸುದ್ದಿಗಳುಸ್ಥಳೀಯ ಸುದ್ದಿಗಳು

ಹಿರಿಯರ ಮಾರ್ಗದರ್ಶನದಲ್ಲಿ ನೂತನ ದಂಪತಿಗಳು ಸಂಸ್ಕಾರಯುತ ಜೀವನ ರೂಪಿಸಿಕೊಳ್ಳಬಹುದು – ಡಾ. ಮಹದೇವ ಮಹಾಸ್ವಾಮಿಗಳು.

Share News

ಹಿರಿಯರ ಮಾರ್ಗದರ್ಶನದಲ್ಲಿ ನೂತನ ದಂಪತಿಗಳು ಸಂಸ್ಕಾರಯುತ ಜೀವನ ರೂಪಿಸಿಕೊಳ್ಳಬಹುದು – ಡಾ. ಮಹದೇವ ಮಹಾಸ್ವಾಮಿಗಳು.

ಕೊಪ್ಪಳ:ಸತ್ಯಮಿಥ್ಯ (ಸ -02).

ಸಾಮೂಹಿಕ ವಿವಾಹಗಳು ಸಾರ್ವಜನಿಕರಿಗೆ ವರದಾನವಾಗಿದೆ. ಇಂತಹ ಧರ್ಮಕಾರ್ಯಗಳು ನಡೆಯಬೇಕು. ಗ್ರಾಮದ ಎಲ್ಲರೂ ಒಗ್ಗಟ್ಟಿನಿಂದ ಮಾತ್ರ ಇಂತಹ ಮಹಾನ್ ಕಾರ್ಯ ಸಾಧ್ಯ. ಸಮಾಜ ಅಂದಮೇಲೆ ಟಿಕೆ ,ಟಿಪ್ಪಣಿಗಳು ಸಹಜ ಆದರೆ ಯಾವದಕ್ಕೂ ತಲೆ ಕೆಡಿಸಿಕೊಳ್ಳಲು ಹೋಗಬಾರದು . ಹೊಗಳಿದರೆ ಕೂಗಬಾರದು, ಸಮಾಧಾನದಿಂದ ಜೀವನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ, ಹಿರಿಯರಿಗೆ ಗೌರವ ನೀಡುವ ಸಂಸ್ಕಾರವನ್ನು ನೂತನ ದಂಪತಿಗಳು ಬೆಳೆಸಿಕೊಂಡು ಹೋದಾಗ ಮನೆಯಲ್ಲಿ ಸಂಸ್ಕಾರ ಮತ್ತು ಜೀವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಅನ್ನದಾನಿಶ್ವರ ಶಾಖಾಮಠದ ಡಾ. ಮಹಾದೇವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದ ಶ್ರೀ ಭೀಮಲಿಂಗೇಶ್ವರ ಜಾತ್ರೆ , ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಳ ಹಾಗೂ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ.

ಇದೆ ಸಂದರ್ಭದಲ್ಲಿ ಸಮಾಜ ಸೇವಕರಾದ ಶಿವಣ್ಣ ರಾಯರೆಡ್ಡಿ ಮಾತನಾಡಿ ತಳಬಾಳು ಸಣ್ಣ ಗ್ರಾಮ ವಾಗಿದ್ದು ಸಂಪ್ರದಾಯ ಗಳನ್ನ ಒಳಗೊಂಡಿದೆ. ಒಂದು ಮನೆಯಲ್ಲಿ ಒಂದು ಕುಟುಂಬ ಹೊಂದಾಣಿಕೆಯಾಗಬೇಕಾದರೆ ತುಂಬಾ ಕಷ್ಟವಾಗುತ್ತದೆ ಅಂತದ್ದರಲ್ಲಿ. ಇಂತಹ ಧರ್ಮ ಕಾರ್ಯಗಳು ನೆರವೇರಬೇಕಾದರೆ ಗ್ರಾಮದ ಎಲ್ಲರ ಹೊಂದಾಣಿಕೆಯಿಂದ ಮಾತ್ರ ಸಾಧ್ಯ. ತಳಬಾಳ ಗ್ರಾಮದವರು ಹಾಲಿನಂತಹ ಮನಸ್ಸಿನವರು. ತಳಬಾಳ ಗ್ರಾಮ ಚಿಕ್ಕದಾದರೂ ಚೊಕ್ಕದಾಗಿದೆ ಎಂದು ಮಾತನಾಡಿದರು.

ನಂತರ ಮಾತನಾಡಿದ ಮುಖಂಡರಾದ ಕಳಕಪ್ಪ ಕಂಬಳಿ ಮಾತನಾಡುತ್ತ ದುಬಾರಿ ಕಾಲದಲ್ಲಿ ಮನೆ ಕಟ್ಟುವುದು, ಮದುವೆ ಮಾಡುವುದು ಬಹಳ ಕಷ್ಟ. ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆ ಸಾಲದ ಬಾಧೆಯಿಂದ ಎಷ್ಟೋ ಕುಟುಂಬಗಳು ವಿಘಟಿತವಾಗುತ್ತಿವೆ. ಇದನ್ನು ಮನಗಂಡು ದೇವಸ್ಥಾನ ಸಮಿತಿಯವರು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ. ತಳಬಾಳು ಗ್ರಾಮದ ಗುರು ಹಿರಿಯರು ಹೊಂಡಾಣಿಕೆ ಯಿಂದ ಇಂತಹ ಧರ್ಮ ಕಾರ್ಯಗಳು ನೆರವೇರುತ್ತವೆ ಈ ಗ್ರಾಮವು ಇನ್ನೂ ಬೆಳೆಯುತ್ತಾ ಹೋಗಲಿ ಎಂದು ಮಾತನಾಡಿದರು.

ಗ್ರಾಮದ ದೇವಸ್ಥಾನ ಶಿವಾ ಸಮಿತಿಯ,ನಿವೃತ್ತಿ ಶಿಕ್ಷಕರಾದ ಮಲಕಸಾಬ ನೂರಬಾಷಾ ಮಾತನಾಡಿ ದೇವರ ಸಾನ್ನಿಧ್ಯದಲ್ಲಿ ಗುರುಹಿರಿಯರ, ಮಠಾದೀಶರಿಂದ ಆಶೀರ್ವಾದ ಪಡೆದ ನೀವು ಧನ್ಯರು. ನಿಮ್ಮ ನವದಾಂಪತ್ಯ ಜೀವನ ಸುಖಕರವಾಗಲಿ. ಸೌಂಸಾರದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ದುಡುಕು, ಕೋಪ ನಿಮ್ಮ ಬದುಕನ್ನು ಹಾಳುಮಾಡುತ್ತದೆ. ಇದರಿಂದ ಎಚ್ಚರವಿರಬೇಕು. ಅತ್ತೆ ಮಾವಂದಿರನ್ನು ಗೌರವದಿಂದ ಕಾಣಬೇಕು. ಸೊಸೆಯಂದಿರನ್ನು ನಿಮ್ಮ ಮಗಳೆಂದು ಭಾವಿಸಿ ಪರಸ್ಪರರು ಅನ್ಯೋನ್ಯತೆಯಿಂದ ಬದುಕು ಸುಂದರ ಮಾಡಿಕೊಳ್ಳಿ ಎಂದು ನವದಂಪತಿಗಳಿಗೂ ಹಾಗೂ ಪಾಲಕರಿಗೂ ಕಿವಿಮಾತು ಹೇಳಿದರು.

ಸಾಯಂಕಾಲ 5:00 ಗಂಟೆಗೆ ಭೀಮ ಲಿಂಗೇಶ್ವರನ ಉಚ್ಚಯ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷ.ಬ್ರ .ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಂಗಳೂರು,ಶಶಿಧರಯ್ಯ ಅಳಲೆಮಠ, ಶಿವಣ್ಣ ರಾಯರೆಡ್ಡಿ, ಕಳಕಪ್ಪ ಕಂಬಳಿ, ವಿಜಯಲಕ್ಷ್ಮಿ ಮೆಣಸಿನ ಕಾಯಿ, ಮಲಕಸಾಬ ನೂರುಭಾಷಾ, ಶರಣಯ್ಯ ಸಸಿ, ಶುಭಾಷ್ ಗೌಡ ಪೋ .ಪಾಟೀಲ್, ಮಲ್ಲಯ್ಯ ಭೂಸನೂರಮಠ, ಮಲ್ಲಣ್ಣ ಸಾದರ್, ವೀರಭದ್ರಯ್ಯ ಮನ್ನಾಪುರ, ದೇವೇಂದ್ರಪ್ಪ ಕಮ್ಮಾರ್, ಮಲ್ಲಪ್ಪ ಬಾಣದ, ತಳಬಾಳ ಗ್ರಾಮದ ಗುರುಹಿರಿಯರು ಹಾಗೂ ಭೀಮ ಲಿಂಗೇಶ್ವರ ಭಜನಾ ಮಂಡಳಿಯವರು, ಶರಣಬಸವೇಶ್ವರ ಸೇವ ಟ್ರಸ್ಟ್ ಕಮಿಟಿಯವರು, ಯುವಕರು, ಸುತ್ತಮುತ್ತಲಿನ ಸಕಲ ಸದ್ಭಕ್ತಾದಿಗಳು ಇತರರು ಇದ್ದರು.

ವರದಿ : ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!