ತಾಲೂಕು

ಮನುಷ್ಯ ಆಧುನಿಕ ಜೀವನ ಶೈಲಿಯಿಂದ ರೋಗಗ್ರಸ್ತ ನಾಗುತ್ತಿದ್ದಾನೆ – ಡಾ. ನಿಂಗರಡ್ಡಿ ತಿರುಕಣ್ಣವರ.

Share News

ಮನುಷ್ಯ ಆಧುನಿಕ ಜೀವನ ಶೈಲಿಯಿಂದ ರೋಗಗ್ರಸ್ತ ನಾಗುತ್ತಿದ್ದಾನೆ – ಡಾ. ನಿಂಗರಡ್ಡಿ ತಿರುಕಣ್ಣವರ.

ಗಜೇಂದ್ರಗಡ:ಸತ್ಯಮಿಥ್ಯ (ಜ -12).

ಆಧುನಿಕ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ,ಮಾನಸಿಕತೆ ಸೇರಿದಂತೆ ಹಲವು ಕಾಯಿಲೆಗಳಿಂದ ಮನುಷ್ಯ ನರಳುತ್ತಿದ್ದಾನೆ. ಆದ್ದರಿಂದ ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವದರಿಂದ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆಯಿಂದ ರೋಗಗಳನ್ನು ಗುಣಪಡಿಸಬಹುದು ಎಂದು ಡಾ.ನಿಂಗರಡ್ಡಿ ತಿರುಕಣ್ಣವರ ಹೇಳಿದರು.

ಅವರು ನಗರದ ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜು ಹಾಗೂ ವೆಂಕಟೇಶ್ವರ ಆಸ್ಪತ್ರೆ ಗಜೇಂದ್ರಗಡ ಇವರ ಸಹಯೋಗದಲ್ಲಿ ರಾಷ್ಟೀಯ ಯುವ ದಿನಾಚರಣೆ ನಿಮಿತ್ಯ ವಿದ್ಯಾರ್ಥಿಗಳಿಗೆ ಉಚಿತ ಅರೋಗ್ಯ ಹಾಗೂ ರಕ್ತ ತಪಾಸಣೆ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತ. ಯುವ ಸಮುದಾಯ ದುಷ್ಟಟಗಳಿಂದ ದೂರವಿದ್ದು ಕಾಯಿಲೆ ಬರುವ ಮುನ್ನವೇ ವಿದ್ಯಾರ್ಥಿಗಳು ಎಚ್ಚರ ವಹಿಸಿದರೆ ಅನಾರೋಗ್ಯದಿಂದ ಪಾರಾಗಬಹುದು ಎಂದು ಸಲಹೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ವೀರೇಶ ಸವಣೂರ ಮಾತನಾಡಿ ತಂದೆ-ತಾಯಿಗಳು ನಿಮ್ಮ ಎಲ್ಲ ಅಗತ್ಯಗಳನ್ನು ಪೂರೈಸಿರುತ್ತಾರೆ, ಅವರ ಬಗ್ಗೆ ಮುತುವರ್ಜಿ ವಹಿಸುವುದು ಮಕ್ಕಳ ಕರ್ತವ್ಯ, ಗ್ರಾಮೀಣ ಹಾಗೂ ನಗರದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ, ಆರೋಗ್ಯ ಜಾಗೃತಿಗೆ ನಮ್ಮ ಆಸ್ಪತ್ರೆ ಆಯೋಜಿಸಿರುವ ಆರೋಗ್ಯ ಶಿಬಿರ ಸಹಕಾರಿ ಎಂದರು.

ಕಾಲೇಜು ಪ್ರಾಚಾರ್ಯ ಸಂಗಮೇಶ ಬಾಗೂರ ಮಾತನಾಡಿ,ಸದೃಢ ದೇಹದಲ್ಲಿ ಸಾಧಿಸುವ ಮನಸ್ಸಿರುತ್ತದೆ. ನಾವು ಸದೃಢವಾಗಿದ್ದರೆ ಮಾತ್ರ ಎಲ್ಲವನ್ನು ಸಾಧಿಸಬಹುದು ಆದ್ದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡು ಮುಖ್ಯ.ಜಂಕ್ ಫುಡ್ ಗಳಿಂದ ಆದಷ್ಟು ದೂರವಿರಿ.ವ್ಯಾಯಾಮ ಹಾಗೂ ಪೌಷ್ಠಿಕ ಆಹಾರ ಸೇವನೆಯಿಂದ ವಿದ್ಯಾರ್ಥಿಗಳು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು, ಉಪನ್ಯಾಸಕರಾದ ಅಭಿಲಾಶಾ ಗಂಜಿಹಾಳ, ಅಶೋಕ ಅಂಗಡಿ, ಶ್ರುತಿ ನಡಕಟ್ಟಿನ, ಆನಂದ ಜೂಚನಿ, ಶರಣು ಅಂಗಡಿ, ಮಲ್ಲನಗೌಡ ಗೌಡರ, ಪ್ರಶಾಂತ ಹಾರೊಗೇರಿ, ಸಿದ್ರಾಮೇಶ ಕರಬಾಶೆಟ್ಟರ, ಹನಮಂತ ನಡಕಟ್ಟಿನ, ಕವಿತಾ ಪಾಟೀಲ, ಸುಶೀಲಾ ಮುಂಡರಗಿ, ಫಾತಿಮಾ ವಣಗೇರಿ, ಕರುಣಾ ಜಕ್ಕಲಿ, ಮಾಧುರಿ ನಾಡಗೇರಿ, ಶಿವಕುಮಾರ ಕೊಸಗಿ, ಪ್ರವೀಣ ಚಿತ್ರಗಾರ, ಈರಣ್ಣ ಹಾಗೂ ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ : ಚನ್ನು. ಎಸ್


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!