
ಹೆಣ್ಣು ಮಗಳಾಗಿ ಬೇಡಾ! ಸೊಸೆಯಾಗಿ ಬೇಕು ಎಂಬ ಮನೋಭಾವನೆಯಿಂದ ಹೊರಬನ್ನಿ – ಸರಡಗಿ.
ಬೆಳಗಾವಿ : ಸತ್ಯಮಿಥ್ಯ (ಜ -12).
ಹೆಣ್ಣು ಮಗಳಾಗಿ ಬೇಡಾ! ಸೊಸೆಯಾಗಿ ಬೇಕು. ಎಂಬ ದ್ವಂದ್ವ ಮನಸ್ಥಿತಿಯಿಂದ ಹೊರಬನ್ನಿ. ಹಿಂದೆ ಅವಿಭಕ್ತ ಕುಟುಂಬಗಳಿದ್ದವು. ಈಗ ಗಂಡ ಹೆಂಡತಿ ಮಕ್ಕಳು ಮಾತ್ರ ಕುಟುಂಬಗಳಾಗಿವೇ ಇದು ವಿಷಾದಾದ ಸಂಗತಿ ಎಂದು ಕಮತಗಿಯ ದೊಡ್ಡನ್ನವರ ಟ್ರೇಡರ್ಸ ಉಪಾಧ್ಯಕ್ಷ ರಾಚಪ್ಪ ಸರಡಗಿ ಹೇಳಿದರು.
ರವಿವಾರ ಬೆಳಗಾವಿ ಬಣಗಾರ ಸಮಾಜದ ಆಶ್ರಯದಲ್ಲಿ ಡಾ ಬಿ.ಎಸ್. ಜಿರಗೆ ಸಭಾಂಗಣದಲ್ಲಿ ನಡೆದ ಬಣಗಾರ ಸಮಾಜದ ವಧುವರರ ಮತ್ತು ಪಾಲಕರ ಸಮಾವೇಶದಲ್ಲಿ ಮಾತನಾಡಿದರು. ಈಗಿನ ಮಕ್ಕಳು ಬಹಳಷ್ಟು ವಿದ್ಯಾವಂತರಾಗಿದ್ದಾರೆ. ಆದರೆ ಸಂಸ್ಕಾರ ಕಲಿಯಲಾಗದೆ ಹಿರಿಯ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ.ವಿದ್ಯೆಯ ಜೊತೆಗೆ ಸಂಸ್ಕಾರ ಕಲಿಸುವದು ಬಹಳ ಮುಖ್ಯ.ಅತಿಯಾದ ಪ್ರೀತಿ ಮಕ್ಕಳ ಮನಸ್ಸನ್ನು ಕೆಡಿಸುತ್ತಿದೆ ಎಂದರು.
ನ್ಯಾಯವಾದಿ ರಮೇಶ ಮಣ್ಣೂರ ಮಾತನಾಡಿ. ಬಣಗಾರ ಸಮಾಜದಿಂದ 25 ಸಮಾವೇಶ ಜರುಗಿದವು ಆದರೆ ಈಗಿನ ಸಮಾವೇಶಕ್ಕೂ ಹಿಂದಿನ ಸಮಾವೇಶಗಳಿಗೂ ಅಜಗಜಾಂತರ ವ್ಯತ್ಯಾಸ ಇದೆ.ಸಂಸಾರದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ದಂಪತಿಗಳ ಮದ್ಯೆ ವೈಮನಸ್ಸು ಕಂಡು ಬರುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ . ಸಮಾವೇಶದ ಜೊತೆಗೆ ಗಂಡ ಹೆಂಡತಿಯ ಬಾಂಧ್ಯವವನ್ನು ವೃದ್ದಿಸುವ ಕೆಲಸ ಮಾಡಬೇಕಾಗಿದೆ.ಮದುವೆಯಾದ ಎರಡು ವರ್ಷದಲ್ಲಿ ದಾಂಪತ್ಯದಲ್ಲಿ ಬಿರುಕು ಉಂಟಾಗುತ್ತದೆ. ಕಲಹ.ಭಿನ್ನಾಭಿಪ್ರಾಯ ಬದಿಗೆ ಸರಿಸಿ ಒಟ್ಟಿಗೆ ಬಾಳಬೇಕಾಗಿದೆ ಎಂದರು.
ಶಿವಮೊಗ್ಗದ ಸಮಾಜದ ಅದ್ಯಕ್ಷ ವಿರುಪಾಕ್ಷ ಜವಳಿ ಮಾತನಾಡಿ. ಬಣಗಾರ ಸಮಾಜ ಬೇಡಿ ತಿನ್ನುವವರಲ್ಲ, ದುಡಿದು ತಿನ್ನುವರುನವಲೇ ದೇವಸ್ಥಾನ ಇನ್ನಷ್ಟು ಅಭಿವೃದ್ಧಿಯಾಗಲಿ.ನಮ್ಮ ಸಮಾಜದ ಜನರು ಕಷ್ಟ ಸುಖ ಅರಿತು ಬಾಳುವರು ಎಂದರು .
ಬೆಳಗಾವಿ ಜಿಲ್ಲಾ ಬಣಗಾರ ಸಮಾಜದ ಅದ್ಯಕ್ಷ ಅರುಣಕುಮಾರ ಜೋತಾವರ ಸ್ವಾಗತಿಸಿ. ಪ್ರಾಸ್ತಾವಿಕವಾಗಿ ಮಾತನಾಡಿ. ಸಮಾಜದಲ್ಲಿರುವ ಕನ್ಯಾ ವರರ ಮಾಹಿತಿಯನ್ನು ಸುಲಭವಾಗಿ ಎಲ್ಲರಿಗೂ ಸುಲಭವಾಗಿ 1996 ಮೊದಲ ವಧು ವರರ ರಾಷ್ಟ್ರ ಮಟ್ಟದ ಸಮೇಳನ್ನು ಆಯೋಜಿಸಿದರು 2006 ರಲ್ಲಿ ಬೆಳಗಾವಿ ಪ್ರಥಮ ಸಮ್ಮೇಳನ ಆಯೋಜಿಸಲಾಗಿದ್ದು ಸದ್ಯ 8 ನೇ ಸಮೇಳನ ನಡೆಯುತ್ತಿದೆ ಇದರಲ್ಲಿ ಸೃರಣ ಸಂಚಿಕೆಯಲ್ಲಿ ವಧು ವರರ ಮಾಹಿತಿ ಲಬ್ಯವಾಗಲಿದೆ ಎಂದು ಹೇಳಿದರು.
ಸಮಾರಂಭದ ಅದ್ಯಕ್ಷತೆ ವಹಿಸಿ ಹೇಮಂತ ಕಿತ್ತೂರ ಮಾತನಾಡಿ. ಸಮಾರಂಭಕ್ಕೆ ಸಹಕರಿಸಿದವರಿಗೆ ವಂದನೆಗಳು.600 ಜೋಡಿಗಳ ನೊಂದಣಿಯಾಗಿದ್ದು ನೂರು ಜೋಡಿಗಳು ಒಂದಾದರೆ ನಮ್ಮ ಕಾರ್ಯಕ್ರಮ ಸ್ವಾರ್ಥಕ ಎಂದರು.
ವೇದಿಕೆಯ ಮೇಲೆ ಬೆಳಗಾವಿಯ ವ್ಯಾಪಾರಸ್ಥರಾದ ಸಂಗಮನಾಥ ಕರಡೆಗುದ್ದಿ.ಶಿವಶಂಕರ ಚೊನ್ನದ.ಪಂಚಾಕ್ಷರಿ ಚೊನ್ನದ.ಬೆಳಗಾವಿ ಬಣಗಾರ ಸಮಾಜದ ಸಂಘಟಕರು ಇದ್ದರು.ನಿರೂಪಣೆ ಬಾಲಚಂದ್ರ ಉಮದಿ ನಡೆಸಿದರು.ಮಹಾಂತೇಶ ಊರೊಳಗಿ ವಂದಿಸಿದರು.
ವರದಿ : ಶಿವಾನಂದ ಮುಧೋಳ್.