
ಯೋಗದಲ್ಲಿ ಪ್ರಾಣಾಯಾಮದ ರಹಸ್ಯ – ಯೋಗ ದಿನಾಚರಣೆ ಕುರಿತು ವಿಶೇಷ ಲೇಖನ.

ಆರೋಗ್ಯದ ದೃಷ್ಟಿಯಲ್ಲಿ ಯೋಗವು ಒಂದು ದಿವ್ಯ ಔಷಧಿ ಎಂದು ಕರೆಯಲಾಗುವುದು.ಬರುವ ರೋಗಗಳನ್ನು ದೂರು ಇರಿಸಲು ಯೋಗವೇ ಆರೋಗ್ಯ ಎಂದು ಕರೆಯಬಹುದು. ಸಹಜ ಸರಳ ಸುಂದರವಾದ ದೇಹ ಸೌಂದರ್ಯವನ್ನು ಪ್ರಫುಲ್ಲ ಮನಃ ಸ್ಥಿತಿಯನ್ನು ಬೆಳೆಸಿಕೊಳ್ಳಲು ಸರಳತೆಯಿಂದ ಕ್ಲಿಷ್ಟತೆಯವರೆಗೆ ಯೋಗವನ್ನು ರೂಡಿಸಿಕೊಳ್ಳಬೇಕು.
ಅಂದಿನ ಜನರ ಜೀವನದಲ್ಲಿ ಯೋಗವು ಅವಿಭಾಜ್ಯ ಅಂಗವಾಗಿದೆ ಅದಕ್ಕೆ ಸಾಕ್ಷಿ ಎಂದರೆ ಹರಪ್ಪ ಮತ್ತು ಮೆಹೆಂಜೋದಾರ್ ನಾಗರಿಕತೆಯಲ್ಲಿ ದೊರೆತ ಪುರಾವೆಗಳಿವೆ ಅಲ್ಲದೆ ಭಾರತದ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತ ಉಪನಿಷತ್ತು ಹಾಗೂ ಅನೇಕ ಗ್ರಂಥಗಳಲ್ಲಿ ಉಲ್ಲೇಖವಾದ ಪತಂಜಲಿ ಮಹರ್ಷಿಯ ಯೋಗ ಸೂತ್ರ ಎಂಬ ಗ್ರಂಥ.

ಯೋಗ ಅಂದರೆ ಏನು?
ದೇಹ ಮತ್ತು ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವುದೇ ಯೋಗ. ಪತಂಜಲಿ ಯೋಗ ಸೂತ್ರದ ಪ್ರಕಾರ “ಯೋಗ ಚಿತ್ತ ವೃತ್ತಿ ನಿರೋಧಃ” ಅಂದರೆ ಚಂಚಲ ಮುಕ್ತವಾದ ಮನಸ್ಸನ್ನು ಏಕಾಗ್ರತೆಗೊಳಿಸುವುದೇ ಯೋಗ. ಮನಸ್ಸನ್ನು ಪ್ರಶಮನಗೊಳಿಸುವ,ಶಾಂತ ಗೊಳಿಸುವ,ಉಪಯೋಗವೇ ಯೋಗ.
ಸರಳ ಉಪಾಯದಲ್ಲಿ ಹೇಳುವುದಾದರೆ ಯೋಗವು ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯೋಗವೆಂದರೆ ಕೇವಲ ಬೌದ್ಧಿಕ ವ್ಯಾಯಾಮವಲ್ಲ ಯಾವುದೇ ಕನಸು ಪ್ರತಿ ಲೋಭನೆ ಅಥವಾ ಆಶ್ವಾಸನೆ ಅಲ್ಲ ಯೋಗವಾದರೆ ಒಂದು ಪ್ರಯೋಗದ ಫಲಿತಾಂಶವಾಗಿದೆ ಎಂಬುದನ್ನು ನಾವು ತಿಳಿಯಬೇಕು. ಯೋಗದಿಂದ ಆತ್ಮ ಧೈರ್ಯ ಎಚ್ಚೆತ್ತುಕೊಳ್ಳುತ್ತದೆ ಆತ್ಮ ಕಲ್ಯಾಣ ಮತ್ತು ವಿಶ್ವಕಲ್ಯಾಣದ ಹಾದಿಯಲ್ಲಿ ವಿಶ್ವಮುಂದೆ ಸಾಗಲಿದೆ. ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದರಿಂದಾಗಿ ಮನವು ಶಾಂತವಾಗುತ್ತದೆ ಮತ್ತು ರಾಷ್ಟ್ರ ಮತ್ತು ವಿಶ್ವದಲ್ಲಿ ಎದ್ದಿರುವ ಭಯ ಭ್ರಮೆ ಹಿಂಸೆ ಅಪರಾಧ ಮತ್ತು ಉಪಾಸನಿಂದಾಗಿ ಪ್ರಾರ್ಥನೆಯಿಂದ ವಿಷಯವಾಗಿ ಪ್ರವೃತ್ತಿಯ ಮೇಲೆ ನಿಯಂತ್ರಣ ಉಂಟಾಗುತ್ತದೆ .
ಯೋಗ ವ್ಯಾಯಾಮ ಮಾಡುವುದರಿಂದ ದೇಹದ ಬೆಳವಣಿಗೆ ಕಂಡುಬರುತ್ತದೆ.ಕೆಲವು ಆಸನಗಳನ್ನ ಮಾಡುವದು ಆ ಆಸನಗಳು ಪ್ರಾಣಿ, ಪಕ್ಷಿ, ಮರ,ಪರ್ವತ ಮುಂತಾದವುಗಳನ್ನು ಹೊಲುವಂತ ಬಂಗಿಗಳನ್ನ ಮಾಡಬೇಕು.
* ನಿಂತು ಮಾಡುವ ಆಸನಗಳು
* ಕುಳಿತು ಮಾಡುವ ಆಸನಗಳು
* ಮಲಗಿ ಮಾಡುವ ಆಸನಗಳು
1) ಹೊಟ್ಟೆಮೇಲೆ 2) ಬೆನ್ನಮೇಲೆ
* ತಲೆಯಮೇಲೆ ಮಾಡುವ ಆಸನ
ಇವುಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸುವುದರ ಜೊತೆಗೆ ಇದಕ್ಕೆ ಉಸಿರಾಟ ಕ್ರೀಯೇ ಹೆಚ್ಚಿನ ಪಾತ್ರ ವಹಿಸುತ್ತದೆ. ಉಸಿರಾಟ ಕ್ರೀಯೇ ಹೇಗಿರಬೇಕು ಎಂದು ಅಷ್ಟಾಂಗ ಮಾರ್ಗದಲ್ಲಿ ನಾಲ್ಕನೆಯ ಅಂಗವೇ ಪ್ರಾಣಾಯಾಮ. ಪ್ರಾಣ ಎಂದರೆ ಉಸಿರು,ವಾಯು,ಗಾಳಿಯನ್ನು ಪೂರಕ (ಉಸಿರನ್ನು ಒಳಗೆ ತೆಗೆದುಕೊಳ್ಳುವುದು)ರೇಚಕ (ಉಸಿರನ್ನು ಹೊರಗೆ ಬಿಡುವುದು) ಕುಂಭಕ(ಉಸಿರನ್ನು ತಡೆ ಹಿಡಿಯುವುದು)ಕ್ರಮಬದ್ಧವಾದ ರೀತಿಯಲ್ಲಿ ಅಭ್ಯಾಸ ಮಾಡುವುದನ್ನು ಪ್ರಾಣಾಯಾಮ ಎಂದು ಕರೆಯುತ್ತಾರೆ.
ಪ್ರಾಣಾಯಾಮದ ಎಂಟು ಪ್ರಕ್ರಿಯೆಗಳು:
ಒಂದನೇಯ ಪ್ರಕ್ರಿಯೆ ಭಸ್ರ್ತಿಕಾ ಪ್ರಾಣಾಯಾಮ ಯಾವುದೇ ಧ್ಯಾನೋಪಯೋಗವಾದ ಹಾಸನದಲ್ಲಿ ಅನುಕೂಲವಾಗುವಂತೆ ಕುಳಿತು ಮೂಗಿನ ಎರಡು ಒಳ್ಳೆಯಿಂದ ಶ್ವಾಸವನ್ನು ಪೂರ್ಣವಾಗಿ ಒಳಗೆ ತುಂಬಿಕೊಳ್ಳಬೇಕು ಹಾಗೂ ಹೊರಗೆ ಸಹಜತೆ ಜೊತೆಗೆ ಬಿಡುವುದು.
ಎರಡನೇಯ ಪ್ರಕ್ರಿಯೆ ಕಪಾಲಭಾತಿ ಪ್ರಾಣಾಯಾಮ; ಈ ಪ್ರಾಣಾಯಾಮದಲ್ಲಿ ವಿಧಿ ಬಸ್ರಿಕಾಗಿದ್ದ ಸ್ವಲ್ಪ ವಿಭಿನ್ನವಾಗಿದೆ ನಿಧಾನವಾಗಿ ಉಸಿರನ್ನು ತೆಗೆದುಕೊಂಡು ಜೋರಾಗಿ ಎರಡು ಮೂಗಿನಿಂದ ಉಸಿರನ್ನು ಬಿಡಬೇಕು.
ಮೂರನೇಯ ಪ್ರಕ್ರಿಯೆ ಬಾಹ್ಯ ಪ್ರಾಣಾಯಾಮ; (ತ್ರಿಬಂದದ ಜೊತೆಗೆ) ಉಸಿರನ್ನ ಸಹಜವಾಗಿ ತೆಗೆದುಕೊಳ್ಳಿ ನಂತರ ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ನಂತರ ಉಸಿರನ್ನು ತೆಗೆದುಕೊಳ್ಳದೆ ಹಾಗೆ ಸಾಧ್ಯವಾದಷ್ಟು ಉಸಿರನ್ನು ತಡೆಹಿಡಿಯಿರಿ.
ನಾಲ್ಕನೇಯ ಪ್ರಕ್ರಿಯೆ ಉಜ್ಜಾಯಿ ಪ್ರಾಣಾಯಾಮ; ಈ ಪ್ರಣಯಮದಲ್ಲಿ ಕತ್ತನ್ನ ಮುಂದಕ್ಕೆ ಬಾಗಿಸಿ ಉಸಿರನ್ನು ತೆಗೆದುಕೊಳ್ಳಿ ಉಸಿರನ್ನು ತೆಗೆದುಕೊಳ್ಳುವಾಗ ಗೊರಕೆ ಶಬ್ದ ಬರುತ್ತಿದೆ ಹಾಗೆ ಮಾಡುವುದರಿಂದ ಪೂರ್ಣಕಂಠ ಧ್ವನಿ ಬರುತ್ತದೆ.
ಐದನೇಯ ಪ್ರಕ್ರಿಯೆ ಅನುಲೋಮ – ವಿಲೋಮ ಪ್ರಾಣಾಯಾಮ; ಬಲಗೈಯನ್ನು ಎರಡು ಬೆರಳು ಬಳಸಿಕೊಂಡು ಮೂಗಿನ ಬಲ ಒಳ್ಳೆ ಮತ್ತು ಎಡವಳ್ಳಿಯನ್ನು ಒಂದನ್ನು ಬಂಧಿಸಿ ಒಂದನ್ನ ಉಸಿರನ್ನು ತೆಗೆದುಕೊಂಡು ಮತ್ತು ಬಲವಳ್ಳೆಯನ್ನ ಬದಲಿಸಿಕೊಂಡು ಅನುಲೋಮ ಮತ್ತು ವಿಲೋಮ ಪ್ರಣಾಮ ಮಾಡಬೇಕು.
ಆರನೇಯ ಪ್ರಕ್ರಿಯೆ ಭ್ರಾಮರಿ ಪ್ರಾಣಾಯಾಮ ಉಸಿರನ್ನು ಒಳಗೆ ತೆಗೆದುಕೊಂಡು ಬೆರಳುಗಳಿಂದ ಕಣ್ಣು ಕಿವಿ ಮುಚ್ಚಿ ಜೈಂಕಾರನಾದ ರೂಪದಲ್ಲಿ ಓಂ ಉಚ್ಚಾರ ಮಾಡುತ್ತ ಉಸಿರನ್ನು ಬಿಡಬೇಕು.
ಏಳನೇಯ ಪ್ರಕ್ರಿಯೆ ಉದ್ಗೀಥ್ ಪ್ರಾಣಾಯಾಮ; ಸಾಧ್ಯವಾದಷ್ಟು ಒಂದೇ ಲಯದಲ್ಲಿ ಉಸಿರನ್ನು ಮೂರರಿಂದ ಐದು ಸೆಕೆಂಡು ಕೆಲವು ಸೆಕೆಂಡುಗಳ ಒಳಗೆ ತೆಗೆದು ನಂತರ ಓಂ ಶಬ್ದವನ್ನ ಉಚ್ಚಾರಣೆ ಮಾಡುತ್ತ 15 ರಿಂದ 20 ಸೆಕೆಂಡುಗಳಲ್ಲಿ ಉಸಿರನ್ನು ಬಿಡಬೇಕು ಕ್ರಮೇಣ ಉಸಿರನ್ನು ಹೆಚ್ಚು ಸಮಯ ತೆಗೆದುಕೊಳ್ಳುತ್ತಾ ಹೆಚ್ಚು ಸಮಯದವರೆಗೆ ಉಸಿರನ್ನು ಓಂ ಶತ್ರುಗಳ ಮೂಲಕ ಬಿಡಬೇಕು.
ಎಂಟನೇಯ ಪ್ರಕ್ರಿಯೆ ಪ್ರಣವ ಪ್ರಾಣಾಯಾಮ; ಇದು ಸಂಪೂರ್ಣ ಜ್ಞಾನಕ್ಕೆ ಸಂಬಂಧಿಸಿದ್ದು ಮೂರರಿಂದ ಐದು ನಿಮಿಷ ಪ್ರತ್ಯೇಕ ವ್ಯಕ್ತಿಗಳ ಜ್ಞಾನಾತ್ಮಕ ಪ್ರಣಾಮವನ್ನು ಮಾಡಬೇಕು ಉಸಿರಿನಲ್ಲಿ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ ಉಸಿರಿನ ಜೊತೆಗೆ ಧ್ಯಾನ ಮಾಡಿ ಸೂಕ್ಷ್ಮ ಗತಿಯಿಂದ ಉಸಿರನ್ನು ತೆಗೆದುಕೊಂಡು ಸೂಕ್ಷ್ಮ ಅತಿ ಸೂಕ್ಷ್ಮತೆಯಿಂದ ಉಸಿರನ್ನು ಬಿಡಬೇಕು.
ಈ ರೀತಿಯಾದ ಎಂಟು ಪ್ರಕಾರದ ಪ್ರಾಣಾಯಾಮದ ಜೊತೆಗೆ ಉಸಿರಾಟ ಕ್ರಿಯೆ ಹೆಚ್ಚಿನ ರೀತಿಯಲ್ಲಿ ಉಸಿರಾಟವನ್ನು ಹೆಚ್ಚಿಸಿಕೊಳ್ಳಬೇಕು.
ದೇಹದಲ್ಲಿನ ಪಿತ್ತ ಕಫ ದೇಹದ ಅನ್ಯ ಧಾತುಗಳ ಮತ್ತು ಮೂಲ ವಲಸೆ ಇವೆಲ್ಲ ದೇಹದಲ್ಲಿ ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಕೊಂಡೊಯ್ಯುವುದೇ ಪ್ರಾಣಾಯಾಮ ಗಾಳಿ ಉಸಿರು
ಪ್ರಾಣಾಯಾಮದ ಮಹತ್ವ
ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಪಡೆದುಕೊಂಡು ಇಂಗಾಲದ ಡೈಯಾಕ್ಸೈಡ್ ಅನ್ನು ಹೊರ ಬಿಡಲು ಕ್ರಿಯೆಯನ್ನು ಪ್ರಣಾಮ ಕರೆಯುತ್ತಾರೆ.
ತಾಳಬದ್ದ ಹಾಗೂ ಲಯಬದ್ಧ ಉಸಿರಾಟದ ಕ್ರಿಯೆಯಿಂದ ಶರೀರ ಮತ್ತು ಮನಸ್ಸು ಚೈತನ್ಯಯುತವಾಗಿ ಮಾನಸಿಕ ಉದ್ವೇಗದಿಂದ ಮುಕ್ತಿ ಸಿಗುವುದು.
ಗ್ರಹಣ ಮತ್ತು ಗ್ರಹಣ ಶಕ್ತಿ ಮತ್ತು ಪಚನ ಶಕ್ತಿ ಜ್ಞಾಪಕ ಶಕ್ತಿ ಪ್ರಾಣಾಯಾಮದಿಂದ ವೃದ್ಧಿಯಾಗುವುದು.
ನಾಡಿ ಶುದ್ದಿ ಮಾಡಬಲ್ಲದೆ ದೇಹದೊಳಗಿನ ಅಂಗಾಂಗಗಳಿಗೆ ಕಾರ್ಯಕ್ಷಮತೆ ಸಮತೋಲನದಲ್ಲಿರುತ್ತದೆ.ನರ ಮೆದುಳು ಬೆನ್ನು ಉರಿ ಹೃದಯದ ಮಾಂಸ ಕಂಡಗಳು ದಕ್ಷವಾಗಿ ಕಾರ್ಯನಿರ್ವಹಿಸುತ್ತವೆ.
ಶುದ್ಧ ರಕ್ತದಿಂದ ದೇಹದ ಎಲ್ಲಾ ಭಾಗಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಹರಿಸುವಲ್ಲಿ ಪ್ರಾಣಾಯಾಮವು ಪ್ರಮುಖವಾಗಿದೆ.
ಪ್ರಾಣದ ಪ್ರಕಾರಗಳು.
ಪ್ರಾಣ; ಶರೀರದಲ್ಲಿ ಕಂಠದಿಂದ ಹೃದಯದವರಿಗೆ ವಾಯು ಕೆಲಸ ಮಾಡುತ್ತದೆ ಅದನ್ನೇ ಪ್ರಾಣ ಎಂದು ಕರೆಯಲಾಗುತ್ತದೆ.ಕಾರ್ಯ; ಪ್ರಾಣ ನಾಸಿಕ ಮಾರ್ಗ ಕಂಠಸ್ವರ ತಂತ್ರ ವಾಕ್ ಇಂದ್ರಿಯ ಅನ್ನನಾಳ ಉಸಿರಿನ ತಂತ್ರ ಶ್ವಾಸಕೋಶ ಮತ್ತು ಹೃದಯದ ಕ್ರಿಯಾಶೀಲವಾಗಿರುತ್ತದೆ ಮತ್ತು ಶಕ್ತಿಯನ್ನು ಪ್ರಧಾನವಾಗಿಸುತ್ತದೆ.
ಆತ್ಮ; ನಾಭಿಯಿಂದ ಕೆಳಗೆ ಮೂಲಾಧಾರದವರೆಗೆ ಇರುವಂತ ಪ್ರಾಣವನ್ನ ಆತ್ಮ ಎನ್ನುತ್ತಾರೆ. ಕಾರ್ಯ ;ಮಲ,ಮೂತ್ರ,ಅಥರ್ವ,ಶ್ರುತ್ರ,ಅದೊವಾಯು, ಗರ್ಭದ ಈ ವಾಯುವಿನ ಮೂಲಕವೆ ಆಗುತ್ತದೆ.
ಉದಾನ; ಕಂಠದ ಮೇಲಿನಿಂದ ತಲೆಯವರೆಗೆ ಕಾರ್ಯಶೀಲವಾಗಿರುವ ಪ್ರಾಣವನ್ನ ಉದಾರ ಎನ್ನುತ್ತಾರೆ. ಕಾರ್ಯ; ಕಂಠದ ಮೇಲಿನಿಂದ ಶರೀರದ ಸಮಸ್ತ ಅಂಗಗಳನ್ನು ನೇತ್ರ ನಾಸಿಕಮತಿ ಸಂಪೂರ್ಣ ಮುಖಮಂಡಲಕ್ಕೆ ಶಕ್ತಿಯನ್ನು ಮತ್ತು ತೇಜಸ್ಸನ್ನ ಪ್ರಧಾನ ಮಾಡುತ್ತದೆ ಪಿಟ್ಯುಟರಿ ಅಥವಾ ಪಿನಿಯಲ್ ಗ್ರಂಥಿ ಪೂರ್ತಿ ಮಸ್ಕಿ ಈ ವಿಧಾನ ಪ್ರಾಣ ಕ್ರಿಯಾಶೀಲತೆಯನ್ನು ಪ್ರಧಾನವಾಗಿರುತ್ತದೆ .
ಅದೃಶ್ಯ ಸಮಾನ; ಹೃದಯದ ಕೆಳಗಿನಿಂದ ನಾದಿವರೆಗೆ ಶರೀರದಲ್ಲಿ ಕ್ರಿಯಾಶೀಲ ಪ್ರಾಣವಾಯುವಿಗೆ ಸಮಾನ ಎನ್ನುತ್ತಾರೆ. ಕಾರ್ಯ; ಯಕೃತ್ ಕರುಳು ಮತ್ತು ಅಗ್ನಿಶಯ ಸಹಿತವಾಗಿ ಸಂಪೂರ್ಣ ಪಚನ ತಂತ್ರದ ಆಂತರಿಕ ಕಾರ್ಯ ಪ್ರಣಾಳಿಯ ನಿಯಂತ್ರಿಸುತ್ತದೆ.
ವಾನ; ಜೀವನ ಪ್ರಾಣಶಕ್ತಿಯು ಪೂರ್ತಿ ಶರೀರದಲ್ಲಿ ವ್ಯಾಪಿಸಿದೆ. ಕಾರ್ಯ; ಈ ವಾಯು ಸೇರಿದ ಸಮಸ್ತ ಗತಿಯನ್ನು ನಿಯಂತ್ರಿಸುತ್ತದೆ ಎಲ್ಲಾ ಆ ಲಿಂಗನಗಳನ್ನು ಮಾಂಸ ಮೂಳೆ ಸಂಧಿಯನ್ನು ಮತ್ತು ನಾಡಿಗಳನ್ನು ಕ್ರಿಯಾಶೀಲ ಗೊಳಿಸಲು ಬಲ ಮತ್ತು ಶಕ್ತಿಯನ್ನು ಈ ವ್ಯಾನ ಪ್ರಾಣವೇ ಪ್ರಧಾನ ವಾಗಿರುತ್ತದೆ.
ಪ್ರಾಣದ ಶಕ್ತಿಯಿಂದಲೇ ಕಣ್ಣುಗಳ ದರ್ಶನ ಶಕ್ತಿ, ಕಿವಿಯಲ್ಲಿ ಶ್ರವಣಶಕ್ತಿ ,,ನಾಸಿಕದಲ್ಲಿ ಗ್ರಹಣ ಶಕ್ತಿ ವಾಣಿಯಲ್ಲಿ ಸ್ವರ ಶಕ್ತಿ ,ಮುಖದ ಮೇಲೆ ತೇಜಸ್ಸು, ಮಾಸ್ತಕದಲ್ಲಿ ಜ್ಞಾನಶಕ್ತಿ ,ಮತ್ತು ಉದರದಲ್ಲಿ ಪಚನ ಶಕ್ತಿ ಕಾರ್ಯನಿರ್ವಹಿಸುತ್ತದೆ.
ವಿಧಿಯುಕ್ತವಾಗಿ ಮಾಡಿದಂತ ಪ್ರಾಣಾಯಮದಿಂದ ಎಲ್ಲಾ ರೋಗಗಳು ನಾಶವಾಗುತ್ತವೆ. ಮತ್ತು ವಿಧಿಯ ವಿರುದ್ಧ ಪ್ರಾಣಾಯಾಮ ಮಾಡುವುದರಿಂದ ಎಲ್ಲಾ ರೋಗಗಳು ಬರಬಹುದು. ಯೋಗಕ್ಕೆ ಪೌರಾಣಿಕ ಮಾನ್ಯತೆ ಇದೆ ಇದರಿಂದ ಅಷ್ಟ ಚಕ್ರಗಳು ಜಾಗೃತಗೊಳ್ಳುತ್ತವೆ.
ಪ್ರಾಣಾಯಾಮದ ನಿರಂತರ ಅಭ್ಯಾಸದಿಂದ ಜನ್ಮಜನ್ಮಾಂತರದ ಸಂಚಿತ ಅಶುಭ ಸಂಸ್ಕಾರದ ಅಥವಾ ಪಾಪ ಪರಿಹಾರವಾಗುತ್ತದೆ. ನಾವು ಅಷ್ಟ ಚಕ್ರಗಳ ವೈಜ್ಞಾನಿಕ ಪುಷ್ಪಭೂಮಿ ಅನ್ವೇಷಣೆ ಮಾಡಿದಾಗ ಅಥವಾ ಪ್ರಾಚೀನ ಸಂಸ್ಕೃತಿಕ ಶಬ್ದಗಳ ಅವರ್ಚನೆಯ ಚಿಕಿತ್ಸೆ ವಿಜ್ಞಾನದ ಜೊತೆಗೆ ತುಲನಾತ್ಮಕ ಅಧ್ಯಯನ ಮಾಡಿದಾಗ ಪಡೆದುಕೊಂಡಿರುವುದು. ಮಧುಗಾರ ಸ್ವಾದಿಷ್ಟನ ಮಣಿಪುರ ಹೃದಯ ಅನಾಹುತ ಜ್ಞಾನ ಮತ್ತು ಸಹಸ್ರಚಕ್ರ ಕ್ರಮದೊಂದಿಗೆ ಸಂಬಂಧಿಸಿದೆ ಮೂಲದ್ವಾರದಿಂದ ಸಹಸ್ರ ಚಕ್ರದವರಿಗೆ ಅಷ್ಟ ಚಕ್ರಗಳು ಯಾವ ಕೆಲಸವಿದೆಯೋ ಆ ಕಾರ್ಯ ನಿಂದ ತೆಗೆದುಕೊಂಡು ಕ್ರಿಯಾತ್ಮಕ ಯೋಗ್ಯ ಯೋಗ ಪ್ರಕಾರಗಳು ಸಕ್ರಿಯ ಅಥವಾ ಸಂತುಲಿತವಾಗಿ ಮಾಡುತ್ತದೆ.

ಲೇಖನ : ರವಿ ಹಲಗಿ.ದೈಹಿಕ ಶಿಕ್ಷಕರು ಗಜೇಂದ್ರಗಡ



