ಕೊಟ್ಟ ಮಾತಿನಂತೆ ನಡೆದುಕೊಳ್ಳದ ಕಾಂಗ್ರೆಸ್ ಮುಖಂಡರು – KPRS ಕಚೇರಿಯಲ್ಲಿ ಪತ್ರಿಕಾಗೋಷ್ಠಿ.
ಜಿಗಳೂರು ರಸ್ತೆ ಅಪಘಾತ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಆ.27ರಂದು ಪುನಃ ಹೋರಾಟ.

ಕೊಟ್ಟ ಮಾತಿನಂತೆ ನಡೆದುಕೊಳ್ಳದ ಕಾಂಗ್ರೆಸ್ ಮುಖಂಡರು – KPRS ಕಚೇರಿಯಲ್ಲಿ ಪತ್ರಿಕಾಗೋಷ್ಠಿ.

ಜಿಗಳೂರು ರಸ್ತೆ ಅಪಘಾತ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಆ.27ರಂದು ಪುನಃ ಹೋರಾಟ.
ಸತ್ಯಮಿಥ್ಯ ಸುದ್ದಿಮೂಲ :ಗಜೇಂದ್ರಗಡ(ಆ-೨೪)
ಜಿಗಳೂರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡುವ ಕುರಿತು ನೀಡಿದ್ದ ಭರವಸೆಯನ್ನು ಸರ್ಕಾರ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಕೊಟ್ಟ ಮಾತಿನಂತೆ ಈಡೇರಿಸದ ಹಿನ್ನೆಲೆಯಲ್ಲಿ, ಸಂತ್ರಸ್ತರೊಂದಿಗೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಹೋರಾಟವನ್ನು ಮುಂದುವರೆಸುವ ಕುರಿತು ಸ್ಥಳೀಯ KPRS ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎಂ.ಎಸ್.ಹಡಪದ. ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು ಅಂತಾ ಜುಲೈ 23 ರಿಂದ 25 ರವರೆಗೆ ತಹಶಿಲ್ದಾರರ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಜವಾಬ್ದಾರಿ ತೆಗೆದುಕೊಂಡು ನಾವು ಪರಿಹಾರವನ್ನು 20 ದಿನಗಳೊಳಗೆ ತಲುಪಿಸುವ ಭರವಸೆ ನೀಡಿದ್ದರು ಆ ಭರವಸೆಯಂತೆ ಹೋರಾಟವನ್ನು ಸಾಂಕೇತಿಕವಾಗಿ ಹೋರಾಟವನ್ನು ಹಿಂಪಡೆಯಲಾಗಿತ್ತು. ಕಾಂಗ್ರೆಸ್ ಮುಖಂಡರು ಕೇಳಿದ ಗಡುವು ಮುಗಿದರು ಇದುವರೆಗೂ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡದೆ ಇರುವುದರಿಂದ ಪುನಃ ಈ ಹೋರಾಟ ಮತ್ತಷ್ಟು ತೀವ್ರ ತರಹ ನಡೆಸಲು ನಾವು ಸಿದ್ದರಾಗಿದ್ದೇವೆ ಎಂದರು.
ಇದೇ ಆ 27 ರಂದು ಅನಿರ್ದಿಷ್ಟವಧಿ ಧರಣಿ ಜೊತೆಗೆ ಶಾಸಕರ ಮನೆ ಮುತ್ತಿಗೆ ಹಾಕುವ ಮೂಲಕ ಪರಿಹಾರ ಹಣ ಕೊಡುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಸರ್ಕಾರದ ಬಳಿ ಹಣ ಇಲ್ಲದೆ ಇದ್ದರೆ ಬಿಕ್ಷಾಟನೆ ಮಾಡಿ ಸರ್ಕಾರಕ್ಕೆ ಹಣ ಜಮಾ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ನಾವು ಹೋರಾಟ ನಡೆಸಲು ಮುಂದಾಗಿದ್ದೇವೆ ಎಂದರು.
ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘದ ಮುಖಂಡ ದಾವಲಸಾಬ ತಾಳಿಕೋಟಿ ಮಾತನಾಡಿ ಘಟನೆ ನಡೆದು 7 ತಿಂಗಳಾಯುತು ಇದುವರೆಗೆ ನಯಾಪೈಸೆ ಪರಿಹಾರ ಸಂತ್ರಸ್ತರಿಗೆ ಬಂದಿಲ್ಲ ಮಾನವೀಯ ನೆರವು ಕಣ್ಣಿರನ್ನು ಒರೆಸಿ ಕೊಡಬೇಕಾದ ಶಾಸಕರು ಸಂತ್ರಸ್ತರನ್ನು ಬೀದಿಗಿಳಿಸಿ ಅವರಿಗೆ ಕಣ್ಣಿರು ತರಿಸಿ ಕೊಡುವ ಪರಿಹಾರ ಯಾವುದಕ್ಕೂ ಪ್ರಯೋಜನವಿಲ್ಲ ಶಾಸಕರ ನಿರ್ಲಕ್ಷ್ಯವೇ ಪರಿಹಾರ ವಿಳಂಬಕ್ಕೆ ಕಾರಣವಾಗಿದ್ದು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರೆಯುವವರೆಗೆ ಹೋರಾಟವನ್ನು ಮುಂದುವರೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜಪ್ಪ ಹೊಸಮನಿ, ಮೈಬು ಹುನಗುಂದ, ರಾಜಣ್ಣ ಕೇಶಣ್ಣವರ ಉಪಸ್ಥಿತರಿದ್ದರು.




