ರಾಜ್ಯ ಸುದ್ದಿ

ಗೋ‌ರ್ ಸೇನಾ ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕದವತಿಯಿಂದ ಒಂದು ದಿನದ ಸತ್ಯಾಗ್ರಹ.

Share News

ಗೋ‌ರ್ ಸೇನಾ ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕದವತಿಯಿಂದ ಒಂದು ದಿನದ ಸತ್ಯಾಗ್ರಹ.

ಬೆಂಗಳೂರ:ಸತ್ಯಮಿಥ್ಯ (ಅ 2).

ಇಂದು ಕರ್ನಾಟಕ ರಾಜ್ಯದ ಬಂಜಾರಾ ಸಮುದಾಯಕ್ಕೆ ಮಾರಕವಾಗಿ ಕಾಡುತ್ತಿರುವ ಒಳಮೀಸಲಾತಿಯ ಅವೈಜ್ಞಾನಿಕವಾಗಿ ವರ್ಗೀಕರಣವನ್ನು ವಿರೋಧಿಸಿ,ಗೋ‌ರ್ ಸೇನಾ ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕ, ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ‘ ನಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧಿರವರ 155 ನೇ ಜಯಂತಿಯ ಸಂದರ್ಭದಲ್ಲಿ ಒಂದು ದಿನದ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು.

ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ರವರು ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯನ್ನು, ಅಸಂವಿಧನಾತ್ಮಕ ಮತ್ತು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಬಾರದಾಗಿ ಸರ್ಕಾರವನ್ನು ಒತ್ತಾಯಿಸಿದರು.

ಒಂದು ದಿನದ ಸತ್ಯಾಗ್ರಹ ವನ್ನ ಸಾಂಕೇತಿಕವಾಗಿ  ಮಾಡಲಾಯಿತು 

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಜಯದೇವ ನಾಯಕ್ ಸತ್ಯಾಗ್ರಹದ ವಿಚಾರವಾಗಿ ಮನವಿಯನ್ನು ಸ್ವೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುವ ಪ್ರಯತ್ನಮಾಡುತ್ತೇನೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯದಿಂದ . ಗೋ‌ರ್ ಸೇನಾ” ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯಾಧ್ಯಕ್ಷರು ಬಾಳಾಸಾಹೇಬ, ರಾಜ್ಯ ಮಾಧ್ಯಮ ವಕ್ತಾರ್ ನೆಹರು ನಾಯಕ ಚಿನ್ನಾ ರಾಠೋಡ್, ಕೃಷ್ಣ್ ನಾಯಕ . ಹೆಚ್. ಜಾಧವ, ರಾಜ್ಯ ಕಾರ್ಯದರ್ಶಿ , ರುದ್ರ ಪುನೀತ್, ಅರುಣ್ ರಾಠೋಡ್, ಹಾಗೆ ಬೀದರ್, ಗುಲ್ಬರ್ಗ, ಯಾದಗಿರಿ, ಶಿವಮೊಗ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಹಾವೇರಿ, ಬಿಜಾಪುರ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಿಂದ ನೂರಾರು’ ಗೋರ್ ಸೇನಾ ‘ ಕಾರ್ಯಕರ್ತರು ಮತ್ತು ಸ್ವಾಭಿಮಾನಿ ಗೋರ್ ಬಂಜಾರಾ ಜನಾಂಗದ ಹಿತ ಚಿಂತಕರು ಭಾಗವಹಿಸಿರುತ್ತಾ ರೆ.

ವರದಿ : ಶಿವು ರಾಠೋಡ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!