ಸ್ಥಳೀಯ ಸುದ್ದಿಗಳು

ಹಡಪದ ಅಪ್ಪಣ್ಣ ಜಯಂತಿ ಕಡ್ಡಾಯ ಆಚರಿಸಿ – ಉಪ ತಹಶಿಲ್ದಾರ ಸೈಯದ್ ಮಕ್ತುಂಸಾಬ್.

Share News

ಹಡಪದ ಅಪ್ಪಣ್ಣ ಜಯಂತಿ ಕಡ್ಡಾಯ ಆಚರಿಸಿ – ಉಪ ತಹಶಿಲ್ದಾರ ಸೈಯದ್ ಮಕ್ತುಂಸಾಬ್

ಲಿಂಗಸಗೂರು:ಸತ್ಯಮಿಥ್ಯ ( ಜುಲೈ -15).

ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 21 ರಂದು ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಎಲ್ಲಾ ಸರಕಾರಿ ಕಛೇರಿ,ಸಂಸ್ಥೆಗಳಲ್ಲಿ ಆಚರಿಸುವಂತೆ ಉಪ ತಹಶಿಲ್ದಾರ ಸೈಯದ್ ಮಕ್ತುಂ ಸಾಬ್ ಹೇಳಿದರು.

ಅವರು ಪಟ್ಟಣದಲ್ಲಿ ಸೋಮವಾರ ತಹಶಿಲ್ಧಾರ ಕಾರ್ಯಯಾಲ ಆಡಳಿತ ಸೌಧದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿಯ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.

ಜುಲೈ 21 ರಂದು ಬೆಳಿಗ್ಗೆ 10-00 ತಾಲೂಕಿನ ಎಲ್ಲಾ ಸರಕಾರಿ ಇಲಾಖೆಗಳ ಕಛೇರಿಯಲ್ಲಿ ,ಹಾಗೂ ಅನುದಾನಿತ ಮತ್ತು ಅನುದಾನ ರಹಿತ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಡಪದ ಅಪ್ಪಣ್ಣ ಭಾವಚಿತ್ರ ಪೂಜೆ ಸಲ್ಲಿಸಿ ಜಯಂತಿ ಆಚರಿಸಿ ಕಛೇರಿಗೆ ಮಾಹಿತಿ ನೀಡುವಂತೆ ಸಭೆಯಲ್ಲಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಯಂತಿ ಅನುದಾನ ಗುಳುಂ,ಆಕ್ರೋಶ :- ಸಭೆಯಲ್ಲಿ ಹಾಜರಿದ್ದ ಹಡಪದ ಸಮಾಜ ಸಂಘಟನೆಯ ಮುಖಂಡರು 2023 ನೇ ಸಾಲಿನಲ್ಲಿ ಸಮಾಜದ ವತಿಯಿಂದ ಅದ್ದೂರಿ ಜಯಂತಿ ಆಚರಣೆ ಮಾಡಿದ್ದೇವೆ ಆದರೆ ಆ ಸಾಲಿನ ಅನುದಾನ ಬಂದಿಲ್ಲವೆಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯ ಅಧಿಕಾರಿ ಹಾಗೂ ಸಮಾಜದ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು.

ಸರಕಾರದ ವತಿಯಿಂದ ಆಚರಣೆ ಮಾಡುವ ಶಿವ ಶರಣರ ಜಯಂತಿಗಳಿಗೆ ಪ್ರತಿ ತಾಲುಕೀಗೆ ಸುಮಾರು ಇಪ್ಪತ್ತು ಸಾವಿರ ಅನುದಾನ ಸರಕಾರ ಬಿಡುಗಡೆ ಮಾಡುತ್ತಿದೆ. ಈ ಅನುದಾನ ನಮ್ಮ ಜಿಲ್ಲೆಯ ಬೇರೆ ತಾಲುಕೀನಲ್ಲಿ ಬಳಕೆಯಾಗುತ್ತಿದೆ. ನಮ್ಮ ಲಿಂಗಸಗೂರು ತಾಲುಕಿಗೆ ಬಂದ ಅನುದಾನವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಈ ಬಗ್ಗೆ ಜಿಲ್ಲಾ ಹಂತದ ಅಧಿಕಾರಿಗಳು ನಿಗಾ ವಹಿಸಲಿ.

 

ಶರಣಬಸವ ಈಚನಾಳ.

ಹಡಪದ ಸಮಾಜದ ಪ್ರಧಾನ ಕಾರ್ಯದರ್ಶಿ.

 

ಈ ಸಂಧರ್ಭದಲ್ಲಿ ಆರೋಗ್ಯಾಧಿಕಾರಿ ಅಮರೇಶ ಪಾಟೀಲ್,ಸಿಡಿಪಿಒ ಗೋಕುಲ್,ತಾ.ಪಂ .ಎಡಿ ಮಂಜುನಾಥ,ಹಡಪದ ಸಮಾಜದ ಜಿಲ್ಲಾಧ್ಯಕ್ಷ ಗದ್ದೇಪ್ಪ ಜಕ್ಕೆರಮಡು,ತಾಲೂಕಾಧ್ಯಕ್ಷ ಜಗನ್ನಾಥ ಚಿತ್ತಾಪುರ,ಮುತ್ತಣ್ಣ ಗುಡಿಹಾಳ,ಶರಣಬಸವ ,ಬಸವರಾಜ,ಅಮರೇಶ,ಚನ್ನಪ್ಪ,ಆದಪ್ಪ,ಮೌನೇಶ,ಮಂಜುನಾಥ,ವಿರೇಶ,ಮಲ್ಲಿಕಾರ್ಜುನ,ನಾಗರಾಜ,ಚುಡಾಮಣಿ ಚಿತ್ತಾಪೂರ ,ಆನಂದ,ಸೇರಿದಂತೆ ಇತರರಿದ್ದರು.

ವರದಿ :ರಮೇಶ ನಾಯಕ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!