ಯುವಶಕ್ತಿ ದೇಶದ ಭವಿಷ್ಯ. ನಿಮ್ಮಲ್ಲಿ ಮತದಾನದ ಅರಿವು ಅವಶ್ಯ – ಸೀತಲ್ ಓಲೇಕಾರ್.
ಯವ ಮತದಾರರಿಗೆ ಮತದಾನದ ಅರಿವು ಅವಶ್ಯ; ಐ.ಬಿ.ದಂಡಿನ
ಗಜೇಂದ್ರಗಡ:ಸತ್ಯಮಿಥ್ಯ (ಸೆ -28).
ನಗರದ ಕೆಎಸ್ಎಸ್ ಪದವಿ ಪೂರ್ವ ಮಹಾವಿದ್ಯಾಲಯ ಗಜೇಂದ್ರಗಡ ಮತದಾರರ ಸಾಕ್ಷರತಾ ಕ್ಲಬ್ ಮತ್ತು ಎನ್ಎಸ್ಎಸ್ ಸಂಯುಕ್ತ ಆಶ್ರಯದಲ್ಲಿ ಬ್ಯಾಲೆಟ್ ಪೇಪರ್ ನಮೂನೆ ೬ ಮತ್ತು ಇವಿಎಮ್ ಮಾಹಿತಿ ಹಾಗೂ ಎನ್ ಎಸ್ ಎಸ್ ದಿನಾಚರಣೆಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಸೀತಲ ಓಲೇಕಾರ ಮಾತನಾಡಿ. ಯುವಕರು ಮತದಾನದ ಮಹತ್ವ ಅರಿತುಕೊಳ್ಳಬೇಕು. ನಮ್ಮ ಸಂವಿಧಾನ ನಮ್ಮನ್ನಾಳುವ ವ್ಯಕ್ತಿಯನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಮತದಾನ ಎಂಬ ಅವಕಾಶವನ್ನು ಕಲ್ಪಿಸಿದೆ.ನಮ್ಮ ದೇಶಕ್ಕೆ ಮಾನವ ಸಂಪನ್ಮೂಲ ಒಂದು ದೊಡ್ಡ ಕೊಡುಗೆ ಅದರಲ್ಲೂ ಯುವಕರು ದೇಶದ ಶಕ್ತಿಯಾಗಿದ್ದೀರಿ. ಈ ಪರಿಕಲ್ಪನೆ ಪ್ರತಿಯೊಬ್ಬ ಯುವಕರಲ್ಲಿ ಮೂಡಿದಾಗ ಮತದಾನದ ಪ್ರಕ್ರಿಯೇಗೊಂದು ಅರ್ಥ ಬರುತ್ತದೆ. ಕಡ್ಡಾಯವಾಗಿ ಮತದಾನ ಮಾಡುವುದು ಕರ್ತವ್ಯವಾಗಬೇಕು. ಅದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವದು ಯುವಕರ ಕೆಲಸವಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ, ಬಿ,ದಂಡಿನ ವಹಿಸಿ ಮಾತನಾಡಿ ಇಂದಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತಂತ್ರಜ್ಞಾನದ ಮಾಹಿತಿಯುಳ್ಳವರಾಗಿದ್ದು, ಅದನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿ ಮತ್ತು ಮತದಾನದ ವಿಷಯಕ್ಕೆ ಸಂಬಂಧಿಸಿದಂತೆಯೂ ಕೂಡಾ ಅದರ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ರೀತಿಯಲ್ಲಿ ಮತದಾನ ಮಾಡಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಕೆ.ಎಸ್.ಎಸ್.ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ಎಚ್.ಎನ್.ಗೌಡರ, ಮತದಾರರ ಸಾಕ್ಷರತಾ ಕ್ಲಬ್ ನ ಸಂಯೋಜಕರಾದ ಎಮ್.ಎ.ಮಳಗಾವಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರ್ ವಿ,ಪತ್ತಾರ, ಪಿ, ಎಸ್, ಹುಲ್ಲೂರ, ದೇವು ಕಟ್ಟಿಮನಿ, ಎಲ್,ಕೆ ಚಂದುಕರ, ಎಸ್ ಬಿ ಪೂಜಾರ್, ಎಸ್, ಎ, ನದಾಫ, ಎಸ್, ವೈ ಅವಧೂತ , ಕಾವ್ಯಶ್ರೀ, ಬಿ ಎಸ್ ಸಂಕನೂರ, ಸೇರಿದಂತೆ ಅನೇಕರು ಇದ್ದರು.
ವರದಿ : ಸುರೇಶ ಬಂಡಾರಿ.