ಕೊಪ್ಪಳ : ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಯಶಸ್ವಿ
ರೋಟರಿ ಕ್ಲಬ್ ಕೊಪ್ಪಳ , ಗಂಗಾವತಿ, ಸೌಭಾಗ್ಯ ಲಕ್ಷ್ಮಿ ವಿವಿಧೋದ್ದೇಶ ಸಂಘ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಕಾರ ಸೇವೆ ಅಮೋಘ:-ಬೊಮ್ಮಣ್ಣ ಅಕ್ಕಸಾಲಿ
ಕೊಪ್ಪಳ : ಸತ್ಯಮಿಥ್ಯ (ಜುಲೈ -31)
ಸಪ್ತಗಿರಿ ಆಸ್ಪತ್ರೆ ಬೆಂಗಳೂರು ವೈದ್ಯರ ಸೇವೆ ಮತ್ತು ಸೌಭಾಗ್ಯ ಲಕ್ಷ್ಮಿ ಸಹಕಾರಿ ಸಂಘ ಕೊಪ್ಪಳ ,ರೋಟರಿ ಕ್ಲಬ್ ರೈಸ್ ಬೌಲ್ ಗಂಗಾವತಿ ಸಹಕಾರ , ಅಮೋಘವಾದ ಸೇವೆ ಸ್ಮರಣೀಯ ಎಂದು ಕೊಪ್ಪಳ ಜಿಲ್ಲಾ ರೋಟರಿ ಕ್ಲಬ್ ಮತ್ತು ಸೌಭಾಗ್ಯಲಕ್ಷ್ಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಬೊಮ್ಮಣ್ಣ ಅಕ್ಕಸಾಲಿ ತಿಳಿಸಿದರು.
ಕೊಪ್ಪಳದ ಸೌಭಾಗ್ಯ ಲಕ್ಷ್ಮಿ ವಿವಿಧೋದ್ದೇಶ ಸೌಹಾರ್ದ ಸಂಘ ನಿಯಮಿತ , ರೋಟರಿ ಕ್ಲಬ್ ಕೊಪ್ಪಳ , ರೋಟರಿ ಕ್ಲಬ್ ರೈಸ್ ಬೌಲ್ ಗಂಗಾವತಿ ರವರ ಜಂಟಿ ಸಹಕಾರದೊಂದಿಗೆ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಸೌಭಾಗ್ಯ ಲಕ್ಷ್ಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕಾರ್ಯಾಲಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಮುಕ್ತಾಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎರಡು ದಿನದ ನಡೆದ ಶಿಬಿರದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗಳು ನಡೆದವು.
ಪಟ್ಟಣದ ಹಿರಿಯರಾದ ಮತ್ತು ಮಾರ್ಗದರ್ಶಕರಾದ ಪ್ರಾಣೇಶೈರಾವ್ ದೇಸಾಯಿ ಮಾತನಾಡುತ್ತಾ ಸೌಭಾಗ್ಯ ಲಕ್ಷ್ಮಿ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ರೋಟರಿ ಕ್ಲಬ್, ಸಪ್ತಗಿರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಇಂತಹ ಶಿಬಿರ ಆಯೋಜನೆ ಮಾಡಿದ್ದು ಅತ್ಯಂತ ಬಡ ಕುಟುಂಬಗಳಿಗೆ ವರದಾನವಾಗಿವೆ. ಇನ್ನು ಮುಂದಿನ ದಿನಮಾನಗಳಲ್ಲಿ ಸಾಕಷ್ಟು ಪ್ರಚಾರ ಮಾಡಿ ಇಂತಹ ಕಾರ್ಯಗಳನ್ನು ಮಾಡಿದರೆ ಸಾರ್ವಜನಿಕರಿಗೆ ಉಪಯುಕ್ತವಾಗುತ್ತದೆ.ಸಾರ್ವಜನಿಕರು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಜಗದೀಶ ಎಚ್. ಕಟಗಿ ನೆರವೇರಿಸಿದರು.
ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ವೈದ್ಯರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಸನ್ಮಾನಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಈಶ್ವರ್ ಹೊಸಪೇಟೆ ರೋಟರಿ ಕ್ಲಬ್ ಸಂಚಾಲಕರು , ವಾಯ್.ಕೆ. ಮೇಟಿ, ಗೀತಾ ಚೌದ್ರಿ ಅಧ್ಯಕ್ಷರು ರೋಟರಿ ಕ್ಲಬ್ ಗಂಗಾವತಿ, ಪ್ರಾಣೇಶ್ ರಾವ್ ದೇಸಾಯಿ, ಚೆನ್ನಪ್ಪ ತಳವಾರ್ ಮಾಜಿ ರೋಟರಿ ಕ್ಲಬ್ ಅಧ್ಯಕ್ಷರು, ವೈದ್ಯರಾದ ಡಾ. ಫರ್ವಿಜ್,ಡಾ. ಧನಂಜಯ,ಡಾ. ಪ್ರತೀಕ್, ಡಾ. ದಿನೇಶ,ಡಾ. ನಿರಂಜನ,ಡಾ. ಪೃಥ್ವಿ, ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು ಸಪ್ತಗೇರಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಮತ್ತು ಸೌಭಾಗ್ಯಲಕ್ಷ್ಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪದಾಧಿಕಾರಿಗಳು ಸಾರ್ವಜನಿಕರು ಇತರರು ಇದ್ದರು.
ವರದಿ :ಚೆನ್ನಯ್ಯ ಹಿರೇಮಠ ಕುಕನೂರ