ಹೊಟ್ಟೆಯಲ್ಲಿ ನಾಲ್ಕುವರೇ ಕೇಜಿ ಗಡ್ಡೆ – ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ಕೊಪ್ಪಳದ ಡಾಕ್ಟರ್.
ಕೊಪ್ಪಳ ಮಹಾವಿದ್ಯಾಲಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ.
ಕೊಪ್ಪಳ : ಸತ್ಯ ಮಿಥ್ಯ ( ಜು -15)
ಕೊಪ್ಪಳ ಮಹಾವಿದ್ಯಾಲಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ದಿನಾಂಕ:೦೩-೦೬-೨೦೨೪ ರಂದು, ಕೊಪ್ಪಳ ತಾಲೂಕಿನ ಬಿಸರಳ್ಳ ಗ್ರಾಮದ ಮಮತಾಜ ಗಂಡ ಹುಸೆನಸಾಬ (ಹೆಸರು ಬದಲಾಯಿಸಿ) ವಯಸ್ಸು ೪೫ ಹೊಟ್ಟೆನೋವಿನ ತೊಂದರೆಯಿಂದ ದಾಖಲಾಗಿದ್ದರು .
ಅವರನ್ನು ಪರೀಕ್ಷೆ ಮಾಡಿದ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ ತಜ್ಞ ವೈದ್ಯಾರಾದ ಡಾ.ಬಿ.ಹೆಚ್.ನಾರಾಯಣಿಯವರು ಅಲ್ಟ್ರಾಸೌಂಡ್ ಸಿ.ಟಿ.ಸ್ಕ್ಯಾನಿಂಗ್, ರಕ್ತ ಪರಿಕ್ಷೆಗಳ ಮೂಲಕ ದೊಡ್ಡದಾದ ಗರ್ಭಾಶಯದಿಂದ ಹುಟ್ಟಿದ ಗಡ್ಡೆ ಇರುವುದು ಪತ್ತೆ ಹಚ್ಚುತ್ತಾರೆ , ರೋಗ ನಿರ್ಣಯ ಮಾಡಿ ಯುಟರಸ್ ಇರುವುದೆಂದು ಶಸ್ತ್ರಚಿಕಿತ್ಸೆ ಮಾಡಿ ಗಡ್ಡೆಯನ್ನು ತೆಗೆಯುವ ನಿರ್ಧಾರ ಕೈಗೊಂಡರು.
ದಿನಾಂಕ: ೧೧-೦೬-೨೦೨೪ ರಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕ್ಲಿಷ್ಟವಾದ ಶಸ್ತ್ರಚಿಕಿತ್ಸೆಯನ್ನು ಡಾ.ಬಿ.ಹೆಚ್.ನಾರಾಯಣಿ ಇವರ ತಂಡ ಕೈಗೊಂಡು ೪.೫ ಕೆ.ಜಿ ತುಕದ ಗರ್ಭಾಶಯದಿಂದ ಹುಟ್ಟಿದ ಗಡ್ಡೆಯನ್ನು ೩ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ ರೋಗಿಗೆ ಯಾವ ತೊಂದರೆ ಆಗದಂತೆ ತೆಗೆಯಲಾಯಿತು.
ಸಾಮಾನ್ಯವಾಗಿ ಅಂಡಾಶಯದಿಂದ ಹುಟ್ಟುವ ಗಡ್ಡೆಗಳು ಸುಮಾರು ೮ ರಿಂದ ೧೦ ಕೆ.ಜಿಗಳ ವರೆಗೆ ತೂಕವನ್ನು ಹೊಂದಿರುತ್ತದೆ. ಗರ್ಭಾಶಯದಿಂದ ಹುಟ್ಟುವ ಗಡ್ಡೆಗಳ ಸಾಮನ್ಯವಾಗಿ ೫೦೦ ರಿಂದ ೧೦೦೦ ಗ್ರಾಮ್ ತೂಕವನ್ನು ಹೊಂದಿರುತ್ತದೆ. ಆದರೆ ಈ ಪ್ರಕರಣದಲ್ಲಿ ಬಿಸರಳ್ಳಿ ಗ್ರಮಾದ ರೋಗಿಯಲ್ಲಿ ತೆಗೆದ ಗರ್ಭಾಶಯದಿಂದ ಹುಟ್ಟಿದ ಗಡ್ಡೆ ೪.೫ ಕೆ.ಜಿ (೪೫೦೦ ಗ್ರಾಮ) ತೂಕವನ್ನು ಹೊಂದಿದ್ದು, ಅತೀ ವಿರಳವಾದ ಗಡ್ಡೆಯಾಗಿದ್ದು, ಸುತ್ತಮುತ್ತಲಿನ ದೊಡ್ಡ ದೊಡ್ಡ ಆಸ್ಪತ್ರೆಗಳ ತಜ್ಞವೈದ್ಯರುಗಳು ಶಸ್ತ್ರಚಿಕಿತ್ಸೆಯನ್ನು ಮಾಡಲು ಅಸಯಕತೆಯನ್ನು ವ್ಯಕ್ತಪಡಿಸಿದ್ದರು. ಇಂತಹ ಕಠಿಣವಾದ ಶಸ್ತ್ರ ಚಿಕಿತ್ಸೆಯನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸವಾಲಾಗಿ ಸ್ವೀಕರಿಸಿ ಕ್ಲಿಷ್ಟವಾದ ಶಸ್ತ್ರ ಚಿಕಿತ್ಸೆ ಮಾಡಿ (ಮಮತಾಜ್‌ಬೀ) ಮರು ಜೀವಧಾನವನ್ನು ಕೊಟ್ಟಿರುತ್ತಾರೆ. ಶಸ್ತ್ರ ಚಿಕಿತ್ಸೆಯ ನೇತೃತ್ವವನ್ನು
ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ ಮುಖ್ಯಸ್ಥರಾದ ಡಾ.ಬಿ.ಹೆಚ್.ನಾರಾಯಣಿ ರವರು ವಹಿಸಿದ್ದರು, ಇವರಿಗೆ ಡಾ.ಧನಲಕ್ಸ್ಮಿ .ಕೆ.ಆರ್, ಡಾ.ಸೀಮಾ.ಬಿ.ಎನ್ ಹಾಗೂ ಡಾ.ರಾಜೇಶ.ಬಿ.ಎನ್ ಸಹಕರಿಸಿದರು. ಅರವಳಿಕೆ ವಿಭಾಗದ ಡಾ. ಗೋಪಾಲ್ ಗೋಟುರು ಅರವಳಿಕೆಯನ್ನು ಮಾಡಿ ಶಸ್ತ್ರ ಚಿಕಿತ್ಸೆ ಉದ್ದಕ್ಕೂ ರೋಗಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು, ಇಂತಹ ಕ್ಲೀಷ್ಟಕರವಾದ ಶಸ್ತ್ರ ಚಿಕಿತ್ಸೆಯನ್ನು ನೆರವೆರಿಸಿ ಮರು ಜೀವಧಾನ ಕೊಟ್ಟ ವೈದ್ಯರನ್ನು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೊಪ್ಪಳದ, ಡೀನ್ ಡಾ.ವಿಜಯನಾಥ ಇಟಗಿ, ಜಿಲ್ಲಾ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ವೇಣುಗೋಪಾಲ, ಜಿಲ್ಲಾ ಬೋಧಕ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಡಾ.ಸುಶೀಲಕುಮಾರ, ಜಿಲ್ಲಾ ಬೋಧಕ ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯರಾದ ಡಾ.ಎಸ್.ಸಿ.ಹಿರೆಮಠ ಇವರು ಅಭಿನಂದಿಸಿದ್ದಾರೆ.
ವರದಿ : ಹಿರೇಮಠ್.