ಕೊಡಗಾನೂರ ಗ್ರಾಮದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ .
ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಿ -ಪಡಿಯಪ್ಪ ಮಾದರ.

ಕೊಡಗಾನೂರ ಗ್ರಾಮದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ
ಗಜೇಂದ್ರಗಡ :ಸತ್ಯಮಿಥ್ಯ ( ಜುಲೈ -15)
ಮಲೇರಿಯಾ ಮತ್ತು ಡೆಂಗ್ಯೂ ಸೊಳ್ಳೆಗಳಿಂದ ಹರಡುವ ಕಾಯಿಲೆಗಳಾಗಿದ್ದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವ ಮೂಲಕ ಈ ಕಾಯಿಲೆಗಳು ಹರಡದಂತೆ ತಡೆಯಬಹುದು ಎಂದು ಸಮುದಾಯ ಆರೋಗ್ಯ ಅಧಿಕಾರಿ ಪಡಿಯಪ್ಪ ಮಾದರ ತಿಳಿಸಿದರು.
ಗಜೇಂದ್ರಗಡ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆ ಕೊಡಗಾನೂರ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಗಜೇಂದ್ರಗಡ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ವತಿಯಿಂದ ನಡೆದ ಮಲೇರಿಯಾ ಮಾಸಾಚರಣೆ ಮತ್ತು ಡೆಂಗ್ಯೂ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡೆಂಗ್ಯೂ ನಿಯಂತ್ರಣ ಮೀರಿದರೆ ಮಾರಣಾಂತಿಕವೂ ಹೌದು ಆದುದರಿಂದ ವಿದ್ಯಾರ್ಥಿಗಳು ಸ್ವ ಅರಿವು ಮತ್ತು ಪರಿಸರದಲ್ಲಿ ಇತರರಿಗೆ ಮಾಹಿತಿ ನೀಡುವ ಮೂಲಕ ಈ ಕಾಯಿಲೆಯ ಬಗ್ಗೆ ಜನಜಾಗೃತಿ ಮಾಡಬಹುದು ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಹನುಮಂತ ರಾಮಜಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೇತ್ರ ತಜ್ಞರಾದ ಶರಣಪ್ಪ ಸೋಮನಕಟ್ಟಿ ತಪಾಸಣೆ ಮಾಡಿ ಮಾತನಾಡಿದ ಅವರು ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದ ಅಂಗ. ದೃಷ್ಟಿ ಇಲ್ಲದಿದ್ದರೆ ಜಗತ್ತೇ ಕತ್ತಲು. ಪ್ರಪಂಚದಾದ್ಯಂತ ಅನೇಕ ಜನರು ವಿವಿಧ ರೀತಿಯ ದೃಷ್ಟಿ ದೋಷಗಳಿಂದ ಬಳಲುತ್ತಿದ್ದು ಸಂಕಷ್ಟಮಯ ಜೀವನ ನಡೆಸುತ್ತಿದ್ದಾರೆ. ಇಂತಹವರ ಬದುಕಿನಲ್ಲಿ ಭರವಸೆ ತುಂಬಲು ಯುವ ಜನತೆ ನೇತ್ರದಾನ ಮಾಡುವ ಸತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನೇತ್ರದಾನದಿಂದ ಇನ್ನೊಬ್ಬರ ಬದುಕಿಗೆ ಬೆಳಕನ್ನು ನೀಡಬಹುದು ಎಂದರು.
ಆರೋಗ್ಯ ನಿರೀಕ್ಷ ಅಧಿಕಾರಿ ವಿ ಎಸ್ ಹಿರೇಮಠ ಮಾಹಿತಿ ನೀಡಿ, ಡೆಂಗ್ಯೂ ಜ್ವರವೂ ಈಡೀಸ್ ಇಜಿಪ್ಟ್ ಎಂಬ ಸೋಂಕು ತಗುಲಿದ ಹೆಣ್ಣು ಸೊಳ್ಳೆಯ ಕಡಿತದಿಂದ ಹರಡುತ್ತದೆ. ಸುತ್ತ-ಮುತ್ತಲಿನ ಪರಿಸರ ಹಾಗೂ ಮನೆಗಳ ಮೇಲ್ಛಾವಣೆಗಳಲ್ಲಿ ನೀರು ನಿಲ್ಲದ ಹಾಗೆ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಹಾಗೂ ಸೊಳ್ಳೆ ಕಡಿತದಿಂದ ಸ್ವಯಂ ರಕ್ಷಣಾ ವಿಧಾನ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಸುವರ್ಣ ನೆರೇಗಲ್ ಮಠ,ಶಾಂತಾ ಕರಡಿ. ಅಖಿಲಾ ದಾಸರ. ಅತಿಥಿ ಶಿಕ್ಷಕಿಯರಾದ ಶಿಲ್ಪಾ ಗುಡುದೂರ, ಪಾರ್ವತಿ ಚನ್ನಪ್ಪನವರ, ಆಶಾ ಕಾರ್ಯಕರ್ತೆ ತರುಣ ಕಳ್ಳಿಮಠ, ಉಪಸ್ಥಿತರಿದ್ದರು
ವರದಿ : ಸುರೇಶ ಬಂಡಾರಿ.