
ಬಿಜೆಪಿ : ರೋಣ-ಡಂಬಳ ಮಂಡಲ ಅಧ್ಯಕ್ಷರಾಗಿ ಮಲ್ಲಾಪುರ – ಹಾರೋಗೇರಿ ಆಯ್ಕೆ.
ಗಜೇಂದ್ರಗಡ -ಸತ್ಯಮಿಥ್ಯ (ಫೆ -05).
ನಗರದ ಭಾಜಪ ಕಚೇರಿಯಲ್ಲಿ ರೋಣ ವಿಧಾನ ಸಭಾ ಕ್ಷೇತ್ರದ ರೋಣ ಹಾಗೂ ಡಂಬಳ ಮಂಡಲದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ರೋಣ ಮಂಡಲದ ಅಧ್ಯಕ್ಷರನ್ನಾಗಿ ಉಮೇಶ ಮಲ್ಲಾಪುರ, ಹಾಗೂ ಡಂಬಳ ಮಂಡಲದ ನೂತನ ಅಧ್ಯಕ್ಷರಾಗಿ ಅಂದಪ್ಪ ಹಾರೋಗೇರಿ ಅವರನ್ನು ಆಯ್ಕೆ ಮಾಡಿದರು.ಸಂಘಟನಾ ಪರ್ವದ ಸಹಚುನಾವಣಾ ಅಧಿಕಾರಿಗಳಾಗಿ ಎಮ್ ಎಸ್ ಕರಿಗೌಡರ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕಳಕಪ್ಪ ಬಂಡಿ ಮಾತನಾಡಿ ನೂತನ ಅಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸಿ ಮುಂಬರುವ ಜಿಲ್ಲಾ,ತಾಲೂಕು ಪಂಚಾಯತ್ ಚುನಾವಣೆ ಮತ್ತು ಪುರಸಭೆ ಚುನಾವಣೆಗಳು ಬರಲಿದ್ದು ಭೂತ್ ಮಟ್ಟದಿಂದ ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಪಕ್ಷಕ್ಕೆ ನಿಮ್ಮ ಸೇವೆಯನ್ನು ಗುರುತಿಸಿ ಈ ಜವಾಬ್ದಾರಿ ನೀಡಿರುತ್ತಾರೆ ಅದನ್ನು ಸಮರ್ಥವಾಗಿ ನಿಭಾಯಿಸಿ ಎಂದರು.
ರೋಣ ಮಂಡಲ ಮಾಜಿ ಅಧ್ಯಕ್ಷರಾದ ಮುತ್ತಣ್ಣ ಕಡಗದ ಮಾತನಾಡಿ. ನನ್ನ ಅವಧಿಯಲ್ಲಿ ಶಕ್ತಿ ಮೀರಿ ಪಕ್ಷ ಸಂಘಟನೆ ಮಾಡಿದ್ದೇನೆ. ಅನೇಕ ಹಿರಿಕಿರಿಯರು ನನ್ನ ಅವಧಿಯಲ್ಲಿ ಬೆಂಬಲವಾಗಿ ನಿಂತು ಸಲಹೆ ಸೂಚನೆ ನೀಡಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕರಿಸಿದ್ದಾರೆ. ಕ್ಷೇತ್ರದ ಎಲ್ಲ ಮುಖಂಡರಿಗೂ ಧನ್ಯವಾದಗಳು. ನೂತನವಾಗಿ ಆಯ್ಕೆಯಾದ ನೂತನ ಅಧ್ಯಕ್ಷರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ,ಸಂಘಟನಾ ಪರ್ವದ ಚುನಾವಣಾ ಅಧಿಕಾರಿಗಳಾದ ಶಶಿಮೌಳಿ ಕುಲಕರ್ಣಿ,ರವಿ ಕರಿಗಾರ,ಬೀರಪ್ಪ ಬಂಡಿ, ಕೊರ್ಲಹಳ್ಳಿ,ಎಚ್ ಕೆ ಹಟ್ಟಿಮನಿ,ಈಶಪ್ಪ ರಂಗಪ್ಪನವರ,ರಾಜೇಂದ್ರ ಘೋರ್ಪಡೆ,ಉಮೇಶ ಚನ್ನು ಪಾಟೀಲ್,ವೆಂಕನಗೌಡ ಪಾಟೀಲ,ಅಶೋಕ ವನ್ನಾಲ,ಶಿವಾನಂದ ಮಠದ ಹಾಗೂ ಪಕ್ಷದ ಮುಖಂಡರು ಉಪಸ್ಥರಿದ್ದರು.
ವರದಿ : ಸುರೇಶ ಬಂಡಾರಿ.