ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ-ಕನ್ನಡಿಗರ ಗಂಡುಮೆಟ್ಟಿದ ನಾಡು ಜಕ್ಕಲಿ ಗ್ರಾಮ:ಜಿ.ಎಸ್. ಪಾಟೀಲ್

ಕನ್ನಡಿರ ಗಂಡುಮೆಟ್ಟಿದ ನಾಡು ಜಕ್ಕಲಿ ಗ್ರಾಮದಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ.
ನರೇಗಲ್ – ಸತ್ಯಮಿಥ್ಯ (ಜ -19).
ಕರ್ನಾಟಕದ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಮಡಿದ ವೀರ ಕನ್ನಡಿಗ ಅಂದಾನಪ್ಪ ದೊಡ್ಡಮೇಟಿಯವರ ಸ್ಮರಣೆ ಮತ್ತು ನೆನಪುಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ವಿಮರ್ಶೆ ಮಾಡಲಾಗುವದು ಎಂದು ಶಾಸಕ ಜಿ. ಎಸ್. ಪಾಟೀಲ ನುಡಿದರು.
ಅವರು ಹತ್ತನೇ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಮಾತೆ ಭುವನೇಶ್ವರಿ ತಾಯಿಯ ರಥಯಾತ್ರೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಾತನಾಡುತ್ತ. ಈ ಸಮ್ಮೇಳನ ಕನ್ನಡಿಗರ ಪುಣ್ಯ ಭೂಮಿ ದೊಡ್ಡಮೇಟಿಯವರ ಜಕ್ಕಲಿ ಗ್ರಾಮ. ಇಲ್ಲಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡುತ್ತಿರುವದು ಹೆಮ್ಮೆಯ ವಿಷಯ.ಇಂದಿನಿಂದ ಮೂರು ದಿನಗಳ ಕಾಲ ನಿರಂತರ ಗಜೇಂದ್ರಗಡದ ಜಗದ್ಗುರು ತೊಂಟದಾರ್ಯ ಶಾಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ,ಕಲೆ, ವಾಸ್ತುಶಿಲ್ಪದ ಅನಾವರಣಗೊಳ್ಳಲಿದೆ. ಎಲ್ಲ ಕನ್ನಡಮನಸುಗಳು, ಸಾಹಿತ್ಯಾಸಕ್ತರು, ಕ್ಷೇತ್ರದ ಜನತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಿದರು .
ಈ ಸಂದರ್ಭದಲ್ಲಿ ಸಾವಿರಾರು ಕನ್ನಡ ಮನಸುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ವರದಿ : ಚನ್ನು. ಎಸ್.